ಬೆಂಗಳೂರು : ನಗರದ ಡಿ.ಜೆ ಹಳ್ಳಿ ಹಾಗೂ ಕೆ.ಜೆ ಹಳ್ಳಿಯಲ್ಲಿ ನಡೆದ ಗಲಭೆ ಹಿಂದೆ ಕಾಂಗ್ರೆಸ್ ನಾಯಕರ ಕೈವಾಡ ಇದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ವಿಶ್ವನಾಥ್ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊನ್ನೆ ನಡೆದ ಘಟನೆ ಪೂರ್ವ ನಿಯೋಜಿತ. ಫೇಸ್ ಬುಕ್ ಪೋಸ್ಟ್ ನೆಪ ಮಾತ್ರ. ಎಸ್ಡಿಪಿಐ ಪಿಎಫ್ ಐ ಅವರಿಗೆ ಕಾನೂನು ಮೇಲೆ ಗೌರವ ಇಲ್ಲ ಎಂದು ಗುಡುಗಿದರು.
ಇದೇ ವೇಳೆ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ವಿಶ್ವನಾಥ್, ಕೆಪಿಸಿಸಿ ಅಧ್ಯಕ್ಷರ ಹೇಳಿಕೆ ರಾಜಕೀಯವಾಗಿದೆ. ಕೆಲ ರಾಜಕಾರಣಿಗಳು ಈ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆ ಇದೆ. ಮುಸ್ಲಿಂ ಸಮುದಾಯ ಒಲೈಸುವ ಸಲುವಾಗಿ ದಲಿತ ಶಾಸಕನನ್ನ ಕೈ ಬಿಡುತ್ತಿದ್ದಾರೆ ಎಂದರು.
ಇನ್ನು ಕಾಂಗ್ರೆಸ್, ಎಸ್ಡಿಪಿಐ, ಪಿಎಫ್ ಐ ಮೂರು ಒಂದೇ. ದೇಶದ ವಿರುದ್ಧ ಕೆಲಸ ಮಾಡುವುದೇ ಇವರ ಉದ್ದೇಶ ಎಂದ ವಿಶ್ವನಾಥ್, ಶಾಸಕ ದೂರು ಕೊಡದಿದ್ರು ಸೂಮೊಟೋ ಕೇಸ್ ದಾಖಲು ಮಾಡಿಕೊಳ್ಳುತ್ತೇವೆ. ಡಿಜಿ ಹಳ್ಳಿ ಕೆಜಿ ಹಳ್ಳಿಯಲ್ಲಿ ನಡೆಯುವ ಎಲ್ಲ ಅಕ್ರಮಗಳಿಗೂ ಆ ಸಮುದಾಯ ಕಾರಣ. ಅಲ್ಲಿ ಉಚಿತ ನೀರು, ಕರೆಂಟ್ ಎಲ್ಲ ಬಳಸಿಕೊಳ್ಳುತ್ತಿರುವುದು ಇವರೇ. ಈ ಪ್ರಕರಣದ ಹಿಂದೆ ನೇರವಾಗಿ ಕಾಂಗ್ರೆಸ್ ನಾಯಕರ ಕೈವಾಡ ಇದೆ ಎಂದು ಆರೋಪಿಸಿದ್ದಾರೆ.








