Bangalore | ಟೆಕ್ ಭಾರತ್ – 2022 ಕ್ಕೆ ಬೆಂಗಳೂರಿನಲ್ಲಿ ಚಾಲನೆ
ಬೆಂಗಳೂರು : ನಗರದ ಜಿಕೆವಿಕೆಯ ಡಾ. ಬಾಬು ರಾಜೇಂದ್ರ ಪ್ರಸಾದ್ ಅಂತರಾಷ್ಟ್ರೀಯ ಸಮಾವೇಶ ಭವನದಲ್ಲಿ ಟೆಕ್ ಭಾರತ್ 2022ಗೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ಚಾಲನೆ ನೀಡಿದ್ದಾರೆ.
ಕಾರ್ಯಕ್ರಮದಲ್ಲಿ ಶ್ರೀ ಕ್ರಿಸ್ ಗೋಪಾಲಕೃಷ್ಣ, ಮಾಜಿ ಸಿಇಓ ಇನ್ ಫೋಸಿಸ್ ಹಾಗೂ ಅಧ್ಯಕ್ಷರು, ಆಕ್ಸಿಲರ್ ವೆಂಚರ್ಸ, ಪ್ರೋ.ಸುಬ್ಬಣ್ಣ ಅಯ್ಯಪ್ಪನ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಟೆಕ್ ಭಾರತ್ 2022 ಉತ್ಪಾದಕರು, ಸಂಶೋಧಕರು. ಹೂಡಿಕೆದಾರರು, ಶಿಕ್ಷಣತಜ್ಞರು, ಖರೀದಿದಾರರು ಮತ್ತು ಸ್ಥಳೀಯ ಹಾಗೂ ಅಂತಾರಾಷ್ಟ್ರೀಯ ಕೃಷಿ ತಂತ್ರಜ್ಞಾನ, ಆಹಾರ ತಂತ್ರಜ್ಙಾನ ಹಾಗೂ ಆಹಾರ ಯಂತ್ರೀಕರಣವನ್ನು ಪ್ರತಿನಿಧಿಸುವ ನಿರ್ಣಾಯಗಾರರ ಸಮಾಗಮನಕ್ಕೆ ಸೂಕ್ತ ವೇದಿಕೆ ಒದಗಿಸುತ್ತಿದೆ.
ಕಾರ್ಯಕ್ರಮದಲ್ಲಿ ಪ್ರಮುಖವಾಗಿ ವಿಶ್ವವಿದ್ಯಾನಿಲಯ ಹಾಗೂ ರಾಷ್ಟ್ರೀಯ ಸಂಸ್ಥೆಗಳ ನಿರ್ವಾಹಕರು, ಸರ್ಕಾರಿ ಇಲಾಖೆಗಳ ಪ್ರತಿನಿಧಿಗಳು, ಪ್ರಗತಿಪರ ರೈತರು, ನಿಯಂತ್ರಿತ ಸಂಸ್ಥೆಗಳ ಆರಂಭಿಕ ಉದ್ಯಮಿದಾರರು ಹಾಗೂ ಕೃಷಿ ಮತ್ತು ಆಹಾರ ಕ್ಷೇತ್ರಗಳೊಂದಿಗೆ ವ್ಯವಹಿಸುವ ಇತರ ವ್ಯಕ್ತಿಗಳು ಭಾಗವಹಿಸಿದ್ದಾರೆ.
ಟೆಕ್ ಭಾರತ್ 2022 ಆಹಾರ ಮತ್ತು ಕೃಷಿ ಸವಾಲುಗಳಿಗೆ ಪರಿಹಾರವನ್ನು ಕಂಡುಕೊಳ್ಳಲು, ಕೃಷಿ ಮತ್ತು ಆಹಾರ ಕ್ಷೇತ್ರಗಳ ನಡುವಿರುವ ಸಮಸ್ಯಗಳನ್ನು ಪರಿಹರಿಸುವ ಹೊಸ ತಂತ್ರಜ್ಞಾನವನ್ನು ಆನ್ವೇಶಿಸಲು, ವೃತ್ತಿಪರೊಂದಿಗೆ ಸಂಪರ್ಕಿಸುವ ಮೂಲಕ ವ್ಯಾಪಾರ ಉದ್ಯಮಕ್ಕೆ ಪಾಲುದಾರನ್ನು ಗುರುತಿಸಲು, ಸಂಭಾವ್ಯ ಸ್ಥಾಪಕರ ನೆಲೆಯನ್ನು ಹೆಚ್ಚಿಸಲು, ಉದ್ಯಮ ಪರಿಣಿತರು, ತಂತ್ರಜ್ಞಾನ ಪರಿಹಾರ ಪೂರೈಕೆದಾರರು, ಸಂಶೋಧನೆ ಹಾಗೂ ನೀತಿ ರಚನಾಕಾರರನ್ನು ಜಾಗತಿಕ ಮಟ್ಟದಲ್ಲಿ ಸಂಪರ್ಕಿಸುವ ಮೂಲಕ ವೃತ್ತಿ ಜೀವನವನ್ನು ರೂಪಿಸಿಕೊಳ್ಳಲು ಹಾಗೂ ವೈಯುಕ್ತಿಕ ಕಂಪನಿಯ ಬಗ್ಗೆ ಬೇಡಿಕೆಯನ್ನು ಹೆಚ್ಚಿಸಿಕೊಳ್ಳು ಈ ವೇದಿಕೆ ಸಹಕಾರಿಯಾಗಲಿದೆ. bangalore-Tech Bharat B C Patil