Bank holidays: ಆಗಸ್ಟ್ನಲ್ಲಿ 13 ದಿನಗಳ ಕಾಲ ಬ್ಯಾಂಕ್ ರಜಾದಿನಗಳು …
ಭಾರತೀಯ ರಿಸರ್ವ್ ಬ್ಯಾಂಕ್ (RBI) ಆಗಸ್ಟ್ ತಿಂಗಳ ಬ್ಯಾಂಕ್ ರಜೆಗಳ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಿದೆ. ಆರ್ಬಿಐ ಕ್ಯಾಲೆಂಡರ್ ಪ್ರಕಾರ, ಆಗಸ್ಟ್ ತಿಂಗಳಲ್ಲಿ ಒಟ್ಟು 13 ದಿನಗಳ ಕಾಲ ಬ್ಯಾಂಕ್ಗಳು ಮುಚ್ಚಲ್ಪಡುತ್ತವೆ.
ಖಾಸಗಿ ಮತ್ತು ಸರ್ಕಾರಿ ಬ್ಯಾಂಕ್ಗಳು ಗೆಜೆಟೆಡ್ ರಜಾದಿನಗಳು, ಶಾಸನಬದ್ಧ ರಜಾದಿನಗಳು ಮತ್ತು ಭಾನುವಾರದಂದು ಕ್ಲೋಸ್ ಆಗಿರಲಿದೆ ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರದಂದು ಬ್ಯಾಂಕ್ಗಳು ರಜಾ ಇರುತ್ತದೆ. . ಈ ರಜಾದಿನಗಳನ್ನು ಹೊರತುಪಡಿಸಿ, ವಿವಿಧ ರಾಜ್ಯಗಳಲ್ಲಿ ಅನೇಕ ಪ್ರಾದೇಶಿಕ ಹಬ್ಬಗಳಿವೆ. ಇಂತಹ ಪ್ರಾದೇಶಿಕ ಹಬ್ಬಗಳ ಸಂದರ್ಭದಲ್ಲಿ ವಿವಿಧ ರಾಜ್ಯಗಳಲ್ಲಿನ ಬ್ಯಾಂಕ್ಗಳ ಸ್ಥಳೀಯ ಶಾಖೆಗಳನ್ನು ಸಹ ಮುಚ್ಚಲಾಗುತ್ತದೆ.
ರಜಾದಿನಗಳಲ್ಲಿ ಆನ್ಲೈನ್ ಬ್ಯಾಂಕಿಂಗ್ ಸೇವೆಗಳು ಲಭ್ಯವಿರುತ್ತವೆ.
ಆಗಸ್ಟ್ 2022 ರ ಬ್ಯಾಂಕ್ ರಜಾದಿನಗಳ ಸಂಪೂರ್ಣ ಪಟ್ಟಿ ಇಲ್ಲಿದೆ.
ಆಗಸ್ಟ್ 1: ಭಾನುವಾರ
ಆಗಸ್ಟ್ 8, 9: ಮೊಹರಂ ಹಬ್ಬ
ಆಗಸ್ಟ್ 11, 12: ರಕ್ಷಾ ಬಂಧನ
ಆಗಸ್ಟ್ 13: ದೇಶಪ್ರೇಮಿಗಳ ದಿನ
ಆಗಸ್ಟ್ 14: ಎರಡನೇ ಶನಿವಾರ
ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆ
ಆಗಸ್ಟ್ 16: ಪರ್ಷಿಯನ್ ಹೊಸ ವರ್ಷ (ಶಾಹೆನ್ಶಾಹಿ)
ಆಗಸ್ಟ್ 18: ಜನ್ಮಾಷ್ಟಮಿ
ಆಗಸ್ಟ್ 19: ಶ್ರವಣ ವದ/ಕೃಷ್ಣ ಜಯಂತಿ
ಆಗಸ್ಟ್ 20: ಶ್ರೀ ಕೃಷ್ಣಾಷ್ಟಮಿ
ಆಗಸ್ಟ್ 22: ಭಾನುವಾರ
ಆಗಸ್ಟ್ 28: ನಾಲ್ಕನೇ ಶನಿವಾರ
ಆಗಸ್ಟ್ 29: ಭಾನುವಾರ
ಆಗಸ್ಟ್ 31: ಗಣೇಶ ಚತುರ್ಥಿ