ಬೆಂಗಳೂರು : ಉದ್ಯಮಿ ಮೆಹುಲ್ ಚೋಕ್ಸಿ, ವಿಜಯ್ ಮಲ್ಯ ಅವರ ಕಂಪನಿ ಸೇರಿದಂತೆ 50 ಉದ್ಯಮಿಗಳ 68,607 ಕೋಟಿ ರೂ ಸುಸ್ತಿ ಸಾಲವನ್ನು ಭಾರತೀಯ ರಿಸರ್ವ್ ಬ್ಯಾಂಕ್ ರೈಟ್ ಆಫ್ ಮಾಡಿದೆ. ರಿಸರ್ವ್ ಬ್ಯಾಂಕಿನ ಈ ಕ್ರಮ ರಾಜಕೀಯ ವಲಯದಲ್ಲಿ ತೀವ್ರ ಟೀಕೆಗೆ ಗುರಿಯಾಗಿತ್ತು. ಈ ಬಗ್ಗೆ ಟ್ವೀಟ್ ಮಾಡಿರುವ ಎಚ್ಡಿಕೆ, “ಕೊರೊನಾದಿಂದ ಇಡೀ ದೇಶವೇ ನಲುಗುತ್ತಿರುವಾಗ, ಇಂತಹ ದೊಡ್ಡ ತಿಮಿಂಗಿಲಗಳೇ, ದೇಶದ ಆರ್ಥಿಕತೆಗೆ ತೊಂದರೆಯನ್ನುಂಟು ಮಾಡುತ್ತಿಲ್ಲವೇ” ಎಂದು ಟ್ವೀಟ್ ನಲ್ಲಿ ಬರೆದಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಪ್ರವಾಸೋದ್ಯಮ ಇಲಾಖೆಯ ಸಚಿವ ಸಿ.ಟಿ.ರವಿ,”ಅಣ್ಣಾ.. ಎರಡೆರಡು ಬಾರಿ ನೀವು ಮುಖ್ಯಮಂತ್ರಿಯಾಗಿದ್ದವರು. ರೈಟ್ ಆಫ್ ಮತ್ತು ವೇವ್ ಆಫ್ ನಡುವಿನ ವ್ಯತ್ಯಾಸವನ್ನು ಮೊದಲು ತಿಳಿದುಕೊಳ್ಳಿ”.
“ಕುಮಾರಣ್ಣ.. ಯಾವುದೇ ಪ್ರೈಮರಿ ಶಾಲೆಯ ಮಕ್ಕಳನ್ನು ಕೇಳಿ ನೋಡಿ. ಕನ್ನಡಿಗರಿಗೆ ಇನ್ನೂ ನಿಮ್ಮ ಮೇಲೆ ಅಲ್ವಸ್ವಲ್ಪ ಗೌರವ ಅನ್ನೋದು ಇದೆ. ರಾಹುಲ್ ಗಾಂಧಿಯ ರೀತಿಯಲ್ಲಿ ಬೇಕಾಬಿಟ್ಟಿ ಹೇಳಿಕೆಯನ್ನು ನೀಡಿ, ನಿಮ್ಮ ಮೇಲಿರುವ ಗೌರವ ಕಮ್ಮಿಯಾಗದಂತೆ ನೋಡಿಕೊಳ್ಳಿ” ಎಂದು ಕುಟುಕಿದ್ದಾರೆ.