ಮಂಗಳೂರು: ಇಲ್ಲಿನ ಕೋಟೆಕಾರು (Kotekaru) ಬ್ಯಾಂಕ್ ಕೆ.ಸಿ ರೋಡ್ ಶಾಖೆಯಲ್ಲಿ ನಡೆದ ದರೋಡೆ (Bank Theft) ಪ್ರಕರಣಕ್ಕೆ ಇಡೀ ರಾಜ್ಯ ಮತ್ತೊಮ್ಮೆ ಬೆಚ್ಚಿ ಬಿದ್ದಿದೆ. ನಿನ್ನೆಯಷ್ಟೇ ಬೀದರ್ ಬ್ಯಾಂಕ್ ಸಿಬ್ಬಂದಿಯ ಮೇಲೆ ಫೈರಿಂಗ್ ನಡೆಸಿ, ಹಣ ದೋಚಿ ಖದೀಮರು ಪರಾರಿಯಾಗಿದ್ದರು. ಈ ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದರು. ಈ ಘಟನೆ ಮಾಸುವ ಮುನ್ನವೇ ಮತ್ತೆ ಇಂತಹ ಘಟನೆ ನಡೆದಿರುವುದು ಆತಂಕಕ್ಕೆ ಕಾರಣವಾಗುತ್ತಿದೆ.
ಕೋಟೆಕಾರು ಬ್ಯಾಂಕ್ ನ ಸಿಸಿ ಕ್ಯಾಮೆರಾ (CC Camera) ರಿಪೇರಿಗೆ ನೀಡಿದ ದಿನವೇ ಲೂಟಿ ಮಾಡಿರುವುದು ಹಲವಾರು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಹಾಡಹಗಲೇ ಐವರು ಖದೀಮರು, ಕಾರಿನಲ್ಲಿ ಬಂದು ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘ ಕೆ.ಸಿ.ರೋಡ್ ಶಾಖೆಗೆ ನುಗ್ಗಿ, ಗನ್, ತಲ್ವಾರ್, ಚಾಕು ತೋರಿಸಿ 5 ಲಕ್ಷ ರೂ. ನಗದು ಸೇರಿದಂತೆ 12 ಕೋಟಿ ರೂ.ಗೂ ಅಧಿಕ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.
ಬ್ಯಾಂಕ್ ನ ಸಿಸಿ ಕ್ಯಾಮೆರಾವನ್ನು ರಿಪೇರಿಗೆ ನೀಡಿದ ದಿನವೇ ಈ ಕೃತ್ಯ ನಡೆದಿರುವುದು ಹಲವಾರು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಸದ್ಯ ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.