SBI | ನಾಲ್ಕು ದಿನ ‘ಬ್ಯಾಂಕ್’ಗಳು ಬಂದ್
ಬ್ಯಾಂಕ್ ನೌಕರರ ಒಕ್ಕೂಟದಿಂದ ಬ್ಯಾಂಕ್ ಮುಷ್ಕರ
ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಮುಷ್ಕರ
ಮಾರ್ಚ್ 28 ಮತ್ತು ಮಾರ್ಚ್ 29 ರಂದು ಬ್ಯಾಂಕ್ ಮುಷ್ಕರ
ವಾರಾಂತ್ಯ ಸೇರಿ ನಾಲ್ಕು ದಿನ ‘ಬ್ಯಾಂಕ್‘ಗಳು ಬಂದ್
ಬೆಂಗಳೂರು : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಾರ್ಚ್ 28 ಮತ್ತು 29 ರಂದು ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ನಡೆಸಲು ಬ್ಯಾಂಕ್ ನೌಕರರ ಒಕ್ಕೂಟ ಕರೆ ಕೊಟ್ಟಿದೆ. ಹೀಗಾಗಿ ನಾಲ್ಕು ದಿನಗಳ ಕಾಲ ಬ್ಯಾಂಕ್ ವ್ಯವಹಾರದಲ್ಲಿ ಗ್ರಾಹಕರಿಗೆ ವ್ಯತ್ಯಯ ಉಂಟಾಗಲಿದೆ.
ಈ ಬಗ್ಗೆ ಭಾರತೀಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಾಹಿತಿ ಹಂಚಿಕೊಂಡಿದೆ. ದೇಶದ ವಿವಿಧ ಬ್ಯಾಂಕ್ ನೌಕರರ ಸಂಘಟನೆಗಳಿಂದ ಮಾರ್ಚ್ 28, 29ರಂದು ಮುಷ್ಕರಕ್ಕೆ ಕರೆ ನೀಡಲಾಗಿದೆ.
ಹೀಗಾಗಿ ಸತತ ನಾಲ್ಕು ದಿನಗಳು ಬ್ಯಾಂಕ್ ವ್ಯವಹಾರದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಆರ್ ಬಿ ಐ ತಿಳಿಸಿದೆ.
ಅಂದಹಾಗೆ ಮಾರ್ಚ್ 26 ಶನಿವಾರ ಮತ್ತು 27 ಭಾನುವಾರ ಆಗಿರುವುದರಿಂದ ಬ್ಯಾಂಕ್ ಗಳಿಗೆ ಎರಡು ದಿನಗಳ ಕಾಲ ರಜೆ ಇರಲಿದೆ.
ಇದಾದ ಬಳಿಕ 28 ಸೋಮವಾರ ಮತ್ತು 29 ಮಂಗಳವಾರ ಬ್ಯಾಂಕ್ ನೌಕರರು ಮುಷ್ಕರಕ್ಕೆ ಕರೆ ಕೊಟ್ಟಿದ್ದಾರೆ.
ಹೀಗಾಗಿ ಮಾರ್ಚ್ 26 ರಿಂದ 29ರ ವರೆಗೂ ಬ್ಯಾಂಕ್ ವ್ಯವಹಾರ ನಡೆಯುವುದಿಲ್ಲ. Banks to remain shut for 4 days:SBI