ಕೋವಿಡ್ ಚಿಕಿತ್ಸೆಗಾಗಿ ಸಾರ್ವಜನಿಕ ವಲಯದ ಬ್ಯಾಂಕುಗಳು ನೀಡಲಿದೆ 5 ಲಕ್ಷ ರೂಗಳವರೆಗೆ ಸಾಲ !
ಕೊರೋನಾ ವೈರಸ್ ಸಾಂಕ್ರಾಮಿಕದಿಂದ ಹಿನ್ನೆಲೆಯಲ್ಲಿ, ಜನರು ಚಿಕಿತ್ಸೆಯ ವೆಚ್ಚದ ಬಗ್ಗೆ ಚಿಂತಿತರಾಗಿದ್ದಾರೆ. ಈ ಸಂದರ್ಭದಲ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳು (ಪಿಎಸ್ಬಿ) ಐದು ಲಕ್ಷ ರೂಪಾಯಿಗಳವರೆಗೆ ಅಸುರಕ್ಷಿತ ವೈಯಕ್ತಿಕ ಸಾಲಗಳನ್ನು ನೀಡುತ್ತಿವೆ. ಪತ್ರಿಕಾಗೋಷ್ಠಿಯಲ್ಲಿ ಇದನ್ನು ಘೋಷಿಸಲಾಗಿದೆ. ಎಸ್ಬಿಐ ಮತ್ತು ಇಂಡಿಯನ್ ಬ್ಯಾಂಕುಗಳ ಸಂಘ (ಐಬಿಎ) ಜಂಟಿ ಹೇಳಿಕೆಯಲ್ಲಿ ಕೋವಿಡ್ ಚಿಕಿತ್ಸೆಗಾಗಿ ಪಿಎಸ್ಬಿ 25 ಸಾವಿರ ರೂ.ಗಳಿಂದ ಐದು ಲಕ್ಷ ರೂ.ವರೆಗೆ ಅಸುರಕ್ಷಿತ ವೈಯಕ್ತಿಕ ಸಾಲ ನೀಡಲಿದೆ ಎಂದು ಹೇಳಿದೆ.
ಸಂಬಳ ಪಡೆಯುವವರು, ಸಂಬಳ ಪಡೆಯದವರು ಮತ್ತು ಪಿಂಚಣಿದಾರರು ಸೇರಿದಂತೆ ವ್ಯಕ್ತಿಗಳು ಕೋವಿಡ್ ಚಿಕಿತ್ಸೆಗಾಗಿ ಅಸುರಕ್ಷಿತ ವೈಯಕ್ತಿಕ ಸಾಲಗಳನ್ನು ₹ 25,000 ದಿಂದ 5 ಲಕ್ಷದವರೆಗೆ ಸಾಲವನ್ನು ಪಡೆಯಬಹುದು. ಕೋವಿಡ್ ಚಿಕಿತ್ಸೆಗಾಗಿ ಪಡೆದ ಸಾಲದ ಮರುಪಾವತಿ ಅವಧಿಯು 5 ವರ್ಷಗಳಾಗಿರುತ್ತದೆ.
ಆಸ್ಪತ್ರೆಗಳು, ನರ್ಸಿಂಗ್ ಹೋಂಗಳು, ಕ್ಲಿನಿಕ್ಗಳು, ವೈದ್ಯಕೀಯ ಕಾಲೇಜುಗಳು ಆನ್-ಸೈಟ್ ಆಕ್ಸಿಜನ್ ಪ್ಲಾಂಟ್ ಇತ್ಯಾದಿ ಹೆಲ್ತ್ ಕೇರ್ ವ್ಯವಹಾರಕ್ಕೆ 2 ಕೋಟಿ ರೂ.ಗಳವರೆಗೆ ಸಾಲ ಸಾಲ ಪಡೆಯಬಹುದಾಗಿದೆ. ಸಾಲಕ್ಕೆ 100 ಶೇಕಡಾ ಗ್ಯಾರಂಟಿ ಕವರ್ ಘೋಷಿಸಲಾಗಿದ್ದು, ಬಡ್ಡಿದರದ ಮಿತಿ ಶೇಕಡಾ 7.5 ರಷ್ಟು ಆಗಿದೆ. ಸಾಲದ ಅವಧಿ 5 ವರ್ಷಗಳು.
ಹಣಕಾಸು ಸಚಿವಾಲಯವು ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್ (ಇಸಿಎಲ್ಜಿಎಸ್) ಅನ್ನು ಸರ್ಕಾರ ವಿಸ್ತರಿಸಿದೆ ಎಂದು ಪ್ರಕಟಿಸಿದೆ.
ಕೊರೋನಾ ವೈರಸ್ ಸಾಂಕ್ರಾಮಿಕದ ಎರಡನೇ ಅಲೆಯಿಂದಾಗಿ ವಿವಿಧ ಕ್ಷೇತ್ರಗಳು ಎದುರಿಸುತ್ತಿರುವ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವು ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಯೋಜನೆಯ ವ್ಯಾಪ್ತಿಯನ್ನು ವಿಸ್ತರಿಸಿದೆ ಎಂದು ಹಣಕಾಸು ಸಚಿವಾಲಯ ಪತ್ರಿಕಾ ಪ್ರಕಟಣೆ ಹೊರಡಿಸಿದೆ.
ತನ್ನ 3 ಲಕ್ಷ ಕೋಟಿ ರೂ.ಗಳ ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್ (ಇಸಿಎಲ್ಜಿಎಸ್) ಅನ್ನು ಮೂರು ತಿಂಗಳವರೆಗೆ ವಿಸ್ತರಿಸುವುದಾಗಿ ಸರ್ಕಾರ ಘೋಷಿಸಿದೆ. ಈ ಯೋಜನೆಯನ್ನು 30 ಜೂನ್ 2021 ರಿಂದ 2021 ಸೆಪ್ಟೆಂಬರ್ 30 ರವರೆಗೆ ವಿಸ್ತರಿಸಲಾಗಿದೆ. 3 ಲಕ್ಷ ಕೋಟಿ ರೂ.ಗಳ ತುರ್ತು ಸಾಲ ಸೌಲಭ್ಯ ಖಾತರಿ ಯೋಜನೆಯ (ಇಸಿಎಲ್ಜಿಎಸ್) ವ್ಯಾಪ್ತಿಯನ್ನು ಸರ್ಕಾರ ವಿಸ್ತರಿಸುತ್ತಿದೆ. ಈ ಯೋಜನೆಯಡಿ ಈವರೆಗೆ 2.54 ಲಕ್ಷ ಕೋಟಿ ರೂ.ಗಳ ಸಾಲವನ್ನು ಮಂಜೂರು ಮಾಡಲಾಗಿದೆ ಎಂದು ಬ್ಯಾಂಕುಗಳು ತಿಳಿಸಿವೆ.
ಭಾರತೀಯ ಬ್ಯಾಂಕುಗಳ ಸಂಘದ ಸಿಇಒ ಸುನಿಲ್ ಮೆಹ್ತಾ ಮಾತನಾಡಿ, ಲಭ್ಯವಿರುವ ಸಂಪೂರ್ಣ ನಿಧಿಯಿಂದ (ಇಸಿಎಲ್ಜಿಎಸ್ಗೆ) 2.54 ಲಕ್ಷ ಕೋಟಿ ರೂ.ಗಳ ಸಾಲವನ್ನು ಅನುಮೋದಿಸಲಾಗಿದೆ. 2.54 ಲಕ್ಷ ಕೋಟಿ ರೂ.ಗಳಲ್ಲಿ 2.40 ಲಕ್ಷ ಕೋಟಿ ರೂಪಾಯಿಗಳನ್ನು ಈಗಾಗಲೇ ವಿತರಿಸಲಾಗಿದೆ ಎಂದು ಹೇಳಿದ್ದಾರೆ.
ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
ಕೊರೋನಾ ಚಿಕಿತ್ಸೆಯಲ್ಲಿ ಸತು ಎಷ್ಟು ಪರಿಣಾಮಕಾರಿ? ಯಾವ ಆಹಾರ ಸೇವನೆಯಿಂದ ಸತುವನ್ನು ಪಡೆಯಬಹುದು?#Saakshatv #healthtips #zincbeneficial #coronatreatment https://t.co/7DuN8YHYEh
— Saaksha TV (@SaakshaTv) May 28, 2021
ಇನ್ನು ಮುಂದೆ ಆನ್ಲೈನ್ ನಲ್ಲಿ ಆಧಾರ್ ಮರುಮುದ್ರಣ ಸಾಧ್ಯವಿಲ್ಲ!#UIDAI #Aadhaar #reprint https://t.co/CmkUBpFY20
— Saaksha TV (@SaakshaTv) May 29, 2021
ಉಡುಪಿ – ಕೋರ್ಟ್ ಮೆಟ್ಟಿಲೇರಿದ ಅಪ್ರಾಪ್ತ ಬಾಲಕನಿಗೆ ಸನ್ಯಾಸ ದೀಕ್ಷೆ#Udupi #Shiroormutt https://t.co/0e2wwvp7Wk
— Saaksha TV (@SaakshaTv) May 29, 2021
ರಾತ್ರಿ ಮಲಗುವ ಮೊದಲು ಬಿಸಿ ಹಾಲಿನಲ್ಲಿ ತುಪ್ಪ ಬೆರೆಸಿ ಕುಡಿಯುವುದರ ಪ್ರಯೋಜನಗಳು#Saakshatv #healthtips #ghee #milk https://t.co/SIi4LM1jhG
— Saaksha TV (@SaakshaTv) May 29, 2021
ತೊಂಡೆಕಾಯಿ ಬಜ್ಜಿ#Saakshatv #cookingrecipe #thondekayibajji https://t.co/pfPteVFxqX
— Saaksha TV (@SaakshaTv) May 29, 2021
#Banks #covidtreatment