ಕೊರೊನಾ ಭೀತಿಯಿಂದ ಇಡಿ ದೇಶವೇ ಆತಂಕದಲ್ಲಿ ಮುಳುಗಿದೆ. ಮಹಾಮಾರಿ ಕೊರೊನಾ ಹರಡದಂತೆ ತಡೆಯಲು ದೇಶದಲ್ಲಿ ಮಾರ್ಚ್ 22 ರಂದು ಜನತಾ ಕರ್ಪ್ಯೂ ಜಾರಿ ಮಾಡಲಾಗಿದೆ. ಈ ಹಿನ್ನಲೆಯಲ್ಲಿ ರಾಜ್ಯದ ಎಲ್ಲಾ ಬಾರ್, ವೈನ್ ಶಾಪ್, ಬಾರ್ ಅಂಡ್ ರೆಸ್ಟೋರೆಂಟ್ ಬಂದ್ ಮಾಡಲು ರಾಜ್ಯ ಬಾರ್ ಮಾಲೀಕರ ಸಂಘ ಮುಂದಾಗಿದೆ. ನಿನ್ನೆಯಷ್ಟೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜನತಾ ಕರ್ಪ್ಯೂಗೆ ಕರೆ ನೀಡಿದ್ದರು. ಈ ವೇಳೆ ಮಾತನಾಡಿದ ಅವರು, ದೇಶದ ಜನರು ಮನೆಯಿಂದ ಹೊರ ಬರಬಾರದು ಎಂದು ಮನವಿ ಮಾಡಿದ್ದರು. ಹಾಗಾಗಿ ಮಾರ್ಚ್ 22 ರಂದು ನಡೆಯುವ ಜನತಾ ಕರ್ಪ್ಯೂ ಗೆ ರಾಜ್ಯ ಬಾರ್ ಮಾಲೀಕರ ಸಂಘ ಬೆಂಬಲ ಸೂಚಿಸಿದೆ. ಹೀಗಾಗಿ ಮಾರ್ಚ್ 22, 2020ರ ಭಾನುವಾರದಂದು ರಾಜ್ಯಾದ್ಯಂತ ಬಾರ್, ವೈನ್ ಶಾಪ್, ಬಾರ್ ಅಂಡ್ ರೆಸ್ಟೋರೆಂಟ್ ಬಂದ್ ಆಗಲಿದೆ.
ಬಾಕ್ಸ್ ಆಫೀಸ್ನಲ್ಲಿ ಶ್ರೀರಾಮ-ರಾವಣನ ದರ್ಬಾರ್: ವಿಕ್ಕಿ ಕೌಶಲ್ ಛಾವಾ ದಾಖಲೆ ಉಡೀಸ್, 6 ದಿನಗಳಲ್ಲಿ 823.50 ಕೋಟಿ ರೂ. ಬಾಚಿದ ರಣಬೀರ್-ಯಶ್ ಚಿತ್ರ!
ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ದೃಶ್ಯಕಾವ್ಯ ರಾಮಾಯಣ ವಿಶ್ವದಾದ್ಯಂತ ಬಾಕ್ಸ್ ಆಫೀಸ್ನಲ್ಲಿ ಹಿಂದೆಂದೂ ಕಾಣದಂತಹ ಐತಿಹಾಸಿಕ ದಾಖಲೆಗಳನ್ನು ನಿರ್ಮಿಸುತ್ತಾ ಮುನ್ನುಗ್ಗುತ್ತಿದೆ. ಬಾಲಿವುಡ್ ಸ್ಟಾರ್ ರಣಬೀರ್ ಕಪೂರ್ ಹಾಗೂ ಸ್ಯಾಂಡಲ್ವುಡ್ನ...








