ನೇತ್ರಾವತಿ ಸೇತುವೆಗೆ ತಡೆ ಬೇಲಿ, ಸಿಸಿಟಿವಿ ಕ್ಯಾಮೆರಾ ಅಳವಡಿಕೆ
ದಕ್ಷಿಣ ಕನ್ನಡ : ಸೂಸೈಟ್ ಸ್ಟಾಟ್ ಎಂದೇ ಕುಖ್ಯಾತಿಗೊಳಗಾಗಿರುವ ಮಂಗಳೂರು-ಕೇರಳ ರಾಷ್ಟ್ರೀಯ ಹೆದ್ದಾರಿಯ ನೇತ್ರಾವತಿ ಸೇತುವೆಗೆ ತಡೆ ಬೇಲಿ ಮತ್ತು ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ.
ಮಂಗಳೂರು-ಕೇರಳ ರಾಷ್ಟ್ರೀಯ ಹೆದ್ದಾರಿಯ ನೇತ್ರಾವತಿ ಸೇತುವೆ ಮೇಲಿಂದ ನದಿಗೆ ಹಾರಿ 20ಕ್ಕೂ ಹೆಚ್ಚು ಮಂದಿ ಆತ್ಮಹತ್ಯೆಗೆ ಯತ್ನಿಸಿದ್ದು, ಇದರಲ್ಲಿ 16 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ವಿವಿಧ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
ಈ ಸೇತುವೆ ಸುಮಾರು 800 ಮೀ. ಉದ್ದದವಿದ್ದು, ನಾಲ್ಕೂ ಕಡೆಗಳಲ್ಲಿ ಕಬ್ಬಿಣದ ತಡೆಬೇಲಿ ಅಳವಡಿಸಲಾಗಿದೆ. ಅಲ್ಲದೆ, ಐದು ಲಕ್ಷ ರೂ. ವೆಚ್ಚದಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ.
ತಡೆ ಬೇಲಿಯು ಐದು ಅಡಿ ಎತ್ತರವಿದ್ದು, ಅದರ ಮೇಲ್ಗಡೆ ಒಂದು ಅಡಿ ಎತ್ತರಕ್ಕೆ ಕಬ್ಬಿಣದ ಮುಳ್ಳು ಬೇಲಿ ಅಳವಡಿಸಲಾಗಿದೆ.
ತಡೆಬೇಲಿ ಜೊತೆಗೆ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇವು ವೈರ್ ಲೆಸ್ ಕ್ಯಾಮೆರಾಗಳು ಆಗಿದ್ದು, ಇದರ ನೇರ ದೃಶ್ಯ ಕಂಕನಾಡಿ ನಗರ ಪೆÇಲೀಸ್ ಠಾಣೆಯಲ್ಲಿ ದಾಖಲಾಗುತ್ತದೆ.
