ಸಂಕ್ರಾಂತಿ ಬಳಿಕ ನನ್ನ ಪಾತ್ರ ಬೇರೆ : ಯತ್ನಾಳ್ ಹೊಸ ಬಾಂಬ್
ಬಾಗಲಕೋಟೆ : ಸಂಕ್ರಾಂತಿ ಬಳಿಕ ನನ್ನ ಪಾತ್ರ ಬೇರೆ ಇದೆ ಎಂದು ಮುಂದೆ ಕಾಣಿಸುತ್ತೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಕೂಡಲಸಂಗಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಲ ಕಾಲಕ್ಕೆ ಏನೆಲ್ಲ ಬದಲಾವಣೆ ಆಗಬೇಕೋ ಅದೇಲ್ಲಾ ಆಗುತ್ತದೆ.
ಕೋಲಾರದಲ್ಲಿ ಕೊರೊನಾ ಕಾಟ : ಮೆಡಿಕಲ್ ಕಾಲೇಜಿನಲ್ಲಿ 93 ಮಂದಿಗೆ ಸೋಂಕು
ಯಾವುದು ಶಾಶ್ವತವಲ್ಲ ರಾಜಕರಾಣದಲ್ಲಿ ಯಾರೋ ಏರ್ತಾರೆ ಯಾರೋ ಇಳಿತಾರೆ ಯಾವ ಸ್ಥಾನವೂ ಶಾಶ್ವತವಲ್ಲ. ಸಂಕ್ರಮಣ ಕಾಲದಲ್ಲಿ ಸೂರ್ಯ ಪಥ ಬದಲಿಸುತ್ತಾನೆ.
ಸಾಕಷ್ಟು ಬೆಳವಣಿಗೆಗಳು ಸಾಮಾಜಿಕವಾಗಿ ರಾಜಕೀಯವಾಗಿ ನೈಸರ್ಗಿಕವಾಗಿ ಆಗುತ್ತವೆ. ನಾನು ಈ ಹಿಂದೆ ಸಿಎಂ ಬದಲಾವಣೆ ಆಗ್ತಾರೆ ಅಂತ ಹೇಳಿಲ್ಲ, ಸಂಕ್ರಮಣ ಕಾಲದ ಬದಲಾವಣೆ ಕಾದು ನೋಡಿ ಎಂದಿದ್ದೆ ಎಂದರು.
ಇದೇ ವೇಳೆ ಯುವರಾಜ ಯಾದನ್ ವಂಚನೆ ಪ್ರಕರಣ ಸಂಬಂಧ ಮಾತನಾಡಿ, ಯುವರಾಜನಂತ ಏಜೆಂಟರು ಬೆಂಗಳೂರಿನಲ್ಲಿ ದೆಹಲಿಯಲ್ಲಿ ಬಹಳ ಜನರಿದ್ದಾರೆ.
ದುರ್ದೈವ ಅಂದ್ರೆ ನಾವು ಶಾಸಕರು ನಮ್ಮ ರಾಷ್ಟ್ರೀಯ ಅಧ್ಯಕ್ಷರನ್ನ ಬೇಟಿಯಾಗೋಕೆ ಎಜೆಂಟರನ್ನ ಕರೆದುಕೊಂಡು ಹೋಗಬೇಕಾ..? ಇದು ಇವತ್ತಿನ ರಾಜಕಾರಣದ ಪರಿಸ್ಥಿತಿ ಎಂದು ಬೇಸರ ಹೊರಹಾಕಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel