ಶೀಘ್ರದಲ್ಲೇ ಇನ್ನೂ 23 ಸಿಡಿ ಬಿಡುಗಡೆ : ಯತ್ನಾಳ್..!
ಬೆಂಗಳೂರು: ಸಿಡಿ ಕೇಸ್ ಗೆ ಸಂಬಂಧಿಸಿದಂತೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ಹೊಸ ಬಾಂಬ್ ಸಿಡಿಸಿದ್ದಾರೆ. ಈ ಬಗ್ಗೆ ವಿಧಾನಸೌಧದಲ್ಲಿ ಮಾತನಾಡಿದ ಅವರು, ಇನ್ನೂ 23 ಸಿ.ಡಿಗಳು ಇವೆಯಂತೆ, ನೋಡುತ್ತಾ ಇರಿ ಅವು ಒಂದೊಂದಾಗಿ ಬಿಡುಗಡೆ ಆಗುತ್ತವೆ ಎಂದು ಗೊಂದಲಮಯ ಹೇಳಿಕೆ ನೀಡಿದ್ದಾರೆ. ಯತ್ನಾಳ್ ಹೇಳಿಕೆ ಸದ್ಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಕ್ಯಾನ್ಸರಿನ ಪರೀಕ್ಷೆ ಜಾಗೃತಿ ಅಭಿಯಾನಕ್ಕೆ ಡಾ.ಕೆ.ಸುಧಾಕರ್ ಚಾಲನೆ
ಅಷ್ಟೇ ಅಲ್ಲ ರಮೇಶ್ ಜಾರಕಿಹೊಳಿಯವರ ಸಿ.ಡಿಯನ್ನು ಇವರು ಬಿಟ್ಟಿದ್ದಾರೆ, ರಮೇಶ್ ಜಾರಕಿಹೊಳಿ ಸುಮ್ಮನೆ ಇರುತ್ತಾರಾ. ಅವರ ಬಳಿಯೂ ಕೆಲವು ಇರುತ್ತವೆ, ಅದರಲ್ಲೂ ಅಪ್ಪ ಮಕ್ಕಳ ಸಿ.ಡಿ ಅವರ ಬಳಿ ಇವೆ, ಅವರೂ ಆ ಸಿಡಿಗಳನ್ನ ಶೀಘ್ರದಲ್ಲೇ ಬಿಡುತ್ತಾರೆ ಎಂದು ಪರೋಕ್ಷವಾಗಿ ಬಿಜೆಪಿ ಘಟಾನುಘಟಿಗಳ ವಿರುದ್ಧವೇ ಆರೋಪ ಮಾಡಿದ್ದಾರೆ ಯತ್ನಾಳ್. ಯಾವ ಸಿ.ಡಿಗಳು ಉಳಿಯೋದಿಲ್ಲ ಎಲ್ಲವೂ ಬಿಡುಗಡೆಯಾಗುತ್ತವೆ, ನಾನು ಸತ್ಯದರ್ಶನ ಬಿಡುಗಡೆ ಎಂದಿದ್ದೆ, ಅದರಂತೆ ಎಲ್ಲವೂ ಬಿಡುಗಡೆ ಆಗುತ್ತಿವೆ ಎಂದಿದ್ದಾರೆ. ಅಲ್ಲದೇ ಸಿಡಿ ಕೇಸ್ ನ ಹಿಂದೆ ಕಾಂಗ್ರೆಸ್ ಬಿಜೆಪಿ ಇಬ್ಬರ ಕೈವಾಡವೂ ಇದೆ ಎಂದು ಹೇಳಿದ್ದಾರೆ.