ಪಿಎಚ್ ಸಿಗಳನ್ನು ಗಟ್ಟಿಗೊಳಿಸಲು ರಾಜ್ಯ ಸರ್ಕಾರ ಕ್ರಮ: ಆರೋಗ್ಯ ಸಚಿವ ಡಾ.ಕೆ.ಸುಧಾಕರ್ #drksudhakar @k sudhakar #karanatakastategovernment @karnataka state government
1 min read
ಪಿಎಚ್ ಸಿಗಳನ್ನು ಗಟ್ಟಿಗೊಳಿಸಲು ರಾಜ್ಯ ಸರ್ಕಾರ ಕ್ರಮ: ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ #drksudhakar @k sudhakar #karanatakastategovernment @karnataka state government
ಸಿಎಸ್ ಆರ್ ನಡಿ ಆರೋಗ್ಯ ಕ್ಷೇತ್ರದ ಅಭಿವೃದ್ಧಿ ಅಗತ್ಯ
ಬೆಂಗಳೂರು, ಮಾರ್ಚ್ 10 : ಪ್ರಾಥಮಿಕ ಆರೋಗ್ಯ ಕೇಂದ್ರಗಳು ಆರೋಗ್ಯ ಕ್ಷೇತ್ರದ ಅಡಿಪಾಯವಾಗಿದ್ದು, ಇದನ್ನು ಗಟ್ಟಿಗೊಳಿಸಲು ರಾಜ್ಯ ಸರ್ಕಾರ ಕ್ರಮ ವಹಿಸುತ್ತಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಸಿಂಗಸಂದ್ರದಲ್ಲಿ ಬಾಶ್ ಕಂಪನಿಯ ಆರೋಗ್ಯ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶಗಳಿಗೆ ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳು ಬಹಳ ಮುಖ್ಯ. ಈ ಅಡಿಪಾಯವನ್ನು ಬಹಳ ಗಟ್ಟಿಯಾಗಿ ನಿರ್ಮಿಸಬೇಕು. ರಾಜ್ಯದಲ್ಲಿ ಪಿಎಚ್ ಸಿಗಳನ್ನು ಗಟ್ಟಿಯಾಗಿ ನಿರ್ಮಿಸಲು ತೀರ್ಮಾನಿಸಲಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಜೆಟ್ ನಲ್ಲಿ 250 ಪಿಎಚ್ ಸಿಗಳನ್ನು ಹಂತಹಂತವಾಗಿ ಮೇಲ್ದರ್ಜೆಗೇರಿಸುವ ಘೋಷಣೆ ಮಾಡಿದ್ದಾರೆ ಎಂದರು.
ಸಭೆ, ಸಮಾರಂಭಗಳಲ್ಲಿ ಜನರು ಹೆಚ್ಚು ಸೇರದಂತೆ ಕ್ರಮ: ಆರೋಗ್ಯ ಸಚಿವ ಡಾ.ಕೆ.ಸುಧಾಕರ್
ಇದು ಕೇವಲ ಕಟ್ಟಡ ನಿರ್ಮಾಣವಲ್ಲ. ರೋಗಿಗಳು ಹೆಚ್ಚಾಗಿ ಬರುವ ಕಡೆ, ಹೆಚ್ಚು ಒತ್ತಡವಿರುವ ಕಡೆ ಅಭಿವೃದ್ಧಿ ಮಾಡಲಾಗುತ್ತದೆ. ಪಿಎಚ್‍ಸಿ ಯಲ್ಲಿ ಸಾಮಾನ್ಯವಾಗಿ ಒಬ್ಬರೇ ವೈದ್ಯರು ಇದ್ದರು. ಈ ವರ್ಷದಿಂದ ಒಬ್ಬ ಪುರುಷ ಹಾಗೂ ಒಬ್ಬ ಮಹಿಳಾ ವೈದ್ಯರನ್ನು ನಿಯೋಜಿಸಲಾಗುತ್ತದೆ. ಈ ರೀತಿಯ ಬದಲಾವಣೆ ತಂದು ಅಭಿವೃದ್ಧಿಪಡಿಸಲಾಗುತ್ತದೆ ಎಂದರು.
ಈ ಭಾಗದಲ್ಲಿ ಬಾಶ್ ಕಂಪನಿಯ ಸಹಯೋಗದಲ್ಲಿ ಈ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಿಸಲಾಗಿದೆ. ಆರೋಗ್ಯ ಇಲಾಖೆ ಸುಮಾರು 2.5 ರೂ ಕೋಟಿ ಮತ್ತು ಬಾಷ್ ಕಂಪನಿಯ ಸಿಎಸ್ಆರ್ ಅಡಿಯಲ್ಲಿ 43 ಲಕ್ಷ ರೂ. ವೆಚ್ಚದಲ್ಲಿ ಆಸ್ಪತ್ರೆ ನಿರ್ಮಿಸಲಾಗಿದೆ. ಉಳ್ಳವರು ಇಲ್ಲದವರಿಗೆ ದಾನ ಕೊಡುವುದು ಒಂದು ಸಂಪ್ರದಾಯ. ಈಗ ಸಿಎಸ್ ಆರ್ ನಲ್ಲಿ ಈ ರೀತಿ ನೀಡಲಾಗುತ್ತಿದೆ. ಸಿಎಸ್ ಆರ್ ನಡಿ ಎಲ್ಲ ಕಂಪನಿಗಳು ಆದಾಯದಲ್ಲಿ 2% ನಷ್ಟು ಸಮುದಾಯಕ್ಕೆ ಉಪಯೋಗವಾಗುವ ಕೆಲಸ ಮಾಡುತ್ತಿವೆ ಎಂದರು.
ಆರೋಗ್ಯ ಕ್ಷೇತ್ರಕ್ಕೆ ಬಾಶ್ ಕಂಪನಿಯವರು ಇನ್ನಷ್ಟು ಕೈ ಜೋಡಿಸಬೇಕು. ಸಿಎಸ್ ಆರ್ ನಡಿ ಮಾಡಬಹುದಾದ ಕೆಲಸಗಳನ್ನು ಬಗ್ಗೆ ಚರ್ಚಿಸಬಹುದು ಎಂದರು.
60ನೇ ವಯಸ್ಸಿನಲ್ಲಿ 2ನೇ ಮದುವೆ ಹುಚ್ಚು..! ಪಟ್ಟು ಹಿಡಿದು ಹೈ ವೋಲ್ಟೇಜ್ ವಿದ್ಯುತ್ ಕಂಬವೇರಿದ ಅಜ್ಜ : VIDEO VIRAL
ಇಲ್ಲಿ ಕೂಡ ಕೋವಿಡ್ ಲಸಿಕೆ ನೀಡಲಾಗುತ್ತಿದೆ. ರಾಜ್ಯದಲ್ಲಿ 3,500 ಕೇಂದ್ರಗಳಲ್ಲಿ ಲಸಿಕೆ ನೀಡುತ್ತಿದ್ದು, ಒಂದೇ ದಿನ 79 ಸಾವಿರ ಲಸಿಕೆ ನೀಡಲಾಗಿದೆ 60 ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಲಸಿಕೆ ಪಡೆಯಬೇಕು. ಇದರಿಂದ ಯಾವುದೇ ಅಡ್ಡ ಪರಿಣಾಮವಿಲ್ಲ ಎಂದರು.