ಸಿಎಂ ಭ್ರಷ್ಟಾಚಾರದ ದಾಖಲೆ ಶೀಘ್ರದಲ್ಲೇ ಬಿಡುಗಡೆ – ಯತ್ನಾಳ್
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೊಮ್ಮೆ ಸಿಎಂ ಯಡಿಯೂರಪ್ಪ ವಿರುದ್ಧ ಕಿಡಿಕಾರಿದ್ದಾರೆ. ಸಿಎಂ ಭ್ರಷ್ಟಾಚಾರ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ನನ್ನ ಬಳಿ ಬ್ರಹ್ಮಾಸ್ತ್ರವಿದೆ. ಯಡಿಯೂರಪ್ಪ ಭ್ರಷ್ಟಾಚಾರ ಬಯಲು ಮಾಡಿದರೆ. ಅವರ ಪರ ಬ್ಯಾಟಿಂಗ್ ಮಾಡುತ್ತಿರುವ ಮಠಾಧೀಶರು ಮಠ ಬಿಟ್ಟು ಓಡ ಬೇಕಾಗುತ್ತದೆ. ಅವರ ಪರ ಬ್ಯಾಟಿಂಗ್ ಮಾಡುವ ಮುನ್ನ ಎಚ್ಚರ ವಹಿಸಿ ಎಂದು ಗುಡುಗಿದ್ದಾರೆ.
ಲಕ್ಷ್ಮಣ ಸವದಿ ಪುತ್ರನ ಕಾರು ಅಪಘಾತ : ಕಾರ್ ನಲ್ಲಿ ನನ್ನ ಮಗ ಇರಲಿಲ್ಲ – ಡಿಸಿಎಂ ಸವದಿ
ಮೈಸೂರಿನಲ್ಲಿ ಮಾತನಾಡಿರುವ ಯತ್ನಾಳ್ ನಾನು ಕುರುಕ್ಷೇತ್ರದ ಅಭಿಮನ್ಯು ಆಗಲು ಸಿದ್ದ, ಆದರೆ ನಾನು ಅರ್ಜುನನಾಗುತ್ತೇನೆ. ವನವಾಸ, ಅಜ್ಞಾತವಾಸ ಎಲ್ಲಾ ಮುಗಿದಿದೆ. ಇನ್ನೇನಿದ್ದರೂ ಪಟ್ಟಾಭಿಷೇಕ ಮಾಡಿಸುವ ಕೆಲಸ ಅಷ್ಟೇ. ನನಗೆ ವಿಶ್ವಾಸವಿದೆ ನಾಯಕತ್ವ ಬದಲಾಗುತ್ತದೆ. ನಾನು ಏಕಾಂಗಿ ಅಲ್ಲ ಸಾಕಷ್ಟು ಸಚಿವರು ನನ್ನ ಸಂಪರ್ಕದಲ್ಲಿದ್ದಾರೆ ಎಂದಿದ್ಧಾರೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಕರ್ನಾಟಕದ ನೂತನ ರಾಜ್ಯಪಾಲರಾಗಿ ತಾವರ್ ಚಂದ್ ಗೆಹ್ಲೋಟ್ ನೇಮಕ
ಇನ್ನೂ ಎಲ್ಲರೂ ನೀವು ಮಾಡುತ್ತಿರುವುದು ನ್ಯಾಯಯುತ ಹೋರಾಟ. ಹೋರಾಟ ಮುಂದವರಿಸಲು ಹೇಳಿದ್ದಾರೆ. ಕೆಲವೇ ದಿನಗಳಲ್ಲಿ ಇದರ ಫಲ ಸಿಗುತ್ತದೆ. ಯಡಿಯೂರಪ್ಪ ಕುರಿತು ಭ್ರಷ್ಟಾಚಾರದ ದಾಖಲೆ ಶೀಘ್ರದಲ್ಲೇ ಬಿಡುಗಡೆಯಾಗುತ್ತೆ. ಬಾಯಿ ಮಾತಿನಲ್ಲಿ ಆರೋಪ ಅಂತಾ ಹೇಳಿದ್ದಾರೆ. ಅವರಿಗೆಲ್ಲಾ ದಾಖಲೆ ಮೂಲಕ ಉತ್ತರ ಸಿಗುತ್ತೆ ಎಂದು ಎಚ್ಚರಿಸಿದ್ದಾರೆ.
ಸಿಎಂ ಬದಲಾಯಿಸದಿದ್ದರೆ ಬಿಜೆಪಿಗೆ ಉಳಿಗಾಲವಿಲ್ಲ : ಯತ್ನಾಳ