Basanagowda Patil Yatnal | ಗಾಂಧಿಯಿಂದ ಸ್ವಾತಂತ್ರ್ಯ ಸಿಕ್ಕಿಲ್ಲ
ಗದಗ : ಕೇವಲ ಗಾಂಧಿಯಿಂದ ಸ್ವಾತಂತ್ರ್ಯ ಸಿಕ್ಕಿಲ್ಲ, ಸಾವರ್ಕರ್, ಭಗತ್ ಸಿಂಗ್, ಸೇರಿದಂತೆ ಹಲವರಿಂದ ಸಿಕ್ಕಿದೆ. ಸಾವರ್ಕರ್ ಚಪ್ಪಲಿಯ ಧೂಳಿನ ಸಮಾನ ಅಲ್ಲದವರು ಇವತ್ತು ಅವರ ಬಗ್ಗೆ ಟೀಕೆ ಮಾಡ್ತಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಗದಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್, ಸ್ವಾತಂತ್ರ್ಯ ಪೂರ್ವದಲ್ಲಿ ಸಾರ್ವಜನಿಕವಾಗಿ ಗಣೇಶ ಉತ್ಸವ ಆಚರಿಸಲು ಸಾವರ್ಕರ್ ಮುನ್ನುಡಿ ಬರೆದರು. ಆದ್ರೆ ಇಂದು ಸಾವರ್ಕರ್ ಚಪ್ಪಲಿಯ ಧೂಳಿನ ಸಮಾನ ಅಲ್ಲದವರು ಇವತ್ತು ಅವರ ಬಗ್ಗೆ ಟೀಕೆ ಮಾಡ್ತಿದ್ದಾರೆ.
ಕೇವಲ ಗಾಂಧಿಯಿಂದ ಸ್ವಾತಂತ್ರ್ಯ ಸಿಕ್ಕಿಲ್ಲ, ಸಾವರ್ಕರ್, ಭಗತ್ ಸಿಂಗ್, ಸೇರಿದಂತೆ ಹಲವರಿಂದ ಸಿಕ್ಕಿದೆ. ಸಾವರ್ಕರ್ ಪತ್ರ ಬರೆದು ಕ್ಷಮೆ ಕೇಳಿದ್ರು ಅಂತಾರೆ. ಮಹಾತ್ಮ ಗಾಂಧೀಯಿಂದ ಹಿಡಿದು ಎಲ್ಲಾರೂ ಬ್ರಿಟೀಷರಿಗೆ ಹಿ ಈಸ್ ಹಾಯಿನೆಸ್ ಅಂತಾ ಬರೆದಿದ್ದಾರೆ. ಯಾರೇನು ಸಾಚಾಗಳಿಲ್ಲ ಈ ದೇಶದಲ್ಲಿ ಎಂದು ವಿವರಣೆ ನೀಡಿದರು.

ಗಣೇಶೋತ್ಸವ ವಿಚಾರ ಸರ್ಕಾರದ ನಡೆ ಬಗ್ಗೆ ಬಸನಗೌಡ ಪಾಟೀಲ್ ಯತ್ನಾಳ ವಾಗ್ದಾಳಿ ನಡೆಸಿದ್ದು, ರಾಷ್ಟ್ರಪತಿ ನಮ್ಮೋರು, ಪ್ರಧಾನಮಂತ್ರಿ ನಮ್ಮವರು, ಗೃಹ ಮಂತ್ರಿ ನಮ್ಮೋರು, ಕರ್ನಾಟಕ ರಾಜ್ಯಪಾಲರು ನಮ್ಮೋರು, ಕರ್ನಾಟಕ ಮುಖ್ಯಮಂತ್ರಿ ನಮ್ಮವರು.
ಗದಗ ಉಸ್ತುವಾರಿ ಸಚಿವರು ನಮ್ಮೋರು. ಗಣಪತಿ ಕೂಡಿಸಲು ಯಾಕೆ ಪರ್ಮಿಷನ್ ತಗೋಬೇಕು ? ಯಾದಗಿರಿಯಲ್ಲಿ ಒಬ್ಬ ಅಧಿಕಾರಿ ಹೇಳಿದ್ರೂ, ನಾ ತುಂಬಾ ಸ್ಟ್ರಿಕ್ಟ್ ಅದೀನಿ ಅವಕಾಶ ಕೊಡೋದಿಲ್ಲ ಅಂದ್ರು. ನೀವು ಸ್ಟ್ರಿಕ್ಟ್ ಅದೀರಿ ಒಳ್ಳೇದು, ನೀವು ಡಿಜೆಗೆ ಪರ್ಮಿಷನ್ ಕೊಡೋದಿಲ್ಲ ಧನ್ಯವಾದಗಳು. ಹಾಗಾದ್ರೆ ಮೊದಲು ಮಸೀದಿ ಮೇಲಿನ ಮೈಕ್ ತೆರವು ಗೊಳಿಸಿ ಎಂದು ಸವಾಲು ಹಾಕಿದರು.