ಬಸವ ಜಯಂತಿ | ಎತ್ತುಗಳ ಮೆರವಣಿಗೆ ವೇಳೆ ಚಪ್ಪಲಿ ತೂರಿದ ಅನ್ಯಕೋಮಿನ ಯುವಕ
ಹಾವೇರಿ: ಸವಣೂರು ತಾಲೂಕಿನ ಕಾರಡಗಿ ಗ್ರಾಮದಲ್ಲಿ ಎತ್ತುಗಳ ಮೆರವಣಿಗೆ ವೇಳೆ ಕಿಡಗೇಡಿ ಚಪ್ಪಲಿ ತೂರಿದ್ದಾನೆ.
ಮಂಗಳವಾರ ಜಗಜ್ಯೋತಿ ಬಸವೇಶ್ವರರ ಜಯಂತಿ ನಿಮ್ಮಿತ್ತ ರಾತ್ರಿ ಗ್ರಾಮದಲ್ಲಿ ಎತ್ತುಗಳ ಮೆರವಣಿಗೆ ಮಾಡುತ್ತಿದ್ದರು. ಈ ವೇಳೆ ಖಾಜಾಮುದ್ದೀನ್ ಕೋಲ್ಕಾರ(29) ಎತ್ತುಗಳ ಮೇಲೆ ಚಪ್ಪಲಿ ತೂರಿದ್ದಾನೆ.
ಇದರಿಂದ ಆಕ್ರೋಶಗೊಂಡ ಗ್ರಾಮಸ್ತರು ಯುವಕನನ್ನು ಹಿಡಿದು ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಖಾಜಾಮುದ್ಧೀನ್‌ನನ್ನು ವಶಕ್ಕೆ ಪಡೆದಿದ್ದಾರೆ.
ಥಳಿತಕ್ಕೆ ಒಳಗಾದ ಆರೋಪಿ ತಲೆಗೆ ಗಾಯವಾದ ಹಿನ್ನೆಲೆಯಲ್ಲಿ ಈಗ ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸವಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.









