ಸರಕಾರದ ವತಿಯಿಂದ ಆಚರಿಸಿದ ಬಸವ ಜಯಂತಿಗೆ ಜನನಾಯಕರು ಗೈರು
ವಿಜಯಪುರ: ನಗರದಲ್ಲಿ ಸರಕಾದ ವತಿಯಿಂದ ಇದೇ ಮೊದಲ ಬಾರಿಗೆ ಬಸವ ಜಯಂತಿ ಆಚರಿಸಲಾಗಿದ್ದು, ಕಾರ್ಯಕ್ರಮಕ್ಕೆ ಹಲವು ನಾಯಕರು ಗೈರಾಗಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ ಜಿಲ್ಲಾ ಪಂಚಾಯತಿ ಹಾಗೂ ಕೂಡಲ ಸಂಗಮ ಅಭಿವೃದ್ಧಿ ಪ್ರಾಧಿಕಾರ ಜಂಟಿಯಾಗಿ ಬಸವ ಜಯಂತಿ ಆಚರಣೆ ಮಾಡಲಾಗಿತ್ತು. ಕಾರ್ಯಕ್ರಮಕ್ಕೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನೀಲ್ ಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಗೈರಾಗಿದ್ದರು. ಹಾಗೇ ಜಿಲ್ಲೆಯ ಬಹುತೇಕ ಶಾಸಕರು ಹಾಗೂ ಸಂಸದರು ಕೂಡಾ ಹಾಜಿರಲಿಲ್ಲ.
ಬಸವ ಜನ್ಮಭೂಮಿಯಲ್ಲಿ ಬಸವ ಜಯಂತಿಯನ್ನು ಆಚರಿಸಬೇಕು ಎಂಬ ಬೇಡಿಕೆಗೆ ಸರಕಾರ ಸ್ಪಂದಿಸಿದೆ. ಮೂರು ದಿನಗಳ ಕಾರ್ಯಕ್ರಮ ನಡೆಸಲಾಗುತ್ತದೆ ಎಂದು ಸರಕಾರ ಆದೇಶ ಹೊರಡಿಸಸಿತ್ತು. ಆದೇಶಕ್ಕೆ ಮಾತ್ರ ಬಸವ ಜಯಂತಿ ಸೀಮಿತವಾಯಿತು ಎಂದು ಜನಸಾಮಾನ್ಯರು ಅಸಮಾಧಾನ ಹೊರಹಾಕಿದ್ದಾರೆ.