ಹಣ ಹಂಚಿದ ಅನುಭವದ ಮೇಲೆ ನಮ್ಮ ಮೇಲೆ ಆರೋಪ : ಸಿದ್ದುಗೆ ಸಿಎಂ ಟಾಂಗ್ Basavaraj-Bommai saaksha tv
ಹುಬ್ಬಳ್ಳಿ : ಉಪಚುನಾವಣೆ ಗೆಲ್ಲಲು ಬಿಜೆಪಿಯವರು ಹಣ ಹಂಚುತ್ತಿದ್ದಾರೆ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟಾಂಗ್ ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹಣ ಹಂಚಿದ ಅನುಭವದ ಮೇಲೆ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ.
ಅದು ಅವರ ಅನುಭವ. ನಂಜನಗೂಡು, ಗುಂಡ್ಲುಪೇಟೆ ಕುಂದಗೋಳದಲ್ಲಿ ಸಿದ್ದರಾಮಯ್ಯ ಏನು ಮಾಡಿದ್ದಾರೆ ಗೊತ್ತಿದೆ ಎಂದು ಹೇಳಿದರು.
ಇದೇ ವೇಳೆ ಲಸಿಕಾ ಅಭಿಯಾನದ ಬಗ್ಗೆ ಸಿದ್ದರಾಮಯ್ಯ ಟೀಕೆ ಬಗ್ಗೆ ಮಾತನಾಡಿ, 100 ಕೋಟಿ ಡೋಸ್ ಲಸಿಕೆ ನೀಡಿದ್ದೇವೆ. 100 ಕೋಟಿ ಲಸಿಕೆ ಯಾರು ಯಾರು ತೆಗೆದುಕೊಂಡಿದ್ದಾರೆ ಅವರು ಎದ್ದು ನಿಂತು ಹೇಳಬೇಕಾ ಎಂದು ಪ್ರಶ್ನಿಸಿದರು.