ಬೊಮ್ಮಾಯಿ ಜನತಾದಳದ ಸಿಎಂ : ಹೆಚ್ ಡಿ ಕುಮಾರಸ್ವಾಮಿ
ಬೆಂಗಳೂರು: ಬಸವರಾಜ ಬೊಮ್ಮಾಯಿ ಜನತಾದಳದ ಸಿಎಂ. ಅವರು ಬಿಜೆಪಿಯಿಂದ ಆಯ್ಕೆ ಆಗಿದ್ದರೂ ಜನತಾದಳದವರೇ ಮುಖ್ಯಮಂತ್ರಿಗಳು ಆಗಿದ್ದಾರೆ ಎಂಬ ಭಾವನೆ ನಮಗೆ ಇದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾನತಾಡಿದ ಅವರು, ಬೊಮ್ಮಾಯಿ ಅವರಿಗೆ ಅನುಭವವಿದೆ. ಬಿಜೆಪಿಯಿಂದ ಆಯ್ಕೆ ಆಗಿದ್ದರೂ ಜನತಾದಳದವರೇ ಮುಖ್ಯಮಂತ್ರಿಗಳು ಆಗಿದ್ದಾರೆ ಎಂಬ ಭಾವನೆ ನಮಗೆ ಇದೆ.
ಈಗಲೂ ಬೊಮ್ಮಾಯಿ ನಮಗೆ ಸ್ನೇಹಿತರು, ಒಳ್ಳೆ ಹಿತೈಷಿಗಳು. ಅವರು ಉತ್ತಮವಾಗಿ ಕೆಲಸ ಮಾಡಲಿ ಎಂದು ಹಾರೈಸಿದರು.
ಇದೇ ವೇಳೆ ಕೇಂದ್ರದ ವಿರುದ್ಧ ಕಿಡಿಕಾರಿದ ಹೆಚ್ ಡಿ ಕುಮಾರಸ್ವಾಮಿ, ಯಡಿಯೂರಪ್ಪ ಅವರಿಗೆ ಮಾಡಿದ ರೀತಿಯಲ್ಲಿ ಬೊಮ್ಮಾಯಿ ಅವರಿಗೆ ಕೇಂದ್ರ ಸರ್ಕಾರ ಅನ್ಯಾಯ ಮಾಡದಿರಲಿ.
ಯಡಿಯೂರಪ್ಪರನ್ನ ಸಿಎಂ ಅಂತ ಭಾವನೆ ಮೂಡುವುದಕ್ಕೂ ಕೇಂದ್ರದ ನಾಯಕರು ಅವಕಾಶ ಕೊಡಲಿಲ್ಲ. ಬೊಮ್ಮಾಯಿ ಅವರನ್ನು ಈಗ ಇಕ್ಕಟ್ಟಿಗೆ ಸಿಲುಕಿಸುವ ಕೆಲಸ ಕೇಂದ್ರ ಮಾಡುವುದು ಬೇಡ.
ಬೊಮ್ಮಾಯಿ ಅವರಿಗೆ ಸರಿಯಾದ ಸಹಕಾರ, ಅನುದಾನವನ್ನು ನೀಡಬೇಕು. ರಾಜ್ಯದ ಬೇಡಿಕೆ, ಇಲಾಖೆ ಹಣ, ಜಿಎಸ್ ಟಿ ಹಣ ಸರಿಯಾಗಿ ರಾಜ್ಯಕ್ಕೆ ನೀಡಿ ಬೊಮ್ಮಾಯಿಗೆ ಕೇಂದ್ರ ಸಹಕಾರ ನೀಡಲಿ. ಯಾರ ಹಿಡಿತಕ್ಕೆ ಬೊಮ್ಮಾಯಿ ಅವರು ಒಳಗಾಗೋದು ಬೇಡ ಎಂದು ಆಶಿಸಿದರು.