Basavaraja Bommai | ಆರೋಗ್ಯ ಕರ್ನಾಟಕಕ್ಕೆ ಸರ್ಕಾರ ಬದ್ಧ
ಬೆಂಗಳೂರು : ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಉತ್ತರಹಳ್ಳಿ ಬಿಬಿಎಂಪಿ ಪಿಯು ಕಾಲೇಜ್ ಮೈದಾನದಲ್ಲಿ ಜನಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. basavaraja-bommai-world cancer day speech bangalore
ಬಳಿಕ ಮಾತನಾಡಿದ ಮುಖ್ಯಮಂತ್ರಿಗಳು, ಕಿದ್ವಾಯಿ ಇಡೀ ದೇಶದಲ್ಲಿ ದೊಡ್ಡ ಕ್ಯಾನ್ಸರ್ ಸಂಸ್ಥೆಯಾಗಿದ್ದು, ಆಧುನೀಕರಣ ಮಾಡಬೇಕಿದೆ. ಕ್ಯಾನ್ಸರ್ ಗುರುತಿಸುವ ಸ್ಕ್ಯಾನ್ ಮಾಡುವ ಅತ್ಯಾಧುನಿಕ ಸವಲತ್ತು ತರಬೇಕಿದೆ. ಇದನ್ನು 10 ಸಾವಿರದೊಳಗೆ ಸ್ಕ್ಯಾನಿಂಗ್ ಮಾಡಿಕೊಡುವ ಅವಕಾಶ ಮಾಡಲಿದ್ದೇವೆ. ಎಲ್ಲಾ ಸ್ಥಳೀಯ ಸೆಂಟರ್ ಗಳಲ್ಲಿ ಕ್ಯಾನ್ಸರ್ ಟ್ರೀಟ್ಮೆಂಟ್ ಸೆಂಟರ್ ಆರಂಭಿಸಲಿದ್ದೇವೆ. ಈಗಾಗಲೇ ಕೆಲ ಜಿಲ್ಲೆಗಳಲ್ಲಿ ಕ್ಯಾನ್ಸರ್ ವಿಭಾಗವಿದೆ ಎಂದು ತಿಳಿಸಿದರು.
ದುಬಾರಿಯಾದ ಔಷಧಿಗಳು ಸುಲಭವಾಗಿ ಸಿಗುವಂತಾಗಲು ತಯಾರಿಕರು ಹಾಗೂ ಕೇಂದ್ರ ಸರ್ಕಾರದ ಜೊತೆ ಮಾತುಕತೆ ನಡೆಸಲಾಗ್ತಿದೆ. ಜನೌಷಧಿ ಕೇಂದ್ರಗಳಲ್ಲಿ ಕ್ಯಾನ್ಸರ್ ಔಷಧಿ ಸಿಗುವಂತಾಗಬೇಕು, ಇದಕ್ಕಾಗಿ ಒಂದು ಸೊಸೈಟಿ ಮಾಡಲಾಗುವುದು. ಅಗ್ಗದರದಲ್ಲಿ ಕ್ಯಾನ್ಸರ್ ಔಷಧಿ ಕೊಡುವಂತಾಗಬೇಕು. ಉತ್ತಮ ಆಂಬುಲೆನ್ಸ್ ಸಿಸ್ಟಂ ತರಲಾಗುತ್ತದೆ. ಆರೋಗ್ಯ ಕರ್ನಾಟಕಕ್ಕೆ ಎಲ್ಲಾ ರೀತಿಯಲ್ಲಿ ಸರ್ಕಾರ ಬದ್ಧವಾಗಿದೆ. ಕ್ಯಾನ್ಸರ್ ಹಲವಾರು ವರ್ಷದಿಂದ ಕಾಡ್ತಿದ್ದು ವಿಜ್ಞಾನಿಗಳಿಗೇ ಸವಾಲಾಗಿದೆ. ಎಲ್ಲಾ ಅಂಗಾಂಗಕ್ಕೆ ಬರುತ್ತಿದ್ದು ಸಾವುಗಳು ಸಂಭವಿಸ್ತಿವೆ. ಕ್ಯಾನ್ಸರ್ ರೋಗಿಗಳನ್ನು ಉಳಿಸುವ ಸಾಕಷ್ಟು ಔಷಧಗಳು ಬಂದಿವೆ. ಟಿಬಿ, ಕುಷ್ಟರೋಗಕ್ಕೆ ಇರುವ ಔಷಧಿಯಂತೆಯೇ ಕ್ಯಾನ್ಸರ್ ಗೂ ಬಂದಿವೆ. ಕ್ಯಾನ್ಸರ್ ಕುರಿತು ಸಾರ್ವಜನಿಕರು ಎಚ್ಚರ ಆಗ್ಬೇಕು ಎಂದು ನುಡಿದರು.
ಸುಮಾರು 10-12 ವರ್ಷದಿಂದ ಧ್ವನಿಪಟಲದ ಕ್ಯಾನ್ಸರ್ ನಿಂದ ಬಳಲುತ್ತಿದ್ರು. ಅವರಿಗೆ ಯಶಸ್ವಿಯಾಗಿ ಧ್ವನಿಪಟಲ ಆಪರೇಷನ್ ಮಾಡಲಾಗಿದೆ. ಈಗ ಮಾತನಾಡಬಲ್ಲರು. ಆ ಮಾತಿಂದ ಅವರಿಗೆ ಆತ್ಮಸ್ಥೈರ್ಯ ಬಂದಿದೆ. ಕ್ಯಾನ್ಸರ್ ಅನುಭವ ಹಂಚಿಕೊಳ್ತಾರೆ, ಧೂಮಪಾನ-ಮಧ್ಯಪಾನ ಮಾಡ್ಬೇಡಿ ಎಂಬ ಸಂದೇಶ ಸಾರಿದ್ರು. ಇದು ವೈದ್ಯಕೀಯ ಜಯ, ಈ ಕ್ಯಾನ್ಸರ್ ಜಾಗೃತಿ ಅಭಿಯಾನ ಉದ್ಘಾಟಿಸಿ ಒಂದು ವಾರ ಇಡೀ ರಾಜ್ಯದಲ್ಲಿ ಅಭಿಯಾನ ನಡೆಯಲಿದೆ. ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುವ ಸ್ತನಕ್ಯಾನ್ಸರಿಗೆ ವಿಶೇಷ ಅಭಿಯಾನ ನಡೆಯಬೇಕು. ತಾಲೂಕು ಮಟ್ಟದ ಆಸ್ಪತ್ರೆಯಿಂದ ಕಿದ್ವಾಯಿ ಆಸ್ಪತ್ರೆಯವರೆಗೂ ವಿಶೇಷವಾದ ಅಭಿಯಾನವನ್ನು ರೂಪಿಸಬೇಕು. ತಾಯಿ ಆರೋಗ್ಯವಾಗಿದ್ದರೆ ಇಡೀ ಕುಟುಂಬ, ಸಮುದಾಯ ಆರೋಗ್ಯದಲ್ಲಿದ್ದಂತೆ. ಸಮೃದ್ಧಿ ಕರ್ನಾಟಕ ಆಗಲು ಆರೋಗ್ಯ ಕರ್ನಾಟಕ ಬಹಳ ಮುಖ್ಯ ಎಂದು ಮುಖ್ಯಮಂತ್ರಗಳು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಆರ್ ಅಶೋಕ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಡಾ. ಕೆ. ಸುಧಾಕರ್, ಶಾಸಕ ಎಂ. ಕೃಷ್ಣಪ್ಪ, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತ ಭಾಗಿಯಾಗಿದ್ದರು.