Basavaraja Bommayi
ಬೆಂಗಳೂರು : ನಿಜವಾದ ಕೊರೋನಾ ವಾರಿಯರ್ ಇದ್ರೆ ಅದು ಪೊಲೀಸರು ಮಾತ್ರ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಹೇಳಿದ್ದಾರೆ. ಹಮ್ಮಿಕೊಳ್ಳಲಾಗಿದ್ದ ಪೊಲೀಸ್ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಬಸವರಾಜ ಬೊಮ್ಮಾಯಿ ಅವರು ಬಾಗವಹಿಸಿದ್ದರು. ಈ ವೇಳೆ ಕಾರ್ಯಕ್ರಮದಲ್ಲಿ ಹುತಾತ್ಮರಾದ ಪೊಲೀಸ್ ಭಾವ ಚಿತ್ರಗಳ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಸ್ಮರಣಾಂಜಲಿ ಹಲವಾರು ವಿಚಾರಗಳನ್ನು ನಮ್ಮ ಮುಂದೆ ನಿಲ್ಲಿಸಿದೆ. ಹೃದಯ ಮಿಡಿತವಾಗಿರುವ ಹಲವಾರು ಪ್ರಸಂಗ ನೆನಪಿನ ಪರದೆಯ ಮೇಲೆ ಬರ್ತವೆ. ಈಗ ನನ್ನಲ್ಲಿ ಎರಡು ಪ್ರಶ್ನೆ ಉದ್ಭವಾಗಿವೆ. ಏಕೆ ಕೊರೊನಾ ವೇಳೆ ಪೊಲೀಸರು ಪ್ರಾಣ ತೆತ್ತರು..?? ಗೃಹ ಇಲಾಖೆಯ ಮಂತ್ರಿಯಾಗಿ ಸಾವು ನೋವನ್ನು ತಡೆಯಲಾಗಲಿಲ್ಲವೇಕೆ ಎಂಬ ಪಾಪ ಪ್ರಜ್ಞೆ ಕಾಡ್ತಿದೆ. ನನಗೆ ನಮ್ಮ ಪೊಲೀಸರ ಪ್ರಾಣಗಳನ್ನು ಉಳಿಸಿಕೊಳ್ಳಲಾಗಲಿಲ್ಲ ಎಂಬ ನೋವಿದೆ. ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಶಿರಾದಲ್ಲಿ ಬಿಜೆಪಿ ಅಲೆ ಎದ್ದಿರೋದು ವಿಪಕ್ಷಗಳಿಗೆ ಭಯ ಹುಟ್ಟಿಸಿದೆ : ಬಿ.ವೈ.ವಿಜಯೇಂದ್ರ
ಮುಂದುವರೆದು ಮಾತನಾಡಿದ ಬೊಮ್ಮಾಯಿ ಅವರು ನಿಜವಾದ ಕೊರೊನಾ ವಾರಿಯರ್ ಇದ್ರೆ ಅದು ಪೊಲೀಸರು ಮಾತ್ರ. ಬೇರೆ ಇಲಾಖೆಯಲ್ಲಿ ಸಹಾಯಧನ ಘೋಷಣೆ ಆಯ್ತು, ಅನೇಕ ಇಲಾಖೆ ಪ್ರಸ್ತಾವನೆಗಳನ್ನು ಕಳುಹಿಸಲಾಯ್ತು, ಚರ್ಚೆ ಮಾಡುವಾಗಿದ್ದರೆ ಪರಿಹಾರ ಕೊಡಲೇ ಬೇಡಿ. ಪೊಲೀಸರು ನಿಜವಾದ ಕೊರೊನಾ ವಾರಿಯರ್ಸ್. ಯಾವ ಕಾರಣಕ್ಕೂ ಪ್ರಶ್ನೆ ಮಾಡದೆ ಪರಿಹಾರ ಕೊಡಿ ಎಂದಿದ್ದೆ. ಮುಖ್ಯಮಂತ್ರಿಗಳು 30 ಲಕ್ಷ ಕೊಡಲು ಒಪ್ಪಿದರು ಎಂದು ತಿಳಿಸಿದರು. ಇದೇ ವೇಳೆ ಪೊಲೀಸರು ದೊಡ್ಡ ಕುಟುಂಬ ಇದ್ದಂತೆ. ಬೇರೆ ಇಲಾಖೆಯಲ್ಲಿ ಯಾರಿಗಾದರು ತೊಂದರೆಯಾದರೆ, ಇಡೀ ಇಲಾಖೆ ಸ್ಪಂದಿಸುತ್ತದೆ. ಎಂದಿದಾರೆ.
ಕೈ-ಕಮಲ `ಕಾಡುಮನುಷ್ಯ’ ಕಿತ್ತಾಟ; ಹುಲಿಯಾ ಏಟಿಗೆ ಬಿಜೆಪಿ ಕೊಟ್ಟ ತಿರುಗೇಟು ಹೇಗಿದೆ ಗೊತ್ತಾ..!
ಇನ್ನೂ ಇದೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಪ್ರವೀಣ್ ಸೂದ್ ಮಾತನಾಡಿ, ಇದೇ ಮೊದಲ ಬಾರಿಗೆ ಸ್ಮರಣಾಂಜಲಿ ಪೊಲೀಸ್ ಅಮರವೀರರ ಭಾವಚಿತ್ರ ಪ್ರದರ್ಶನ ಚಿತ್ರಕಲಾ ಪರಿಷತ್ ನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕೊರೊನಾ ವೈರಸ್ ನಿಂದ ಕರ್ತವ್ಯದಲ್ಲಿ ಇದ್ದಾಗಲೇ 85 ಪೊಲೀಸರು ಜೀವ ಕಳೆದುಕೊಂಡಿದ್ದಾರೆ. ಇಡೀ ಜಗತ್ತೇ ಸ್ತಬ್ಧವಾಗಿರುವಾಗ ಪೊಲೀಸರು ಬೀದಿಗಿಳಿದು ವಾರಿಯಸ್ರ್ಗಳಾಗಿ ಕೆಲಸ ಮಾಡಿದ್ದಾರೆ. ಅವರ ಕರ್ತವ್ಯ ಪ್ರಜ್ಞೆ, ತ್ಯಾಗ ಸ್ಮರಣೀಯ ಎಂದರು.
ಇನ್ನು ಈ ಪೊಲೀಸ್ ಸ್ಮರಣಾಂಜಲಿ ಕಾರ್ಯಕ್ರಮ ಚಿತ್ರಕಲಾ ಪರಿಷತ್ ನಲ್ಲಿ ನಾಲ್ಕು ದಿನಗಳ ಕಾಲ ನಡೆಯಲಿದ್ದು, ಪೊಲೀಸ್ ಅಮರವೀರರ ಭಾವಚಿತ್ರ ಪ್ರದರ್ಶನ ಮಾಡಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಡಿಜಿ ಐಜಿಪಿ ಪ್ರವೀಣ್ ಸೂದ್, ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸೇರಿ ಹಿರಿಯ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದರು.
Basavaraja Bommayi
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel