`ಇತರರ ಬ್ಯಾಟ್ಸ್.. ಪಕ್ಕದ ಮನೆಯವನ ಹೆಂಡ್ತಿ ಇದ್ದಂತೆ’ : ಡಿಕೆ ಶಾಕಿಂಗ್ ಕಾಮೆಂಟ್ಸ್
ಲಂಡನ್ : ಬ್ಯಾಟ್ ಗಳು ಪಕ್ಕದಮನೆ ವ್ಯಕ್ತಿಯ ಹೆಂಡತಿ ಇದ್ದಂತೆ, ಅವು ಯಾವಾಗಲೂ ಚೆನ್ನಾಗಿ ಕಾಣಿಸುತ್ತವೆ ಎಂದು ಟೀಂ ಇಂಡಿಯಾ ಮಾಜಿ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಹೇಳಿದ್ದಾರೆ.
ಇತ್ತೀಚೆಗೆ ಮುಕ್ತಾಯಗೊಂಡ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಮೂಲಕ ಕ್ರಿಕೆಟ್ ನಿರೂಪಕರಾದ ಡಿಕೆ, ಬ್ಯಾಟ್ಸ್ ಮನ್, ಬ್ಯಾಟ್ ನಡುವಿನ ಸಂಬಂಧದ ಬಗ್ಗೆ ಮಾತನಾಡುವಾಗ ಈ ರೀತಿಯಾದ ಹೇಳಿಕೆ ನೀಡಿದ್ದಾರೆ.
ಬ್ಯಾಟ್ಸ್ ಮೆನ್ ಗೆ ತನ್ನ ಬ್ಯಾಟ್ ಇಷ್ಟವಾಗದೇ ಇರೋದು ತುಂಬಾ ಸಾಮಾನ್ಯ ವಿಷಯ. ಇತರ ಬ್ಯಾಟ್ಸ್ ಮೆನ್ಸ್ ಬಳಸುವ ಬ್ಯಾಟ್ ಗಳ ಮೇಲೆ ಅವರಿಗೆ ವಿಪರೀತವಾದ ಇಷ್ಟ ಇರುತ್ತದೆ. ಅದನ್ನು ಒಂದು ರೀತಿಯಲ್ಲಿ ಹೇಳೋದಾದ್ರೆ ಇತರರ ಬ್ಯಾಟ್ಸ್ ಪಕ್ಕದ ಮನೆ ಹೆಂಡತಿ ಇದ್ದಂತೆ. ಅವು ಯಾವಾಗ್ಲೂ ತುಂಬಾ ಚೆಂದ ಅನಿಸುತ್ತವೆ ಎಂದು ಕಾರ್ತಿಕ್ ತಮಾಷೆ ಮಾಡಿದ್ದಾರೆ..
ಕಾರ್ತಿಕ್ ಅವರ ಈ ಕಾಮೆಂಟ್‍ಗಳ ವೀಡಿಯೊ ಪ್ರಸ್ತುತ ಸೋಶಿಯಲ್ ಮೀಡಿಯಾದಲ್ಲಿ ಹಲ್ ಚಲ್ ಸೃಷ್ಠಿಸುತ್ತಿದೆ. ನೆಟ್ಟಿಗರು ತಮ್ಮದೇ ಆದ ಶೈಲಿಯಲ್ಲಿ ಕಾಮೆಂಟ್‍ಗಳನ್ನು ಸುರಿಯುತ್ತಿದ್ದಾರೆ. ತಮ್ಮ ವೈಯಕ್ತಿಕ ವಿಷಯಗಳು ನೆನಪಾಗಿ ಕಾರ್ತಿಕ್ ಇಂತಹ ಹೇಳಿಕೆಗಳನ್ನು ನೀಡಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್ಸ್ ಮಾಡುತ್ತಿದ್ದಾರೆ..
ಇನ್ನು ದಿನೇಶ್ ಕಾರ್ತಿಕ್ ಭಾರತದ ಪರವಾಗಿ 26 ಟೆಸ್ಟ್, 94 ಏಕದಿನ ಮತ್ತು 32 ಟಿ 20 ಪಂದ್ಯಗಳನ್ನಾಡಿದ್ದಾರೆ