ಬಿಬಿಎಂಪಿ ರೈತರಿಗೆ ಉಚಿತ ಸಾವಯವ ಗೊಬ್ಬರವನ್ನು ವಿತರಣೆ ಮಾಡಲು ಮುಂದಾಗಿದೆ. ಬಿಬಿಎಂಪಿಯ 7 ಘನತ್ಯಾಜ್ಯ ಸಂಸ್ಕಾರಣಾ ಘಟಕಗಳಲ್ಲಿರುವ ಹಸಿ ತ್ಯಾಜ್ಯದಿಂದ ವಿಂಡ್ರೋ ವಿಧಾನದಲ್ಲಿ ಸಂಸ್ಕರಿಸಿ ತಯಾರಿಸಿದ ಸಾವಯವ ಗೊಬ್ಬರವನ್ನು ರೈತರಿಗೆ ನೀಡಲು ಪಾಲಿಕೆ ನಿರ್ಧರಿಸಿದೆ. ಬಿಬಿಯಂಪಿಯ ಈ ಕ್ರಮದಿಂದಾಗಿ ಸಾವಯವ ಗೊಬ್ಬರವನ್ನ ತೋಟಗಾರಿಕೆ ಬೆಳೆಗಳಿಗೆ ರೈತರು ಉಚಿತವಾಗಿ ಪಡೆಯಬಹುದು. ಈ ಗೊಬ್ಬರವನ್ನು ತೆಂಗು, ಅಡಿಕೆ, ಮಾವು, ಸೀಬೆ, ದಾಳಿಂಬೆ, ಇನ್ನಿತರ ತೋಟಗಾರಿಕೆ ಬೆಳೆಗಳಿಗೆ ಬಳಸಬಹುದು. ರೈತರು ತಮ್ಮ ಹತ್ತಿರದ ಘಟಕಕ್ಕೆ ತೆರಳಿ ಸಾವಯವ ಗೊಬ್ಬರ ಪಡೆಯಬಹುದಾಗಿದೆ. ಇನ್ನೂ ಸೀಗೆಹಳ್ಳಿ, ಸುಬ್ಬರಾಯನಪಾಳ್ಯ, ದೊಡ್ಡಬಿದರಕಲ್ಲು, ಕನ್ನಹಳ್ಳಿ, ಕೆಸಿಡಿಸಿ, ಚಿಕ್ಕನಾಗಮಂಗಲ, ಲಿಂಗಧೀರನಹಳ್ಳಿಗಳಲ್ಲಿನ ಘಟಕಗಳಲ್ಲಿ ಸಾವಯವ ಗೊಬ್ಬರವನ್ನು ವಿತರಣೆ ಮಾಡಲಾಗುತ್ತಿದೆ.