ಬೆಂಗಳೂರು : ಪ್ರತಿ ವರ್ಷ ಸಾವಿರಾರು ಕೋಟಿ ರೂಪಾಯಿಗಳನ್ನು ಬಿಬಿಎಂಪಿ (BBMP ) ಕಸ ವಿಲೇವಾರಿಗೆ ಖರ್ಚು ಮಾಡುತ್ತದೆ ಆದರೆ 2016 ಬಿಟ್ಟರೆ ಒಂದು ಬಾರಿಯೂ 100 ಸ್ಥಾನದ ಒಳಗೆ ಬಂದಿಲ್ಲ. ಕಸ ವಿಲೇವಾರಿ ಪಾಲಿಕೆಯ ಮೂಲಭೂತ ಕರ್ತವ್ಯ ಈ ಪ್ರಮುಖ ಕೆಲಸವನ್ನೇ ಮರೆತು ದಂಧೆಯಲ್ಲಿ ತೊಡಗಿರುವ ಇದು ಇನ್ನು ಹತ್ತು ವರ್ಷ ಕಳೆದರೂ ಉತ್ತಮ ಸ್ಥಾನ ಗಳಿಸುವುದು ಹಗಲುಗನಸು ಎಂದು ಆಮ್ ಆದ್ಮಿ ಪಕ್ಷ ಬೆಂಗಳೂರು ಘಟಕದ ಅಧ್ಯಕ್ಷರಾದ ಮೋಹನ್ ದಾಸರಿ ವ್ಯಂಗ್ಯವಾಡಿದರು.
2119 ರಲ್ಲಿ 194 ನೇ ಸ್ಥಾನ, 2020 ರಲ್ಲಿ 214 ನೇ ಸ್ಥಾನ, ಒಂದು ಬಾರಿಯೂ ತೃಪ್ತಿದಾಯಕವಾದ ಸ್ಥಾನ ಗಳಿಸದ ಬೆಂಗಳೂರು, ಆದರೆ ಬಿಬಿಎಂಪಿ (BBMP )ಪ್ರತಿ ವರ್ಷ ಸ್ವಚ್ಚ ಸರ್ವೇಕ್ಷಣೆಗೆ ಎಂದು ಜನರ ತೆರಿಗೆ ದುಡ್ಡನ್ನು ಹಾಳು ಮಾಡುತ್ತಿದೆ ಹೊರತು ಮತ್ತಿನ್ನೇನೂ ಮಾಡುತ್ತಿಲ್ಲ. ಇದರ ಬದಲು ಸ್ಪರ್ಧೆಯಲ್ಲಿ ಭಾಗವಹಿಸದೆ ಇರುವುದೇ ಉತ್ತಮ ಎಂದು ಹೇಳಿದರು.
ಮೂಲಭೂತ ಹಕ್ಕಿನ ಉಲ್ಲಂಘನೆ
ಸ್ವಚ್ಚ ವಾತಾವರಣದಲ್ಲಿ ಜೀವಿಸುವುದು, ಜೀವಿಸುವಂತೆ ಮಾಡುವುದು ಆಡಳಿತ ನಡೆಸುತ್ತಿರುವವರ ಆದ್ಯ ಕರ್ತವ್ಯ. ಸಂವಿಧಾನದ ಕಲಂ 21ರ ಸ್ಪಷ್ಟ ಉಲ್ಲಂಘನೆ. ಅವೈಜ್ಞಾನಿಕ, ಕಳಪೆ ಹಾಗೂ ವಿಫಲವಾಗಿರುವ ಇಂದೋರ್ ಮಾದರಿಯನ್ನು ಅನುಕರಿಸಲು ಹೋಗಿ ಯಡವಿದ್ದೂ ಅಲ್ಲದೇ, ಕಸ ನಿರ್ವಹಣೆಯ ಗುತ್ತಿಗೆ ಪಡೆದಿರುವ ಗುತ್ತಿಗೆದಾರರ ಅಡಿಯಾಳಿನಂತೆ ವರ್ತಿಸುತ್ತಿರುವ ಬಿಬಿಎಂಪಿಯಿಂದ ಬೆಂಗಳೂರು ಕಸದ ಕೊಂಪೆಯಾಗಿದೆ.
ಅಲ್ಲದೇ ಬೆಂಗಳೂರಿನ ಕಸವನ್ನು ಪಕ್ಕದ ಹಳ್ಳಿಗಳಿಗೆ ಸಾಗಿಸಿ ಆ ಊರುಗಳನ್ನೂ ನರಕ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಬಜೆಟ್‍ನಲ್ಲಿ ‘ಶುಭ್ರ ಬೆಂಗಳೂರು’ ಎಂಬ ಹೊಸ ಯೋಜನೆ ಜಾರಿಗೊಳಿಸಿದ್ದ ಸರ್ಕಾರ, 999 ಕೋಟಿ ಮೊತ್ತದ ಕ್ರಿಯಾಯೋಜನೆ ಪ್ರಕಟಿಸಿತ್ತು.
ಹೀಗೆ ಪ್ರತಿ ವರ್ಷ 1 ಸಾವಿರ ಕೋಟಿಗೂ ಹೆಚ್ಚು ಹಣವನ್ನು ಖರ್ಚು ಮಾಡಿಯೂ ಸಹ ಕಸದ ಕೊಂಪೆ ಮಾಡಿರುವ ಬಿಬಿಎಂಪಿ ಸಂಪೂರ್ಣವಾಗಿ ಕಸದ ಮಾಫಿಯಾಕ್ಕೆ ತಲೆಬಾಗಿದೆ.
ಇದನ್ನೂ ಓದಿ : ಶೀಘ್ರ ಗ್ರಾಮ ಪಂಚಾಯತ್ ಚುನಾವಣೆ ನಡೆಸಿ : ರಾಜ್ಯ ಸರ್ಕಾರಕ್ಕೆ ಪತ್ರ
ಪ್ರತಿ ದಿನ ನಗರದಲ್ಲಿ ಸಂಗ್ರಹವಾಗುತ್ತಿರುವ ಸರಾಸರಿ ಕಸದ ಪ್ರಮಾಣ 5900 ಟನ್, ಇದರಲ್ಲಿ ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿಯಾಗುತ್ತಿರುವುದು ಕೇವಲ 1,150 ಟನ್ ಕಸ ಮಾತ್ರ ನಗರದ ಸ್ವಚ್ಚತೆಗೆ ಹಗಲಿರುಳು ಶ್ರಮಿಸುತ್ತಿರುವ ಪೌರ ಕಾರ್ಮಿಕರನ್ನೂ ಗೌರವದಿಂದ ಕಾಣದ ಬಿಬಿಎಂಪಿ ಕನಿಷ್ಠ ಸೌಲಭ್ಯಗಳನ್ನು ನೀಡಿ, ಇಷ್ಟು ದೊಡ್ಡ ನಗರವನ್ನು ಸ್ವಚ್ಚಗೊಳಿಸಿ ಎಂದು ಒತ್ತಡ ಹಾಕುತ್ತಿದೆ. ಪೌರಕಾರ್ಮಿಕರಿಗೂ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಮೋಹನ್ ದಾಸರಿ ಅವರು ಆಗ್ರಹಿಸಿದರು.
ಕಸದ ಕೊಂಪೆ ಆಗಿರುವ ಬೆಂಗಳೂರನ್ನು ಪ್ರತಿ ಭಾನುವಾರ ಆಮ್ ಆದ್ಮಿ ಪಕ್ಷದಿಂದ ಸ್ಚಚ್ಚಗೊಳಿಸುವ ಸ್ಚಚ್ಚ ಬೆಂಗಳೂರು (ಲೆಟ್ಸ್ ಕ್ಲೀನ್ ಬೆಂಗಳೂರು) ಅಭಿಯಾನವನ್ನು ಪಕ್ಷ ಪ್ರಾರಂಭಿಸಿದೆ.
ಈ ಅಭಿಯಾನದ ಮೂಲಕ ಬ್ಲಾಕ್ ಸ್ಪಾಟ್ ಸೇರಿದಂತೆ ಸರಿಯಾಗಿ ಕಸ ವಿಲೇವಾರಿ ಮಾಡದ ಜಾಗಗಳಿಗೆ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಭೇಟಿ ಕೊಟ್ಟು ಸ್ವಚ್ಚಗೊಳಿಸಲಿದ್ದಾರೆ.
ಈ ಅಭಿಯಾನ ಬಿಬಿಎಂಪಿ ಸರಿಯಾದ ಕ್ರಮ ತೆಗೆದುಕೊಳ್ಳುವ ತನಕ ಮುಂದುವರೆಯಲಿದೆ ಎಂದು ಮಾಹಿತಿ ನೀಡಿದರು.
ಬೆಂಗಳೂರು ನಗರ ಉಪಾಧ್ಯಕ್ಷರಾದ ಸುರೇಶ್ ರಾಥೋಡ್ ಮಾತನಾಡಿ, ಬಿಬಿಎಂಪಿಯಿಂದ ಕಸದ ಭಯೋತ್ಪಾದನೆ ನಡೆಯುತ್ತಿದೆ ಕಸ ಇರುವ ಬಗ್ಗೆ ಮಾಹಿತಿ ನೀಡಿದವರ ಮನೆಯ ಮುಂದೆಯೇ ಕಸ ಸುರಿದು ನಾಗರಿಕರಲ್ಲಿ ಭಯ ಹುಟ್ಟಿಸಲಾಗುತ್ತಿದೆ.
ಇದನ್ನೂ ಓದಿ :ಆರ್.ಆರ್ ನಗರಕ್ಕೆ ಮುನಿರತ್ನ, ಶಿರಾಗೆ ಡಾ.ರಾಜೇಶ್ ಗೌಡ ಬಿಜೆಪಿ ಟಿಕೆಟ್..!
ಅಲ್ಲದೇ ಸರಿಯಾಗಿ ಕಸ ನಿರ್ವಹಣೆ ಮಾಡದ ಬಗ್ಗೆ ದೂರುಗಳು ಬಂದರೂ ಪರಿಗಣಿಸದೆ ನಿರ್ಲಕ್ಷ್ಯ ಮಾಡುತ್ತಿದೆ ಎಂದು ಆರೋಪಿಸಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel