BBMP: ಹಿಂದವೀ ಮೀಟ್ ಮಾರ್ಟ್ ಗಳಿಗೆ ನೋಟಿಸ್ ಜಾರಿ ಮಾಡಿದ ಬಿಬಿಎಂಪಿ

1 min read
Hinduvi Meet mart Saaksha Tv

ಹಿಂದವೀ ಮೀಟ್ ಮಾರ್ಟ್ ಗಳಿಗೆ ನೋಟಿಸ್ ಜಾರಿ ಮಾಡಿದ ಬಿಬಿಎಂಪಿ

ಬೆಂಗಳೂರು: ಹಿಂದವೀ ಮೀಟ್ ಮಾರ್ಟ್ ಗಳಿಗೆ ಬಿಬಿಎಂಪಿಯಿಂದ ಪರವಾನಿಗೆ ಪಡೆದಿಲ್ಲ ಎಂದು ಮಾಲಿಕರಿಗೆ ಬಿಬಿಎಂಪಿ ನೋಟಿಸ್ ನೀಡಿದೆ.

ಹಲಾಲ್ ಕಟ್ ವಿರುದ್ಧ ಹಿಂದವೀ ಮೀಟ್ ಮಾರ್ಟ್ ಗಳು ಜಟ್ಕಾ ಕಟ್ ಅಭೀಯಾನ ನಡೆಸಿದ್ದರು. ಆದರೆ ಕೆಲವೊಂದು ಹಿಂದವೀ ಮೀರ್ಟ್ ಮಾರ್ಟ್ ಗಳು ಅಂಗಡಿ ತೆರೆಯಲು ಪಾಲಿಕೆಯಿಂದ ಲೈಸನ್ಸ್ ಪಡೆದಿಲ್ಲ. ಹೀಗಾಗಿ ಬಿಬಿಎಂಪಿ ಪಶುಪಾಲನೆ (ಆರ್.ಆರ್ ನಗರ ವಲಯ) ನೋಟಿಸ್‍ನ್ನು ಜಾರಿ ಮಾಡಿದ್ದು, ಪಶುಪಾಲನೆ ಸಹಾಯಕ ನಿರ್ದೇಶಕರಿಂದ ಜಟ್ಕಾ ಮಳಿಗೆಗಳಿಗೆ ನೋಟಿಸ್ ಹೋಗಿದೆ.

BBMP Saaksha Tv

ಇದೇ ಏಪ್ರಿಲ್ 12ರಂದು ನೋಟಿಸ್ ನೀಡಿರುವ ಬಿಬಿಎಂಪಿ ಪರವಾನಗಿ ಇಲ್ಲದಿರುವುದು ಸೇರಿದಂತೆ ಹಲವು ಅಂಶಗಳನ್ನು ಉಲ್ಲೇಖಿಸಿದೆ. ನೋಟಿಸ್ ನೀಡಿದ ಒಂದು ವಾರದೊಳಗೆ ಪರವಾನಗಿ ಪಡೆಯುವಂತೆ ಆದೇಶಿಸಲಾಗಿದೆ. ಇಲ್ಲವಾದರೆ ಮಳಿಗೆಗೆ ಬೀಗ ಹಾಕುವುದಾಗಿ ಮೌಖಿಕ ಎಚ್ಚರಿಕೆ ನೀಡಿದೆ.

ಇನ್ನೂ ಲೈಸನ್ಸ್ ಪಡೆಯಲು ಕೇವಲ ಕೋಳಿ ಅಂಗಡಿಯಾದ್ರೆ ಪರವಾನಗಿಗೆ 2,500 ರೂ. ಶುಲ್ಕ ನೀಡಬೇಕು. ಕೋಳಿ ಅಂಗಡಿ ಜೊತೆಗೆ ಮಟನ್ ಮತ್ತು ಫಿಶ್ ಮಳಿಗೆ ಲೈಸೆನ್ಸ್‍ಗೆ 10,500 ರೂ. ಶುಲ್ಕ ಪಾವತಿಸಬೇಕು ಎಂದು ನಿಯಮ ಹಾಕಿದೆ. ಈ ನಿಯಮದ ಪ್ರಕಾರವಾಗಿ ಪ್ರತಿ ಒಂದು ವರ್ಷಕ್ಕೆ ಈ ಶುಲ್ಕ ಪಾವತಿಸಬೇಕು ಎಂದು ಬಿಬಿಎಂಪಿ ತಿಳಿಸಿದ್ದು, ಮೊದಲು ಪರವಾನಿಗೆ ಪಡೆಯಲು ಇದೇ ಶುಲ್ಕ ಅನ್ವಯಿಸಲಾಗುವುದು ಎಂದು ಹೇಳಿದೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd