ಇಂದು ಯಡಿಯೂರು ವಾರ್ಡ್ ವ್ಯಾಪ್ತಿಯಲ್ಲಿರುವ ಯಡಿಯೂರು ವಾಣಿಜ್ಯ ಸಂಕೀರ್ಣದ ಮುಂಭಾಗದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವತಿಯಿಂದ ಸ್ವಾತಂತ್ರ್ಯ ಹೋರಾಟಗಾರ “ವಿನಾಯಕ ದಾಮೋದರ್ ಸಾವರ್ಕರ್” ಅವರ 05 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಲಾಗಿದೆ.
ಕಂಚಿನ ಪ್ರತಿಮೆ ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ಕಂದಾಯ ಸಚಿವರಾದ ಆರ್ ಅವರು ಉದ್ಘಾಟಿಸಿದರು. ಇನ್ನೂ ಆರ್ ಅಶೋಕ್ ಅವರಿಗೆ ಮೇಯರ್ ಎಂ. ಗೌತಮ್ ಕುಮಾರ್, ಉಪ ಮೇಯರ್ ರಾಮಮೋಹನ್ ರಾಜು ಸಿ. ಆರ್ , ಪಾಲಿಕೆಯ ಆಯುಕ್ತರಾದ ಎನ್. ಮಂಜುನಾಥ್ ಪ್ರಸಾದ್, ದಕ್ಷಿಣ ವಲಯದ ಜಂಟಿ ಆಯುಕ್ತರಾದ ವಿ. ಎನ್. ವೀರಭದ್ರಸ್ವಾಮಿ, ಹಾಗೂ ಸ್ಥಳೀಯ ಪಾಲಿಕೆ ಸದಸ್ಯರಾದ ಪೂರ್ಣಿಮಾ ರಮೇಶ್ ಸೇರಿದಂತೆ ಇತರರು ಸಾಥ್ ನೀಡಿದ್ದರು.








