ಬೆಂಗಳುರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ಪಾಲಿಕೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಕೋವಿಡ್-19 ನಿಯಂತ್ರಣಕ್ಕೆ ಅವಶ್ಯವಿರುವ ವಿವಿಧ ಹುದ್ದೆಗಳಿಗೆ 30 ವೈದ್ಯರು ಹಾಗೂ 21 ಇತರೆ ಸಿಬ್ಬಂದಿಗಳನ್ನು ಬಿಬಿಎಂಪಿ ನೇಮಕ ಮಾಡಿಕೊಂಡಿದೆ.
6 ತಿಂಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನಿನ್ನೆ 58 ಮಂದಿ ಹಾಗೂ ಇಂದು 51 ಮಂದಿ ಸೇರಿ ಒಟ್ಟು 109 ಮಂದಿ ಅರ್ಹರಿಗೆ ನೇಮಕಾತಿ ಆದೇಶ ನೀಡಲಾಗಿದೆ. ವಲಯವಾರು 72 ವೈದ್ಯರು ಹಾಗೂ 5 ಮಂದಿ ಸ್ಟಾಪ್ ನರ್ಸ್ಗಳನ್ನು ನಿಯೋಜನೆ ಮಾಡಲಾಗಿದೆ.
ಇಂದು ಟೌನ್ ಹಾಲ್ನಲ್ಲಿ ನಡೆದ ನೇರ ಸಂದರ್ಶನದಲ್ಲಿ ವೈದ್ಯರು, ದಂತ ವೈದ್ಯರು, ಆಯುಷ್ ವೈದರು, ಸ್ಟಾಫ್ ನರ್ಸ್, ಲ್ಯಾಬ್ ಟೆಕ್ನಿಷಿಯನ್, ಫಾರ್ಮಾಸಿಸ್ಟ್, ಎಎನ್ಎಂ, ಜ್ಯೂನಿಯರ್ ಹೆಲ್ತ್ ಅಸಿಸ್ಟೆಂಟ್(ಪುರುಷ) ಹಾಗೂ ಆಶಾ ಕಾರ್ಯಕರ್ತೆಯರನ್ನು ಆಯ್ಕೆ ಮಾಡಲಾಗಿದೆ. 30 ವೈದ್ಯರುಗಳು ಹಾಗೂ 21 ಇತರೆ ಸಿಬ್ಬಂದಿಗಳನ್ನು ನಿಯೋಜಿಸಿಕೊಳ್ಳಲಾಗಿದೆ. ಒಟ್ಟಾರೆ ಇಂದು 51 ಅರ್ಹರಿಗೆ ನೇಮಕಾತಿ ಆದೇಶ ನೀಡಲಾಗಿದೆ ಎಂದು ಬಿಬಿಎಂಪಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ನಾಗೇಂದ್ರ ಖಾಲಿ ಮಾಡಿದ ಕುರ್ಚಿಗೆ ಕಾಂಗ್ರೆಸ್ ನಲ್ಲಿ ಬಿರುಸಿನ ಪೈಪೋಟಿ- ಬಳ್ಳಾರಿ ಕೋಟಾದ ಮೇಲೆ ಕಣ್ಣಿಟ್ಟ ಅನ್ನಪೂರ್ಣ ತುಕರಾಮ್:ಲಕ್ಷ್ಮಿ ಹೆಬ್ಬಾಳ್ಕರ್ ಪ್ರಭಾವಕ್ಕೆ ಬೀಳುತ್ತಾ ಬ್ರೇಕ್!
ಬೆಂಗಳೂರು: ವಾಲ್ಮೀಕಿ ನಿಗಮದ ಹಗರಣದ ಹಿನ್ನೆಲೆಯಲ್ಲಿ ಬಿ ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ, ಆ ಖಾಲಿ ಇರುವ ಕುರ್ಚಿಯನ್ನು ಅಲಂಕರಿಸಲು ಕಾಂಗ್ರೆಸ್ ಪಡಶಾಲೆಯಲ್ಲಿ...








