ADVERTISEMENT
Sunday, March 29, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

ವಿಧೇಯಕ ಮೂಲಕ ಬಿಬಿಎಂಪಿ ಅಧಿಕಾರ ಕಸಿದು ಸರ್ಕಾರವೇ ಲೂಟಿಗೆ ಸಂಚು: ಎಎಪಿ ಆಕ್ರೋಶ

Kariyappa N by Kariyappa N
December 11, 2020
in Cinema, Newsbeat, Politics, Samagra karnataka, ರಾಜ್ಯ
aap
Share on FacebookShare on TwitterShare on WhatsappShare on Telegram

ಬೆಂಗಳೂರು: ಸರ್ಕಾರ ತಂದಿರುವ ಬಿಬಿಎಂಪಿ ನೂತನ ವಿಧೇಯಕ ಮಹಾನಗರ ಪಾಲಿಕೆ ಹಾಗೂ ಸ್ಥಳೀಯ ಸಂಸ್ಥೆಗಳ ಅಧಿಕಾರವನ್ನು ಅಡಗಿಸುವ ಹಾಗೂ ನಿಧಾನಕ್ಕೆ ಕಸಿಯುವ ಹುನ್ನಾರವಾಗಿದೆ ಆಮ್ ಆದ್ಮಿ ಪಕ್ಷದ ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೋಹನ್ ದಾಸರಿ, ಅನೇಕ ದೇಶಗಳು ತಮ್ಮ ಒಟ್ಟು ಬಜೆಟ್ಟಿನ ಶೇ.27ರಷ್ಟು ಹಣವನ್ನು ಮೀಸಲಿಟ್ಟು ಸ್ಥಳೀಯ ಸಂಸ್ಥೆಗಳ ಮೂಲಕ ಯೋಜನೆಗಳನ್ನು ಅನುಷ್ಟಾನಗೊಳಿಸುತ್ತವೆ. ಆದರೆ ಬಿಜೆಪಿ ಸರ್ಕಾರ ಸ್ಥಳೀಯ ಸಂಸ್ಥೆಗಳ ಅಧಿಕಾರವನ್ನೇ ಕಿತ್ತುಕೊಂಡು ಇಲ್ಲೂ ವ್ಯಾಪಕವಾದ ಲೂಟಿಗೆ ದಾರಿ ಮಾಡಿಕೊಟ್ಟಿದೆ ಎಂದರು.


ಪಾಲಿಕೆ ಸದಸ್ಯರ ಆಸ್ತಿ ವಿವರವನ್ನು ಮೇಯರ್‍ಗೆ ಸಲ್ಲಿಸಬೇಕು ಎಂದು ಹೇಳಿ ಸದಸ್ಯರನ್ನು ರಕ್ಷಿಸುವ ಹುನ್ನಾರ ಅಡಗಿದೆ. ಲೋಕಾಯುಕ್ತ, ಸರ್ಕಾರದ ಮುಖ್ಯ ಪ್ರಧಾನ ಕಾರ್ಯದರ್ಶಿಗಳಿಗೆ ಆಸ್ತಿ ವಿವರವನ್ನು ಪ್ರತಿ ವರ್ಷ ಕಡ್ಡಾಯವಾಗಿ ಸಲ್ಲಿಸದಿದ್ದರೆ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು ಎನ್ನುವ ಅಂಶವನ್ನು ಸೇರಿಸಬೇಕು. ಕಳೆದ ಬಾರಿ ಸುಮಾರು 120ಕ್ಕೂ ಹೆಚ್ಚು ಸದಸ್ಯರು ಆಸ್ತಿ ವಿವರ ಸಲ್ಲಿಸದೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದರು.
ಶಾಸಕರ, ಸಂಸದರ ಚೇಲಾಗಳು, ಪಕ್ಷಗಳಲ್ಲಿ ಇರುವ ಅತೃಪ್ತರನ್ನು ತೃಪ್ತಿ ಪಡಿಸಲು ಬಿಬಿಎಂಪಿಯನ್ನು 15 ವಲಯಗಳಾಗಿ ವಿಂಗಡಿಸಿ ವ್ಯಾಪಕ ಭ್ರಷ್ಟಾಚಾರಕ್ಕೆ ಅನುವು ಮಾಡಿಕೊಡಲಾಗಿದೆ. ವಲಯ ಉಸ್ತುವಾರಿಗಳಿಗೆ ಪ್ರತ್ಯೇಕ ಕಚೇರಿ, ಸಿಬ್ಬಂದಿ ಎಂದು ಹೇಳಿ ಜನರ ದುಡ್ಡನ್ನ ವ್ಯರ್ಥವಾಗಿ ಖರ್ಚು ಮಾಡಲು ಸರ್ಕಾರ ಹೊರಟಿದೆ. ಆದ ಕಾರಣ ಈ ವಲಯಗಳನ್ನು 8ಕ್ಕೆ ಇಳಿಸಬೇಕು ಮೋಹನ್ ದಾಸರಿ ಆಗ್ರಹಿಸಿದರು. .

Related posts

ಸರ್ಕಾರಿ ನೌಕರಿಯ ಕನಸು ಕಾಣುತ್ತಿರುವವರಿಗೆ ಗುಡ್ ನ್ಯೂಸ್ ಕಂದಾಯ ಇಲಾಖೆಯಲ್ಲಿ ನೇಮಕಾತಿಗೆ ಅರ್ಜಿ ಆಹ್ವಾನ

ಸರ್ಕಾರಿ ನೌಕರಿಯ ಕನಸು ಕಾಣುತ್ತಿರುವವರಿಗೆ ಗುಡ್ ನ್ಯೂಸ್ ಕಂದಾಯ ಇಲಾಖೆಯಲ್ಲಿ ನೇಮಕಾತಿಗೆ ಅರ್ಜಿ ಆಹ್ವಾನ

March 29, 2026
ಮೋದಿ ತಮ್ಮ ಫಾದರ್ ಲ್ಯಾಂಡ್ ಇಸ್ರೇಲ್ ಗೆ ಹೋಗಿ ಬಂದ ಮರುದಿನವೇ ಯುದ್ಧ ಶುರುವಾಯ್ತು: ಪ್ರಧಾನಿ ವಿದೇಶಾಂಗ ನೀತಿಯ ವಿರುದ್ಧ ಸಚಿವ ಎಂ ಬಿ ಪಾಟೀಲ್ ವ್ಯಂಗ್ಯ!

ಮೋದಿ ತಮ್ಮ ಫಾದರ್ ಲ್ಯಾಂಡ್ ಇಸ್ರೇಲ್ ಗೆ ಹೋಗಿ ಬಂದ ಮರುದಿನವೇ ಯುದ್ಧ ಶುರುವಾಯ್ತು: ಪ್ರಧಾನಿ ವಿದೇಶಾಂಗ ನೀತಿಯ ವಿರುದ್ಧ ಸಚಿವ ಎಂ ಬಿ ಪಾಟೀಲ್ ವ್ಯಂಗ್ಯ!

March 29, 2026


ಎರಡು ಹುದ್ದೆಗಳಲ್ಲಿ ಇರುವವರು ಯಾವ ಸ್ಥಾನವನ್ನು ಉಳಿಸಿಕೊಳ್ಳಬೇಕು ಎನ್ನುವುದನ್ನು 3 ದಿನಗಳಲ್ಲಿ ತಿಳಿಸಬೇಕು ಎಂದು ಆಯ್ಕೆ ಕೊಟ್ಟಿರುವುದು ನೋಡಿದರೆ, ಚುನಾವಣೆ ಎನ್ನುವುದು ಮಕ್ಕಳಾಟವೇ ಮುಖ್ಯಮಂತ್ರಿ ಯಡಿಯೂರಪ್ಪನವರೇ, ಈ ಬಾಲಿಶ ತಿದ್ದುಪಡಿಯನ್ನು ತೆಗೆದು ಹಾಕಿ ಒಬ್ಬ ವ್ಯಕ್ತಿ ಒಂದೇ ಕಡೆ ಮಾತ್ರ ಸ್ಪರ್ಧಿಸಬೇಕು ಎಂದು ಹೇಳಿದರು.
ಬೆಂಗಳೂರು ಉಪಾಧ್ಯಕ್ಷ ಸುರೇಶ್ ರಾಥೋಡ್ ಮಾತನಾಡಿ, ಕಸ ನಿರ್ವಹಣೆ ಹಾಗೂ ಇತರೆ ಪ್ರಾಥಮಿಕ ಜವಾಬ್ದಾರಿಗಳಿಂದ ಬಿಬಿಎಂಪಿಯನ್ನು ಹೊರಗಿಡಲಾಗುತ್ತಿದೆ. ಇದನ್ನು ಹಿಂಪಡೆದು, ಕಸ ನಿರ್ವಹಣೆಯಂತಹ ಪ್ರಮುಖ ಜವಾಬ್ದಾರಿಗಳನ್ನು ಪ್ರಮುಖ ಕರ್ತವ್ಯಗಳೆಂದು ಪರಿಗಣಿಸಬೇಕು ಎಂದು ಓತ್ತಾಯಿಸಿದರು.
ಇದುವರೆಗೂ ಪಾರದರ್ಶಕವಾಗಿ ವಾರ್ಡ್ ಮಟ್ಟದ ಸಭೆಗಳು ಸರಿಯಾಗಿ ನಡೆದ ಉದಾಹರಣೆ ನಮ್ಮ ಮುಂದೆ ಇಲ್ಲ. ಈ ಅಂಶದ ಬಗ್ಗೆ ಸರ್ಕಾರ ಗಮನ ಹರಿಸಬೇಕು. ಸ್ಥಳೀಯ ಜನರನ್ನು ಸೇರಿಸಿ ಇಂತಿಷ್ಟು ದಿನಗಳಿಗೆ ಸಭೆ ನಡೆಸುವುದನ್ನು ಕಡ್ಡಾಯ ಮಾಡಬೇಕು. ಈಗಾಗಲೇ ನಗರೋಥ್ಥಾನ, ನವನಗರೋಥ್ಥಾನ ಹಾಗೂ ಅನೇಕ ಕಾಮಗಾರಿಗಳನ್ನು ಲೋಕೋಪಯೋಗಿ ಇಲಾಖೆ ಹಾಗೂ ಕೆಆರ್‍ಐಡಿಎಲ್‍ಗೆ ಕೊಟ್ಟು ಲೂಟಿ ಮಾಡುತ್ತಿರುವ ಸರ್ಕಾರ ಎಲ್ಲಾ ಕಾಮಗಾರಿಗಳು ಬಿಬಿಎಂಪಿಯ ಮೂಲಕವೇ ನಡೆಯಬೇಕು ಎನ್ನುವ ಅಂಶವನ್ನು ಪ್ರಮುಖವಾಗಿ ಸೇರಿಸಬೇಕು. ಬೆಂಗಳೂರು ನಗರದ 28 ಶಾಸಕರು ಪಾಲಿಕೆ ಸದಸ್ಯರ ಅಧಿಕಾರ, ಕ್ಷೇತ್ರಾಭಿವೃದ್ದಿಯಂತಹ ವಿಚಾರದಲ್ಲಿ ಹಸ್ತಕ್ಷೇಪ ಮಾಡದಂತೆ ಸೂಚಿಸುವ ಅಂಶವನ್ನು ಸೇರಿಸಬೇಕು ಎಂದರು.
ಶಾಸಕ ಅರವಿಂದ ಲಿಂಬಾವಳಿ 2021ರ ಜನಗಣತಿ ಆಧರಿಸಿ ಚುನಾವಣೆ ನಡೆಸಬೇಕು ಎಂದು ಹೇಳಿದ್ದಾರೆ. ಈ ಮಾತಿನ ಹಿಂದಿರುವ ಮರ್ಮವೇನು, ಸರ್ಕಾರಕ್ಕೇ ಚುನಾವಣೆ ನಡೆಸಲು ಆಸಕ್ತಿ ಇಲ್ಲವೇ ಅಥವಾ ಸರ್ವಾಧಿಕಾರಿತನವನ್ನು ಹೇರುವ ಹುನ್ನಾರವೇ ಎಂದು ಪ್ರಶ್ನಿಸಿದರು.

 

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: Aam Aadmi PartyBBMP's new amendment billcorruption wayKARNATAKA GOVERNMENTMohan Dasari
ShareTweetSendShare
Join us on:

Related Posts

ಸರ್ಕಾರಿ ನೌಕರಿಯ ಕನಸು ಕಾಣುತ್ತಿರುವವರಿಗೆ ಗುಡ್ ನ್ಯೂಸ್ ಕಂದಾಯ ಇಲಾಖೆಯಲ್ಲಿ ನೇಮಕಾತಿಗೆ ಅರ್ಜಿ ಆಹ್ವಾನ

ಸರ್ಕಾರಿ ನೌಕರಿಯ ಕನಸು ಕಾಣುತ್ತಿರುವವರಿಗೆ ಗುಡ್ ನ್ಯೂಸ್ ಕಂದಾಯ ಇಲಾಖೆಯಲ್ಲಿ ನೇಮಕಾತಿಗೆ ಅರ್ಜಿ ಆಹ್ವಾನ

by Shwetha
March 29, 2026
0

ರಾಜ್ಯ ಸರ್ಕಾರಿ ಉದ್ಯೋಗವನ್ನು ಪಡೆಯಬೇಕು ಹಾಗೂ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂಬ ಕನಸು ಹೊತ್ತಿರುವ ನಾಡಿನ ಅಸಂಖ್ಯಾತ ಉದ್ಯೋಗಾಕಾಂಕ್ಷಿಗಳಿಗೆ ಹಾಗೂ ಅನುಭವಿ ವೃತ್ತಿಪರರಿಗೆ ಕರ್ನಾಟಕ ರಾಜ್ಯ ಕಂದಾಯ...

ಮೋದಿ ತಮ್ಮ ಫಾದರ್ ಲ್ಯಾಂಡ್ ಇಸ್ರೇಲ್ ಗೆ ಹೋಗಿ ಬಂದ ಮರುದಿನವೇ ಯುದ್ಧ ಶುರುವಾಯ್ತು: ಪ್ರಧಾನಿ ವಿದೇಶಾಂಗ ನೀತಿಯ ವಿರುದ್ಧ ಸಚಿವ ಎಂ ಬಿ ಪಾಟೀಲ್ ವ್ಯಂಗ್ಯ!

ಮೋದಿ ತಮ್ಮ ಫಾದರ್ ಲ್ಯಾಂಡ್ ಇಸ್ರೇಲ್ ಗೆ ಹೋಗಿ ಬಂದ ಮರುದಿನವೇ ಯುದ್ಧ ಶುರುವಾಯ್ತು: ಪ್ರಧಾನಿ ವಿದೇಶಾಂಗ ನೀತಿಯ ವಿರುದ್ಧ ಸಚಿವ ಎಂ ಬಿ ಪಾಟೀಲ್ ವ್ಯಂಗ್ಯ!

by Shwetha
March 29, 2026
0

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶಾಂಗ ನೀತಿ ಹಾಗೂ ಇಸ್ರೇಲ್ ಪ್ರವಾಸದ ಕುರಿತು ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್...

ಪರೀಕ್ಷೆ ನಡೆಯುತ್ತಿರುವಾಗಲೇ ಎಸ್ಎಸ್ಎಲ್ಸಿ ಅಂಕ 525ಕ್ಕೆ ಇಳಿಕೆ: ಮಕ್ಕಳ ಭವಿಷ್ಯದ ಜೊತೆ ಸರ್ಕಾರದ ಕ್ರೂರ ಚೆಲ್ಲಾಟ –  ಸುರೇಶ್ ಕುಮಾರ್

ಪರೀಕ್ಷೆ ನಡೆಯುತ್ತಿರುವಾಗಲೇ ಎಸ್ಎಸ್ಎಲ್ಸಿ ಅಂಕ 525ಕ್ಕೆ ಇಳಿಕೆ: ಮಕ್ಕಳ ಭವಿಷ್ಯದ ಜೊತೆ ಸರ್ಕಾರದ ಕ್ರೂರ ಚೆಲ್ಲಾಟ – ಸುರೇಶ್ ಕುಮಾರ್

by Shwetha
March 29, 2026
0

ಬೆಂಗಳೂರು: ರಾಜ್ಯದಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳು ಅತ್ಯಂತ ಆತಂಕ ಹಾಗೂ ಶ್ರದ್ಧೆಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ಬರೆಯುತ್ತಿರುವಾಗಲೇ ರಾಜ್ಯ ಸರ್ಕಾರ ಮತ್ತು ಶಿಕ್ಷಣ ಇಲಾಖೆ ತೆಗೆದುಕೊಂಡಿರುವ ತರಾತುರಿಯ ದಿಢೀರ್...

ಪರಮಾತ್ಮ ಬಂದ್ರೂ ಹಿಂದೆ ಸರಿಯಲ್ಲ ಎಂದಿದ್ದ ಸಾದಿಕ್ ಪೈಲ್ವಾನ್ ಬಂಡಾಯ ಕೊನೆಗೂ ಸುಖಾಂತ್ಯ  : ಚುನಾವಣಾ ಆಯೋಗ ಮೈಕ್‌ ಚಿಹ್ನೆ ಕೊಟ್ರು ಕಾಂಗ್ರೆಸ್ ಅಭ್ಯರ್ಥಿಗೆ ಪೈಲ್ವಾನ್ ಬೆಂಬಲ‌ ಶುರು!

ಪರಮಾತ್ಮ ಬಂದ್ರೂ ಹಿಂದೆ ಸರಿಯಲ್ಲ ಎಂದಿದ್ದ ಸಾದಿಕ್ ಪೈಲ್ವಾನ್ ಬಂಡಾಯ ಕೊನೆಗೂ ಸುಖಾಂತ್ಯ : ಚುನಾವಣಾ ಆಯೋಗ ಮೈಕ್‌ ಚಿಹ್ನೆ ಕೊಟ್ರು ಕಾಂಗ್ರೆಸ್ ಅಭ್ಯರ್ಥಿಗೆ ಪೈಲ್ವಾನ್ ಬೆಂಬಲ‌ ಶುರು!

by Shwetha
March 29, 2026
0

ಕಣದಿಂದ ಹಿಂದೆ ಸರಿಯುವಂತೆ ಹೇಳಲು ಸಾಕ್ಷಾತ್ ಪರಮಾತ್ಮನೇ ಧರೆಗಿಳಿದು ಬಂದರೂ ನಾನು ಸ್ಪರ್ಧೆಯಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಗುಡುಗಿದ್ದ ದಾವಣಗೆರೆ ದಕ್ಷಿಣ ಕ್ಷೇತ್ರದ ಬಂಡಾಯ...

ದಮ್ ಇದ್ರೆ ಬನ್ನಿ ಅಂದ್ರಿ, ಈಗ ಬಂದು ನಿಂತಿದ್ದೀನಿ ಎಂದ ಪ್ರದೀಪ್ ಈಶ್ವರ್‌ : ಹುಚ್ಚ ಎಂದು ಕೂಗಿ ಪ್ರದೀಪ್ ಈಶ್ವರ್ ಗೆ ಪೊರಕೆ ಚಪ್ಪಲಿ ತೋರಿಸಿದ ಬಿಜೆಪಿಗರು!

ದಮ್ ಇದ್ರೆ ಬನ್ನಿ ಅಂದ್ರಿ, ಈಗ ಬಂದು ನಿಂತಿದ್ದೀನಿ ಎಂದ ಪ್ರದೀಪ್ ಈಶ್ವರ್‌ : ಹುಚ್ಚ ಎಂದು ಕೂಗಿ ಪ್ರದೀಪ್ ಈಶ್ವರ್ ಗೆ ಪೊರಕೆ ಚಪ್ಪಲಿ ತೋರಿಸಿದ ಬಿಜೆಪಿಗರು!

by Shwetha
March 29, 2026
0

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಇದೀಗ ನೇರಾನೇರ ಸವಾಲುಗಳ ಅಖಾಡವಾಗಿ ಮಾರ್ಪಟ್ಟಿದೆ. ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram