RCB ಹುಡುಗನಿಗೆ BCCI ಪ್ರಮೋಷನ್..
ಭಾರತೀಯ ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ ಅವರು ಬಿಸಿಸಿಐ ಹೊಸದಾಗಿ ಪ್ರಕಟಿಸಿದ ವಾರ್ಷಿಕ ಒಪ್ಪಂದಗಳಲ್ಲಿ ‘ಎ‘ ಪ್ಲಸ್ ‘ಗ್ರೇಡ್‘ ನಲ್ಲಿ ಮುಂದುವರೆದಿದ್ದಾರೆ.
ಮಂಡಳಿಯು ಅವರಿಗೆ ರೂ. 7 ಕೋಟಿ ಪಾವತಿಸುತ್ತದೆ. ಆದರೆ, ಪೂಜಾರ, ರಹಾನೆ ಮತ್ತು ಇಶಾಂತ್ ಶರ್ಮಾ ಅವರನ್ನು ‘ಎ‘ ಗ್ರೇಡ್ ನಿಂದ ‘ಬಿ‘ ಗ್ರೇಡ್‌ಗೆ (3 ಕೋಟಿ ರೂ.) ಇಳಿಸಲಾಗಿದೆ. ಈ ಮೂವರು ಟೆಸ್ಟ್ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದಾರೆ.
ಗಾಯದ ಸಮಸ್ಯೆಯಿಂದ ಸತತ ಪಂದ್ಯಗಳಿಂದ ಹೊರಗುಳಿದಿರುವ ಹಾರ್ದಿಕ್ ಪಾಂಡ್ಯ, ಏಕದಿನ ಪಂದ್ಯಗಳಿಗೆ ಸೀಮಿತವಾಗಿರುವ ಶಿಖರ್ ಧವನ್ ಅವರನ್ನು ‘ಎ’ಯಿಂದ ‘ಸಿ’ಗೆ (1 ಕೋಟಿ ರೂ.) ಇಳಿಸಲಾಗಿದೆ.
‘ಎ’ ಗ್ರೇಡ್‌ನಲ್ಲಿ (5 ಕೋಟಿ ರೂ.), ಅಶ್ವಿನ್, ಜಡೇಜಾ, ಪಂತ್, ರಾಹುಲ್ ಮತ್ತು ಶಮಿ ಸ್ಥಾನಪಡೆದಿದ್ದಾರೆ.
ಇದಲ್ಲದೇ ಕನ್ನಡಿಗ ಮಯಾಂಕ್ ಮತ್ತು ವೃದ್ಧಿಮಾನ್ ಸಹಾ ಅವರನ್ನ ‘ಬಿ’ ನಿಂದ ‘ಸಿ’ ಗ್ರೇಡ್ ಗೆ ನೂಕಲಾಗಿದೆ.
ಇತ್ತ ಮೂರು ಮಾದರಿ ಕ್ರಿಕೆಟ್ ನಲ್ಲಿ ಟೀಂ ಇಂಡಿಯಾದ ಖಾಯಂ ಸದಸ್ಯರಾಗಿರುವ ಮೊಹ್ಮದ್ ಸಿರಾಜ್ ಗೆ ಬಡ್ತಿ ನೀಡಿಲಾಗಿದೆ.
ಅವರು ಇಲ್ಲಿಯವರೆಗೆ ‘ಸಿ’ ಗ್ರೇಡ್ ನಲ್ಲಿದ್ದರು. ಆದ್ರೀಗ ‘ಬಿ’ ದರ್ಜೆಯಲ್ಲಿ ಸ್ಥಾನ ಪಡೆದಿದ್ದಾರೆ. 27 ಸದಸ್ಯರ ಗುತ್ತಿಗೆ ಪಟ್ಟಿಯಿಂದ ಕುಲದೀಪ್ ಯಾದವ್ ಮತ್ತು ನವದೀಪ್ ಸೈನಿ ಕೈ ಬಿಡಲಾಗಿದೆ.