`ನಾಯಕತ್ವ ಬದಲಾವಣೆ ವದಂತಿ’ಗೆ ಬಿಸಿಸಿಐ ಸ್ಪಷ್ಟನೆ BCCI saaksha tv
ಮುಂಬೈ : ಐಸಿಸಿ ಟಿ-20 ವಿಶ್ವಕಪ್ ಬಳಿಕ ವೈಟ್ ಬಾಲ್ ನಾಯಕತ್ವಕ್ಕೆ ವಿರಾಟ್ ಕೊಹ್ಲಿ ಗುಡ್ ಬೈ ಹೇಳಲಿದ್ದಾರೆ ಎಂಬ ಗಾಳಿಸುದ್ದಿಗೆ ಇದೀಗ ಬಿಸಿಸಿಐ ಸ್ಪಷ್ಟನೆ ನೀಡಿದೆ.
ನಾಯಕತ್ವದ ಬದಲಾವಣೆ ವದಂತಿಗೆ ಪ್ರತಿಕ್ರಿಯೆ ನೀಡಿರುವ ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್, ಮಾಧ್ಯಮಗಳಲ್ಲಿ ಪ್ರಕಟಗೊಂಡಿರುವ ವರದಿ ನಿಜವಲ್ಲ.
ಕೊಹ್ಲಿ ಅವರನ್ನು ನಾಯಕತ್ವದಿಂದ ಕೆಳಗಿಳಿಸಬೇಕೆಂಬುದರ ಬಗ್ಗೆ ಸಭೆಯಲ್ಲಿ ಯಾವುದೇ ಚರ್ಚೆ ನಡೆದಿಲ್ಲ ಎಂದು ಸ್ಪಷ್ಟೀಕರಣ ಕೊಟ್ಟಿದ್ದಾರೆ.
ಬ್ಯಾಟಿಂಗ್ ಮೇಲೆ ಗಮನಹರಿಸಲು ವಿರಾಟ್ ಕೊಹ್ಲಿ ಟಿ-20 ಮತ್ತು ಏಕದಿನ ಮಾದರಿಯಲ್ಲಿ ನಾಯಕತ್ವ ತ್ಯಜಿಸಲಿದ್ದಾರೆ.
ಅವರ ಬದಲಿಗೆ ರೋಹಿತ್ ಶರ್ಮಾಗೆ ನಾಯಕತ್ವ ವಹಿಸಿಲಿದ್ದಾರೆ ಎಂದು ವರದಿಯಾಗಿತ್ತು.









