ಪಂತ್,ರಾಹುಲ್ ಗೆ ಪ್ರಮೋಷನ್.. ರಹಾನೆ, ಪೂಜಾರಗೆ ಡಿಮೋಷನ್
ಟೀಂ ಇಂಡಿಯಾ ಕ್ರಿಕೆಟಿಗರಾದ ಕೆಎಲ್ ರಾಹುಲ್ ಮತ್ತು ರಿಷಬ್ ಪಂತ್ ಬಿಸಿಸಿಐ ಸೆಂಟ್ರಲ್ ಕಾಂಟ್ರಾಕ್ಟ್ಸ್ ನಲ್ಲಿ ಪ್ರಮೊಷನ್ ಸಿಕ್ಕಿದೆಯಂತೆ. ಬಿಸಿಸಿಐ ಪ್ರಕಟಿಸಲಿರುವ ಸೆಂಟ್ರಲ್ ಕಾಂಟ್ರಾಕ್ಟ್ಸ್ ನಲ್ಲಿ ಈ ಇಬ್ಬರು ಗ್ರೇಡ್-ಎ ಪ್ಲಸ್ ವಿಭಾಗಕ್ಕೆ ಬಡ್ತಿ ಪಡೆಯುವ ಸಾಧ್ಯತೆಗಳಿವೆ. 2021 ವರ್ಷಕ್ಕೆ ಬಿಸಿಸಿಐ ಘೋಷಿಸಿದ ಒಪ್ಪಂದದಲ್ಲಿ ಈ ಇಬ್ಬರೂ ಗ್ರೇಡ್-ಎ ಯಲ್ಲಿದ್ದರು.
ಕಳೆದು ಒಂದು ವರ್ಷದಲ್ಲಿ ಕೆ.ಎಲ್.ರಾಹುಲ್ ಮತ್ತು ರಿಷಬ್ ಪಂತ್ ಎಲ್ಲಾ ಪಾರ್ಮೆಟ್ ಗಳ ಕ್ರಿಕೆಟ್ ನಲ್ಲಿ ಟೀಂ ಇಂಡಿಯಾದ ಖಾಯಂ ಸದಸ್ಯರಾಗಿದ್ದಾರೆ. ಹೀಗಾಗಿ ಸೆಂಟ್ರಲ್ ಗುತ್ತಿಗೆಯಲ್ಲಿ ಬಡ್ತಿ ಸಿಗುವ ನಿರೀಕ್ಷೆ ಇದೆ.ಇದುವರೆಗೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಜಸ್ ಪ್ರೀತ್ ಬುಮ್ರಾ ಮಾತ್ರ ಗ್ರೇಡ್-ಎ ಪ್ಲಸ್ ವಿಭಾಗದಲ್ಲಿದ್ದಾರೆ.
ಈ ನಡುವೆ ಟೀಂ ಇಂಡಿಯಾದ ಹಿರಿಯ ಕ್ರಿಕೆಟಿಗರಾದ ಅಜಿಂಕ್ಯ ರಹಾನೆ ಮತ್ತು ಚೇತೇಶ್ವರ ಪೂಜಾರ ಅವರನ್ನು ಕಾಂಟ್ರಾಕ್ಟ್ ನಲ್ಲಿ ಡಿಮೋಷನ್ ಮಾಡುವ ಸಾಧ್ಯತೆಗಳಿವೆ. ಸದ್ಯ ಬ್ಯಾಡ್ ಪಾರ್ಮ್ ನಲ್ಲಿರುವ ಈ ಇಬ್ಬರು ಆಟಗಾರರು ಎ ಗ್ರೇಡ್ ನಲ್ಲಿದ್ದು, ಇದೀಗ ಬಿ ಗ್ರೇಡ್ ಗೆ ಇಳಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಇದಲ್ಲದೇ ಕಳೆದ ಒಂದು ವರ್ಷದಿಂದ ಟೀಂ ಇಂಡಿಯಾದಲ್ಲಿ ಮಿಂಚುತ್ತಿರುವ ಸಿರಾಜ್ ಗೆ ಗ್ರೇಡ್ ಸಿ ಯಿಂದ ಗ್ರೇಡ್ ಬಿಗೆ ಬಡ್ತಿ ನೀಡುವ ಸಾಧ್ಯತೆಗಳಿವೆ. ಶರ್ದೂಲ್, ಹನುಮವಿಹಾರಿ ಗೂ ಬಡ್ತಿ ಸಾಧ್ಯತೆ ಇದ್ದು, ಉಮೇಶ್ ಯಾದವ್, ಇಶಾಂತ್ ಶರ್ಮಾ ಗೆ ಡಿಮೋಷನ್ ಪಕ್ಕಾ ಎನ್ನಲಾಗುತ್ತಿದೆ.
ಎ ಪ್ಲಸ್ ಗ್ರೇಡ್ ಆಟಗಾರರಿಗೆ ವಾರ್ಷಿಕ ಕಾಂಟ್ರಾಕ್ಟ್ ನಲ್ಲಿ 7 ಕೋಟಿ ಕೊಡಲಾಗುತ್ತದೆ
ಎ ಗ್ರೇಡ್ ಆಟಗಾರರಿಗೆ 5 ಕೋಟಿ
ಬಿ ಗ್ರೇಡ್ ಆಟಗಾರರಿಗೆ ಮೂರು ಕೋಟಿ
ಸಿ ಗ್ರೇಡ್ ಆಟಗಾರರಿಗೆ ಒಂದು ಕೋಟಿ ನೀಡಲಾಗುತ್ತದೆ.