ನಿವೃತ್ತಿ ಹೊಂದಿದ ಆಟಗಾರರು ವಿದೇಶಿ ಟಿ20 ಲೀಗ್ಗಳಲ್ಲಿ ಪಾಲ್ಗೊಳ್ಳುವ ಕುರಿತು ಬಿಸಿಸಿಐ ಜು.7ರಂದು ನಡೆಯುವ ಮಂಡಳಿಯ ವಿಶೇಷ ಸಭೆಯಲ್ಲಿ ಚರ್ಚೆ ನಡೆಸಲಿದೆ.
ನಿಯಮಗಳ ಪ್ರಕಾರ,ಬಿಸಿಸಿಐಯಲ್ಲಿ ನೋಂದಾಯಿಸಿರುವ ಆಟಗಾರರಿಗೆ ಮಾತ್ರ ವಿದೇಶಿ ಟಿ20 ಲೀಗ್ಗಳಲ್ಲಿ ಆಡಲು ಅನುಮತಿ ನೀಡುತ್ತಾ ಬರಲಾಗಿದೆ. ಅಂತಾರಾಷ್ಟ್ರೀಯ, ದೇಸಿ ಮತ್ತು ಐಪಿಎಲ್ನಿಂದ ನಿವೃತ್ತಿ ಹೊಂದಿದವರು ವಿದೇಶಿ ಲೀಗ್ಗಗಳತ್ತ ಮುಖಮಾಡಿದ್ದಾರೆ.
ಇತ್ತೀಚೆಗೆ ಐಪಿಎಲ್ನಿಂದ ನಿವೃತ್ತಿಯಾದ ಅಂಬಾಟಿ ರಾಯ್ಡು ಚೊಚ್ಚಲ ಮೇಜರ್ ಲೀಗ್ ಕ್ರಿಕೆಟ್ ಆಡಲು ಪ್ಲ್ಯಾನ್ ಮಾಡಿದ್ದಾರೆ.
ನಿವೃತ್ತಿಯಾಗುವ ಆಟಗಾರರ ಸಂಖ್ಯೆ ಹೆಚ್ಚಿದ್ದು ಟಿ20 ಫ್ರಾಂಚೈಸಿ ಕ್ರಿಕೆಟ್ನಿಂದ ದೇಸಿ ಕ್ರಿಕೆಟ್ನ ಗುಣಮಟ್ಟ ಕಡಿಮೆಯಾಗಿಲ್ಲ. ಟಿ20 ಲೀಗ್ಗಳಿಂದ ಬಿಸಿಸಿಐ ತನ್ನ ಆಟಗಾರರನ್ನು ರಕ್ಷಿಸುತ್ತಾ ಬಂದಿದೆ. ಇದೀಗ ನಿವೃತ್ತಿ ಹೊಂದಿದ ಆಟಗಾರರಿಗೆ ಬಿಸಿಸಿಐ ಷರತ್ತು ವಿಧಿಸುವ ಸಾಧ್ಯತೆ ಹೆಚ್ಚಿದೆ.
ಮುಂಬರುವ ಪ್ರತಿಷ್ಠಿತ ಏಷ್ಯನ್ ಗೇಮ್ಸ್ಗೆ ಬಿಸಿಸಿಐ ಪುರುಷ ಮತ್ತು ಮಹಿಳಾ ತಂಡಗಳನ್ನು ಕಳುಹಿಸಲು ನಿರ್ಧರಿಸಿದೆ. ಏಕದಿನ ವಿಶ್ವಕಪ್ ಇರುವ ಹಿನ್ನೆಲೆಯಲ್ಲಿ ದ್ವಿತೀಯ ದರ್ಜೆ ಕ್ರಿಕೆಟ್ ತಂಡವನ್ನು ಕಳುಹಿಸಲಿದೆ. ಅನುಭವಿ ಬ್ಯಾಟರ್ ಶಿಖರ್ ಧವನ್ ನಾಯಕನನ್ನಾಗಿ ನೇಮಿಸುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ. ಮಹಿಳಾ ತಂಡಕ್ಕೆ ಬಲಿಷ್ಠ ತಂಡವನ್ನು ಕಳುಹಿಸಲಾಗುತದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.








