ಕ್ರಿಕೆಟ್ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್.. ಆ ಸರಣಿ ಕೂಡ ಡೌಟ್ bcci-mulling-conduct-west-indies-series saaksha tv
ದಕ್ಷಿಣ ಆಫ್ರಿಕಾ ಪ್ರವಾಸದ ನಂತರ, ಟೀಮ್ ಇಂಡಿಯಾ ತವರಿನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಮೂರು ODI ಮತ್ತು ಮೂರು T20I ಪಂದ್ಯಗಳನ್ನು ಆಡಲಿದೆ.
ಆದಾಗ್ಯೂ, ಭಾರತದಲ್ಲಿ ಕರೋನಾ ಮೂರನೇ ಅಲೆಯ ಏರಿಕೆಯೊಂದಿಗೆ, ವಿಂಡೀಸ್ ವಿರುದ್ಧದ ಸರಣಿ ಮೇಲೆ ಕೊರೊನಾ ಕಾರ್ಮೋಡ ಮೂಡಿದೆ.
ಬಿಸಿಸಿಐ ಈಗಾಗಲೇ ರಣಜಿ ಟ್ರೋಫಿ, ಕರ್ನಲ್ ಸಿಕೆ ನಾಯ್ಡು ಟ್ರೋಫಿ ಮತ್ತು ಸೀನಿಯರ್ ಮಹಿಳಾ ಟಿ20 ಲೀಗ್ ಸೇರಿದಂತೆ ಹಲವು ದೇಶೀಯ ಪಂದ್ಯಾವಳಿಗಳನ್ನು ಮುಂದೂಡಿದೆ.
ಆದರೆ, ಕ್ರಿಕೆಟ್ ಡಾಟ್ ಕಾಮ್ ವರದಿ ಪ್ರಕಾರ, ವೆಸ್ಟ್ ಇಂಡೀಸ್ ಜೊತೆಗಿನ ಸರಣಿಯನ್ನು ಒಂದು ಅಥವಾ ಎರಡು ಸ್ಥಳಗಳಲ್ಲಿ ನಡೆಸಲು ಬಿಸಿಸಿಐ ಉದ್ದೇಶಿಸಿದೆ.
ಕೊರೊನಾ ಅಬ್ಬರ ಮತ್ತಷ್ಟು ಹೆಚ್ಚಾದರೆ ಸರಣಿ ಮುಂದೂಡಿಕೆಯಾದರೂ ಆಶ್ಚರ್ಯವಿಲ್ಲ.ಫೆಬ್ರವರಿ 6 ರಿಂದ ಭಾರತ–ವೆಸ್ಟ್ ಇಂಡೀಸ್ ಸರಣಿ ಆರಂಭವಾಗಲಿದೆ.
ಈ ಹಿಂದೆ ಘೋಷಿಸಲಾದ ವೇಳಾಪಟ್ಟಿಯ ಪ್ರಕಾರ, ಅಹಮದಾಬಾದ್, ಜೈಪುರ ಮತ್ತು ಕೋಲ್ಕತ್ತಾ ODIಗಳಿಗೆ ಆತಿಥ್ಯ ವಹಿಸಲಿದ್ದು, ಕಟಕ್, ವಿಶಾಖಪಟ್ಟಣ ಮತ್ತು ತಿರುವನಂತಪುರಂ ಮೂರು T2 ಪಂದ್ಯಗಳನ್ನು ಆಡಲಿವೆ.
“ಫೆಬ್ರವರಿ ಮೊದಲ ವಾರದಲ್ಲಿ ಕರೋನಾ ಥರ್ಡ್‌ವೇವ್ ಸ್ಫೋಟವು ಮತ್ತಷ್ಟು ಹೆಚ್ಚಾಗುತ್ತದೆ. ಆರು ಸ್ಥಳಗಳಲ್ಲಿ ಪಂದ್ಯಗಳನ್ನು ಆಯೋಜಿಸುವುದು ಮತ್ತು ಬಯೋ–ಬಬಲ್ ವ್ಯವಸ್ಥೆಗಳನ್ನು ಮಾಡುವುದು ತುಂಬಾ ಕಷ್ಟಕರವಾಗಿರುತ್ತದೆ” ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.









