BCCI Selection Committee : ಟೀಂ ಇಂಡಿಯಾ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಚೇತನ್ ಶರ್ಮಾ ಆಯ್ಕೆ….
ಟಿ20 ವಿಶ್ವಕಪ್ ಟೀಂ ಇಂಡಿಯಾ ವೈಫಲ್ಯ ಅನುಭವಿಸಿದ ನಂತರ ಬಿಸಿಸಿಐ ಮಹತ್ವದ ಕ್ರಮ ಕೈಗೊಂಡು ಆಯ್ಕೆ ಸಮಿತಿಯನ್ನು ವಜಾಗೊಳಿಸಿತ್ತು. ಆನಂತರ ಬಿಸಿಸಿಐ ನೂತ ಸೆಲೆಕ್ಷನ್ ಕಮಿಟಿ ನಿರ್ಮಿಸಿಲು ಅರ್ಜಿ ಆಹ್ವಾನಿಸಿತ್ತು.
ಇದೀಗ ಬಿಸಿಸಿಐ ಚೇತನ್ ಶರ್ಮಾ ಅವರನ್ನು ಆಯ್ಕೆ ಸಮಿತಿಯ ಮುಖ್ಯಸ್ಥರನ್ನಾಗಿ ಮರು ನೇಮಕ ಮಾಡಿದೆ. ಆಯ್ಕೆ ಸಮಿತಿ ಸಮಿತಿಯಲ್ಲಿ ದಕ್ಷಿಣ ವಲಯದಿಂದ ಎಸ್ ಶರತ್, ಕೇಂದ್ರ ವಲಯದಿಂದ ಎಸ್ಎಸ್ ದಾಸ್, ಪೂರ್ವದಿಂದ ಸುಬ್ರೋತೋ ಬ್ಯಾನರ್ಜಿ ಮತ್ತು ಪಶ್ಚಿಮ ವಲಯದಿಂದ ಸಲೀಲ್ ಅಂಕೋಲಾ ಸೇರಿದ್ದಾರೆ.
600 ಮಂದಿ ಅರ್ಜಿ ಸಲ್ಲಿಸಿದ್ದರು
ಆಯ್ಕೆ ಸಮಿತಿ ಸೇರಿಕೊಳ್ಳಲು ಸುಮಾರು 600 ಮಂದಿ ಅರ್ಜಿ ಸಲ್ಲಿಸಿದ್ದರು. ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ) ಸದಸ್ಯರಾದ ಸುಲಕ್ಷಣ ನಾಯಕ್, ಅಶೋಕ್ ಮಲ್ಹೋತ್ರಾ ಮತ್ತು ಜತಿನ್ ಪರಂಜ್ಪೆ ಅವರು ಭಾರತದ ಹಿರಿಯರ ಆಯ್ಕೆ ಸಮಿತಿಯ ಪಟ್ಟಿಯನ್ನ ಬಿಡುಗಡೆ ಮಾಡಿದೆ.
ಬಿಸಿಸಿಐ ಆಯ್ಕೆ ಸಮಿತಿಗೆ ಆಯ್ಕೆಯಾಗಿರು ಸದಸ್ಸ್ಯರ ಹೆಸರುಗಳು ಈ ರೀತಿ ಇದೆ.
1) ಚೇತನ್ ಶರ್ಮಾ
2) ಶಿವಸುಂದರ್ ದಾಸ್
3) ಸುಬ್ರೋತೋ ಬ್ಯಾನರ್ಜಿ
4) ಸಲೀಲ್ ಅಂಕೋಲಾ
5) ಶ್ರೀಧರನ್ ಶರತ್
ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ) ಚೇತನ್ ಶರ್ಮಾ ಅವರನ್ನ ಆಯ್ಕೆ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಶಿಫಾರಸು ಮಾಡಿದೆ. ಆಯ್ಕೆ ಸಮಿತಿ ಸಮಿತಿಯಲ್ಲಿ ದಕ್ಷಿಣ ವಲಯದಿಂದ ಎಸ್ ಶರತ್, ಕೇಂದ್ರ ವಲಯದಿಂದ ಎಸ್ಎಸ್ ದಾಸ್, ಪೂರ್ವದಿಂದ ಸುಬ್ರೋತೋ ಬ್ಯಾನರ್ಜಿ ಮತ್ತು ಪಶ್ಚಿಮ ವಲಯದಿಂದ ಸಲೀಲ್ ಅಂಕೋಲಾ ಸೇರಿದ್ದಾರೆ.
BCCI Selection Committee: Chetan Sharma selected as Team India Selection Committee President….








