BCCI : ಟೀಂ ಇಂಡಿಯಾ ಆಯ್ಕೆಗೆ ಯೋ-ಯೋ ಟೆಸ್ಟ್ ಕಡ್ಡಾಯ , ಪರಾಮರ್ಶೆ ಸಭೆಯಲ್ಲಿ ಮಹತ್ವದ ನಿರ್ಧಾರಗಳು..!!
ಇನ್ಮುಂದೆ ಆಟಗಾರರಿಗೆ ಯೋ-ಯೋ ಟೆಸ್ಟ್ ಕಡ್ಡಾಯ
ಟೀಂ ಇಂಡಿಯಾ ಆಯ್ಕೆಗೆ ನಿಯಮ ಮರುಜಾರಿ
ಭಾನುವಾರ ನಡೆದ ಟಿ20 ವಿಶ್ವಕಪ್ ಪರಾಮರ್ಶೆ ಸಭೆ
ಸಭೆಯಲ್ಲಿ ಫಿಟ್ನೆಸ್ ಪರೀಕ್ಷೆ , ಪ್ರಮುಖ ನಿರ್ಧಾರಗಳು
2016 ರಿಂದ ಾಟಗಾರರ ಫಿಟ್ನೆಸ್ ಟೆಸ್ಟ್ ಗಾಗಿ ಜಾರಿಯಾಗಿದ್ದ ಯೋ ಯೋ ಟೆಸ್ಟ್ ಕೋವಿಡ್ ಸಮಯದಲ್ಲಿ ರದ್ದಾಗಿತ್ತು.. ಇನ್ಮುಂದೆ ಇದು ಮರು ಜಾರಿಯಾಗಲಿದ್ದು , ಟೀಮ್ ಇಂಡಿಯಾ ಆಟಗಾರರು ಆಯ್ಕೆಗೆ ಕಡ್ಡಾಯವಾಗಿ ಯೋ – ಯೋ ಪರೀಕ್ಷೆಗೆ ಒಳಪಡಲೇಬೇಕಾಗಿದೆ..
ಅಷ್ಟೇ ಅಲ್ಲ ಡೆಕ್ಸಾ ಪರೀಕ್ಷೆಯೂ ಕಡ್ಡಾಯ ಮಾಡಲು ಬಿಸಿಸಿಐ ನಡೆಸಿದ ಪರಾಮರ್ಶೆ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ..
ಪ್ರತಿಯೊಬ್ಬ ಕ್ರಿಕೆಟಿಗನ ಡಿಎನ್ಎ ಡೇಟಾವನ್ನು ನಂತರ ಪರಿಸರದ ದತ್ತಾಂಶದೊಂದಿಗೆ ಸಂಯೋಜಿಸಲಾಗುತ್ತದೆ, ಅದು ವ್ಯಕ್ತಿಯ ದೇಹದ ತೂಕ ಮತ್ತು ಆಹಾರಕ್ರಮ, ಸರ್ವಾಂಗೀಣ ವಿಶ್ಲೇಷಣೆಗಾಗಿ.
ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ , ಯೋ-ಯೋ ಫಿಟ್ನೆಸ್ ಪರೀಕ್ಷೆಯನ್ನು ಮರುಪರಿಚಯಿಸುವಂತೆ ಬಿಸಿಸಿಐಗೆ ಶಿಫಾರಸು ಮಾಡಿತ್ತು ಎನ್ನಲಾಗಿದೆ.
ಭಾನುವಾರ ನಡೆದ ಟಿ20 ವಿಶ್ವಕಪ್ ಪರಾಮರ್ಶೆ ಸಭೆಯಲ್ಲಿ ಫಿಟ್ನೆಸ್ ಪರೀಕ್ಷೆ ಸೇರಿ ಇನ್ನೂ ಕೆಲ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಯಿತು.
ಸಭೆಯಲ್ಲಿ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ಕಾರ್ಯದರ್ಶಿ ಜಯ್ ಶಾ, ಭಾರತ ತಂಡದ ಪ್ರಧಾನ ಕೋಚ್ ರಾಹುಲ್ ದ್ರಾವಿಡ್, ನಾಯಕ ರೋಹಿತ್ ಶರ್ಮಾ, ಎನ್ಸಿಎ ನಿರ್ದೇಶಕ ವಿವಿಎಸ್ ಲಕ್ಷ್ಮಣ್, ಹಿಂದಿನ ಆಯ್ಕೆ ಸಮಿತಿ ಮುಖ್ಯಸ್ಥ ಚೇತನ್ ಶರ್ಮಾ ಪಾಲ್ಗೊಂಡಿದ್ದರು.
ಜಸ್ಪ್ರೀತ್ ಬುಮ್ರಾ, ದೀಪಕ್ ಚಹರ್, ರವೀಂದ್ರ ಜಡೇಜಾ, ಹರ್ಷಲ್ ಪಟೇಲ್ ಸೇರಿ ಅನೇಕ ಆಟಗಾರರು ಗಾಯಗೊಂಡು ಹಲವು ತಿಂಗಳು ಕಾಲ ತಂಡದಿಂದ ಹೊರಗಿರುವ ಕಾರಣ, ಆಟಗಾರರು ಸಂಪೂರ್ಣ ಫಿಟ್ನೆಸ್ ಸಾಧಿಸದೆ ತಂಡಕ್ಕೆ ಮರಳಬಾರದು ಎನ್ನುವ ಉದ್ದೇಶದಿಂದ ಬಿಸಿಸಿಐ ಯೋ-ಯೋ ಟೆಸ್ಟ್ ಅನ್ನು ಪುನಃ ಕಡ್ಡಾಯಗೊಳಿಸಿದೆ.
ಅಚ್ಚರಿ ಎಂದ್ರೆ ಟಿ20 ವಿಶ್ವಕಪ್ ನಲ್ಲಿ ಕಳಪೆ ಪ್ರದರ್ಶನ ತೋರಿದ ಕಾರಣ ಚೇತನ್ ಶರ್ಮಾ ನೇತೃತ್ವದ ಆಯ್ಕೆ ಸಮಿತಿಯನ್ನು ಬಿಸಿಸಿಐ ವಜಾಗೊಳಿಸಿತ್ತು. ಆದರೆ ಭಾನುವಾರ ನಡೆದ ಪರಾಮರ್ಶೆ ಸಭೆಯಲ್ಲಿ ಚೇತನ್ ಪಾಲ್ಗೊಂಡಿದ್ದರು. ಅಲ್ಲದೇ ಅವರು ಕೆಲ ಪ್ರಮುಖ ಆಟಗಾರರ ಆಟದ ವೈಖರಿ ಬಗ್ಗೆ ಅಸಮಾಧಾನ ಸಹ ವ್ಯಕ್ತಪಡಿಸಿದರು ಎಂದು ಮೂಲಗಳು ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ಚೇತನ್ ಆಯ್ಕೆ ಸಮಿತಿಗೆ ಮರು ನೇಮಕ ಬಯಸಿ ಅರ್ಜಿ ಸಲ್ಲಿಸಿದ್ದು, ಹಿಂದಿನ ಸಮಿತಿಯಲ್ಲಿದ್ದ ಹವೀರ್ಂದರ್ ಸಿಂಗ್ ಸಹ ಪುನಃ ಅರ್ಜಿ ಹಾಕಿದ್ದಾರೆ ಎನ್ನಲಾಗಿದೆ.