ಬೆಳಗಾವಿ: ಜಿಲ್ಲೆಯಲ್ಲಿ ಇರಾನಿ ಗ್ಯಾಂಗ್ ಆಕ್ಟಿವ್ ಆಗಿದೆ ಎಂದು ಕೇಳಿ ಬರುತ್ತಿದ್ದು, ಜನರು ಎಚ್ಚರಿಕೆಯಿಂದ ಇರಬೇಕಾಗಿದೆ.
ಈ ಗ್ಯಾಂಗ್ ಈಗ ಜಿಲ್ಲೆಯ ಜನರ ನೆಮ್ಮದಿಯ ನಿದ್ದೆಗೆ ಭಂಗ ತಂದಿದೆ. ಇರಾನಿ ಗ್ಯಾಂಗ್ (Irani gang) ಮಹಿಳೆಯರು ಧೈರ್ಯದಿಂದ ಬೀದಿಯಲ್ಲಿ ಓಡಾಡದ ಪರಿಸ್ಥಿತಿ ತಲೆದೋರಿದೆ. ಬೀದಿಯಲ್ಲಿ ಸಂಚರಿಸುವ ಒಂಟಿ ಮಹಿಳೆಯರು ಹಾಗೂ ಖಾಲಿ ಮನೆಗಳೇ ಈ ಗ್ಯಾಂಗ್ (Theft Case)ನ ಟಾರ್ಗೆಟ್ ಆಗಿದೆ.
ರಾತ್ರಿ ಹೊತ್ತು ಮನೆಗಳ ಮುಂಭಾಗ ಬೀಗ ಹಾಕಿದ್ದರೆ, ಅದನ್ನು ಗಮನಿಸಿ ಮನೆಗೆ ನುಗ್ಗಿ ಲೂಟಿ ಮಾಡುತ್ತಿದ್ದಾರೆ. ಹಗಲು ಹೊತ್ತು ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತಾರೆ. ಈ ಗ್ಯಾಂಗ್ ಮಹಾಂತೇಶ ನಗರ, ಅಮನ್ ನಗರದಲ್ಲಿ ಸೇರಿದಂತೆ ವಿವಿಧೆಡೆ ಮನೆಗಳ್ಳತನ ಮಾಡಿದೆ ಎನ್ನಲಾಗಿದೆ.
2.5 ಲಕ್ಷ ರೂ. ಚಿನ್ನಾಭರಣ, 50 ಸಾವಿರ ಮೌಲ್ಯದ ಬೆಳ್ಳಿ ಹಾಗೂ 2.20 ಲಕ್ಷ ನಗದು ಸೇರಿ 7 ಲಕ್ಷ ಮೌಲ್ಯದ ವಸ್ತು ಎಗರಿಸಿ ಖದೀಮರು ಪರಾರಿಯಾಗಿದ್ದಾರೆ. ಅಲ್ಲದೇ, ರಸ್ತೆಯಲ್ಲಿ ನಿಲ್ಲಿಸಿದ್ದ ಬೈಕ್ ಗಳನ್ನು ಕದ್ದು ಪರಾರಿಯಾಗುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.








