Beast Trailer Release – ರಾ ಏಂಜೆಟ್ ಪಾತ್ರದಲ್ಲಿ “ಬೀಸ್ಟ್” ಅವತಾರ ಎತ್ತಿದ ವಿಜಯ್
ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ದಳಪತಿ ವಿಜಯ್ ಮತ್ತು ಪೂಜಾ ಹೆಗ್ಡೆ ಅಭಿನಯದ ಬೀಸ್ಟ್ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಬಹುದಿನಗಳಿಂದ ಕಾಯುತ್ತಿದ್ದ ಅಭಿಮಾನಿಗಳ ಆಸೆ ಕೊನೆಗೂ ಈಡೇರಿದೆ. ದಳಪತಿ ವಿಜಯ್ ಮತ್ತು ಪೂಜಾ ಹೆಗ್ಡೆ ಅಭಿನಯದ ಬೀಸ್ಟ್ ಚಿತ್ರದ ಟ್ರೈಲರ್ ಯುಗಾದಿ ಹಬ್ಬದ ಪ್ರಯುಕ್ತ ಶನಿವಾರ ಸಂಜೆ ಬಿಡುಗಡೆಯಾಗಿದೆ.
ಚಿತ್ರದ ನಿರ್ದೇಶಕ ನೆಲ್ಸನ್ ದಿಲೀಪ್‌ಕುಮಾರ್, ನಟ ದಳಪತಿ ವಿಜಯ್ ಮತ್ತು ನಟಿ ಪೂಜಾ ಹೆಗ್ಡೆ ಚಿತ್ರದ ಟ್ರೈಲರ್ ಅನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಚಿತ್ರದ ಟ್ರೇಲರ್ ನಲ್ಲಿ ದಳಪತಿ ವಿಜಯ್ ಅಕ್ಷನ್ ದೃಶ್ಯಗಳಲ್ಲಿ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ.
ಚೆನ್ನೈನ ಮಾಲ್ ಅನ್ನು ಭಯೋತ್ಪಾದಕರು ಹೈಜಾಕ್ ಮಾಡಿದ್ದಾರೆ ಎಂಬ ಬೆದರಿಕೆ ಕರೆಯೊಂದಿಗೆ ಟ್ರೇಲರ್ ಪ್ರಾರಂಭವಾಗುತ್ತದೆ. ಇದರ ನಂತರ, ವಿಜಯ್ ಅವರ ವೀರ ರಾಘವನ್ ಅವರ ಎಂಟ್ರಿ ಟ್ರೈಲರ್‌ನಲ್ಲಿ ಇದೆ. ಚಿತ್ರದಲ್ಲಿ ಗೂಢಚಾರನಾಗಿ ನಟಿಸಿರುವ ದಳಪತಿ ವಿಜಯ್, ಅವರು ಭಯೋತ್ಪಾದಕರ ಸೆರೆಯಾಳಾಗಿರುವ ಜನರನ್ನ ಬಿಡಿಸುವ ಪಾತ್ರವನ್ನ ನಿರ್ವಹಿಸಿದ್ದಾರೆ.
ಚಿತ್ರದ ಕಥೆಯ ಬಗ್ಗೆ ಮಾತನಾಡುವುದಾದರೆ ರಾಘವನ್ ಎಂಬ ರಾ ಏಜೆಂಟ್ ಪಾತ್ರವನ್ನ ವಿಜಯ್ ನಿರ್ವಹಿಸಲಿದ್ದಾರೆ. ನೆಲ್ಸನ್ ಅವರ ಹಿಂದಿನ ಚಿತ್ರಗಳಿಗಿಂತ ಭಿನ್ನವಾಗಿ ಈ ಚಿತ್ರವು ಆಕ್ಷನ್ ಮತ್ತು ಕಾಮಿಡಿಯಿಂದ ತುಂಬಿದೆ. ಚಿತ್ರದಲ್ಲಿ ಮೂರು ಹಾಡುಗಳಿದ್ದು, ಅದರಲ್ಲಿ ಎರಡು ಹಾಡುಗಳು ಅರೇಬಿ ಕುತ್ತು ಮತ್ತು ಜಾಲಿ ಓ ಜಿಮ್ಖಾನಾ ಬಿಡುಗಡೆಯಾಗಿದೆ. ಮತ್ತು ಮೂರನೇ ಹಾಡು ಕಥೆಯ ಭಾಗವಾಗಲಿದೆ. ಚಿತ್ರವು ಏಪ್ರಿಲ್ 13 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ಬೀಸ್ಟ್ ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು ಸನ್ ಪಿಕ್ಚರ್ಸ್ ನಿರ್ಮಿಸಿದೆ. ಚಿತ್ರದಲ್ಲಿ ದಳಪತಿ ವಿಜಯ್, ಪೂಜಾ ಹೆಗ್ಡೆ ಮತ್ತು ಸೆಲ್ವರಾಘವನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರೆ, ಶೈನ್ ಟಾಮ್ ಚಾಕೊ, ಯೋಗಿ ಬಾಬು, ರಾಡಿನ್ ಕಿಂಗ್ಸ್ಲಿ ಮತ್ತು ಜಾನ್ ವಿಜಯ್ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.








