ಸಿಂಗಾಪುರ್ : ಬಿಯರ್ ನ ಹೊಸ ಬ್ರ್ಯಾಂಡ್ ವೊಂದು ಸಿಂಗಾಪುರದಲ್ಲಿ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ವಿಶೇಷ ಬ್ರ್ಯಾಂಡ್ ನ ಬಿಯರ್ ಸಿಂಗಾಪುರ ಮದ್ಯಪ್ರಿಯರ ಮನಗೆದ್ದಿದೆ.
ಬ್ರಿಯರ್ ಬ್ರ್ಯಾಂಡ್ ಹೆಸರು ʼನ್ಯೂಬ್ರೂʼ (NEWBrew). ಅಂದ್ಹಾಗೆ ಇದನ್ನ ಶೌಚ ನೀರನ್ನು ಮರುಬಳಸಿ ಕುಡಿಯುವ ನೀರಾಗಿ ಸಂಸ್ಕರಿಸಿ ಬಿಯರ್ ತಯಾರಿಸಲಾಗ್ತಿದೆ. ಹೊಸ ಬ್ರ್ಯಾಂಡ್ ನ ಬಿಯರ್ ಈಗಾಗಲೇ ಮಾರುಕಟ್ಟೆಗೆ ಬಂದಿದ್ದು, ಮದ್ಯಪ್ರಿಯರು ಆಸಕ್ತಿಯಿಂದ ಕೊಳ್ಳುತ್ತಿದ್ದಾರೆ.
ಆಲ್ಕೊಹಾಲ್ ಯುಕ್ತ ಪಾನೀಯವು ದೇಶದ ರಾಷ್ಟ್ರೀಯ ಜಲ ಸಂಸ್ಥೆ, PUB ಮತ್ತು ಸ್ಥಳೀಯ ಕ್ರಾಫ್ಟ್ ಬ್ರೂವರಿ ಬ್ರೂವರ್ಕ್ಜ್ ಸಹಯೋಗದಲ್ಲಿ ತಯಾರಿಸಲ್ಪಟ್ಟಿದೆ. ʼನ್ಯೂಬ್ರೂʼ ಏಪ್ರಿಲ್ನಿಂದ ಸೂಪರ್ ಮಾರುಕಟ್ಟೆಗಳಲ್ಲಿ ಮಾರಾಟವಾಗುತ್ತಿದೆ.
ಇದನ್ನು ಟಾಯ್ಲೆಟ್ ನೀರನ್ನು ಮರುಬಳಸಿ ತಯಾರಿಸಲಾಗಿದೆ ಎಂದು ಸ್ಪಷ್ಟವಾಗಿ ನಂಬಲು ಸಾಧ್ಯವಾಗಲಿಲ್ಲ ಎಂದು ಗ್ರಾಹಕರು ಹೇಳ್ತಿದ್ದಾರೆ.. ಸೂಪರ್ ಮಾರುಕಟ್ಟೆಯಲ್ಲಿ ಹೊಸ ಬ್ರ್ಯಾಂಡ್ ನ ಬಿಯರ್ ಖರೀದಿಸುತ್ತಿದ್ದಾರೆ..
ಕೊಳಚೆ ನೀರನ್ನು ಕುಡಿಯುವ ನೀರಾಗಿ ಸಂಸ್ಕರಿಸುವ ಪರಿಕಲ್ಪನೆಗೆ ಆರಂಭದಲ್ಲಿ ವ್ಯಾಪಕ ವಿರೋಧವಿತ್ತು. ಕಳೆದ ದಶಕದಲ್ಲಿ ಪ್ರಪಂಚದಾದ್ಯಂತ ಶುದ್ಧ ನೀರಿನ ಪೂರೈಕೆ ತೊಂದರೆ ಎದುರಾಗಿತ್ತು. ಈ ವೇಳೆ ಸಂಸ್ಕರಿಸಿದ ನೀರಿಗೆ ಬೆಂಬಲ ವ್ಯಕ್ತವಾಯಿತು.
ನಾನಾ ಬ್ರ್ಯಾಂಡ್ ಬಿಯರ್ಗಳು ಮಾರುಕಟ್ಟೆಯಲ್ಲಿದ್ದು, ಇದು ವಿಶೇಷ ಎಂದು ನಮಗೆ ಮನವರಿಕೆಯಾಗುವುದಿಲ್ಲ. ಬಿಯರ್ ಬೇಕೆನಿಸಿದರೆ, ಸಾಮಾನ್ಯ ನೀರಿನಿಂದ ತಯಾರಿಸಿದ ಯಾವುದನ್ನಾದರೂ ಆರಿಸಿಕೊಳ್ಳುತ್ತೇನೆ ಎಂದು ಸಿಂಗಾಪುರದ ವಿದ್ಯಾರ್ಥಿ ಲೋ ಯು ಚೆನ್ ಹೇಳಿದ್ದಾರೆ.