ಹಾಸನ ಜಿಲ್ಲೆಯಲ್ಲಿ ಬೀಟಮ್ಮ ಗ್ಯಾಂಗ್ ಹಾವಳಿ ಮುಂದುವರೆದಿದ್ದು, ಗ್ರಾಮದೊಳಗೆ ಎಂಟ್ರಿಕೊಟ್ಟು ಗಜಪಡೆ ಆತಂಕ ಸೃಷ್ಟಿಸಿದೆ.
ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ತಾವರೆಕೆರೆ ಗ್ರಾಮದಲ್ಲಿ ಕಾಡಾನೆಗಳ ಹಿಂಡು ಹೊಕ್ಕಿದ್ದು, ಗ್ರಾಮಸ್ಥರನ್ನು ಭಯಭೀತಗೊಳಿಸಿವೆ. ಸುಮಾರು ಇಪ್ಪತ್ತಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಗ್ರಾಮದೊಳಗೆ ನುಗ್ಗಿ ಭತ್ತ, ಕಾಫಿ, ಬಾಳೆ ಬೆಳೆಯನ್ನು ನಾಶ ಮಾಡಿವೆ.
ಹೀಗಾಗಿ ಗ್ರಾಮಸ್ಥರು ಕಣ್ಣೀರು ಸುರಿಸುವಂತಾಗಿದೆ. ಗ್ರಾಮಸ್ಥರು, ಅರಣ್ಯ ಅಧಿಕಾರಿಗಳು ಕಾಡಾನೆಗಳನ್ನು ಅರಣ್ಯಕ್ಕೆ ಓಡಿಸಲು ಹರಸಾಹಸ ಪಡುತ್ತಿದ್ದಾರೆ. ಬೆಳೆ ಹಾನಿಯಿಂದ ಅನ್ನದಾತರು ಕಂಗಾಲಾಗಿದ್ದಾರೆ. ಗ್ರಾಮಸ್ಥರು ಅರಣ್ಯ ಇಲಾಖೆ, ಸರ್ಕಾರದ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.








