ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ – ವಿವಿಧ ಹುದ್ದೆಗಳ ನೇಮಕಾತಿಗಾಗಿ ಆನ್-ಲೈನ್ ಅರ್ಜಿ ಆಹ್ವಾನ Bel Recruitment oct
ಬೆಂಗಳೂರು, ಅಕ್ಟೋಬರ್09: ಬೆಂಗಳೂರಿನಲ್ಲಿ ಕೇಂದ್ರ ರಕ್ಷಣಾ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್(ಬಿಇಎಲ್), ಟ್ರೈನಿ ಎಂಜಿನಿಯರ್, ಟ್ರೈನಿ ಆಫೀಸರ್, ಪ್ರಾಜೆಕ್ಟ್ ಆಫೀಸರ್ ಮತ್ತು ಪ್ರಾಜೆಕ್ಟ್ ಎಂಜಿನಿಯರ್ ಹುದ್ದೆಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿ ಆಹ್ವಾನಿಸಿದೆ. Bel Recruitment oct
ಆನ್‌ಲೈನ್ ನೋಂದಣಿ-ಕಮ್-ಅಪ್ಲಿಕೇಶನ್ ಪ್ರಕ್ರಿಯೆಯು ಅಕ್ಟೋಬರ್ 7, 2020 ರಂದು ಪ್ರಾರಂಭವಾಗಿದ್ದು, ಅಕ್ಟೋಬರ್ 21, 2020 ರಂದು ಮುಕ್ತಾಯಗೊಳ್ಳುತ್ತದೆ.

ಬಿಇಎಲ್ ನೇಮಕಾತಿ 2020 ರ ಮೂಲಕ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಪೇಕ್ಷಿತ ಅಭ್ಯರ್ಥಿಗಳು ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್, ಮೆಕ್ಯಾನಿಕಲ್, ಸಿವಿಲ್, ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವಿಭಾಗಗಳಲ್ಲಿ ಬಿ.ಇ / ಬಿ.ಟೆಕ್ / ಬಿ.ಎಸ್ಸಿ ಹೊಂದಿರಬೇಕು.
ಭಾರತದಲ್ಲಿ ಒಂದೇ ಒಂದು ಕೊರೋನಾ ಪ್ರಕರಣ ವರದಿಯಾಗದ ಏಕೈಕ ಪ್ರದೇಶದಲ್ಲಿ ಶಾಲೆಗಳು ಪುನರಾರಂಭ
ಹಣಕಾಸು ವಿಷಯದಲ್ಲಿ ಎಂಬಿಎ ಪದವಿ ಪಡೆದಿರಬೇಕು.
ಬಿಇಎಲ್ ಅಧಿಸೂಚನೆ 2020 ರಲ್ಲಿ ವಿವರಿಸಿರುವಂತೆ ಕನಿಷ್ಠ ಒಂದರಿಂದ ಎರಡು ವರ್ಷಗಳ ಸಂಬಂಧಿತ ಕೈಗಾರಿಕಾ ಕೆಲಸದ ಅನುಭವ ಹೊಂದಿರಬೇಕು.
ಬಿಇಎಲ್ ನೇಮಕಾತಿ 2020 ಮೂಲಕ ವಿವಿಧ ಹುದ್ದೆಗಳಿಗೆ ಅಭ್ಯರ್ಥಿಗಳ ಆಯ್ಕೆ ಶಾರ್ಟ್‌ಲಿಸ್ಟಿಂಗ್, ಅಕಾಡೆಮಿಕ್ ಕ್ವಾಲಿಫಿಕೇಷನ್, ಕೆಲಸದ ಅನುಭವ ಮತ್ತು ಮೆರಿಟ್ ಮೂಲಕ ನಡೆಯಲಿದೆ.
ಹತ್ರಾಸ್ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಮತ್ತೊಂದು ತಿರುವು
ವಿವಿಧ ಹುದ್ದೆಗಳಿಗೆ ಬಿಇಎಲ್ ನೇಮಕಾತಿ 2020 ಮೂಲಕ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಕೃತ ಬಿಇಎಲ್ ವೆಬ್‌ಸೈಟ್‌ನಲ್ಲಿ ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಳ್ಳಬೇಕು.

ಬಿಇಎಲ್ ನೇಮಕಾತಿ ಅಧಿಸೂಚನೆಯಲ್ಲಿ ತಿಳಿಸಿರುವಂತೆ 2020 ರ ಅಕ್ಟೋಬರ್ 27 ರಂದು ಅಥವಾ ಮೊದಲು ತಮ್ಮ ಅರ್ಜಿಗಳನ್ನು ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಮತ್ತು ಬಿಇಎಲ್ ನೇಮಕಾತಿ 2020 ಪಿಡಿಎಫ್ ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಲು
http://bel-india.in ಸಂಪರ್ಕಿಸಬಹುದು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
https://twitter.com/SaakshaTv








