ಬೆಳಗಾವಿ : ರಾಜ್ಯಾದ್ಯಂತ ಮಳೆರಾಯ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ಅದ್ರಲ್ಲೂ ಕರಾವಳಿ, ಪಶ್ಚಿಮ ಘಟ್ಟ, ಮಲೆನಾಡು ಭಾಗಗಳಲ್ಲಿ ವರುಣ ರೌದ್ರಾವತಾರ ತಾಳಿದ್ದಾನೆ. ಪಶ್ಚಿಮ ಘಟ್ಟ ಪ್ರದೇಶದಲ್ಲಿ ವರುಣನ ಅಬ್ಬರ ಕೊಂಚ ಜೋರಾಗಿಯೇ ಇದೆ. ವರುಣನ ಅಬ್ಬರಕ್ಕೆ ಜಿಲ್ಲೆಯ ಜಲಪಾತಗಳು, ನದಿಗಳು ತುಂಬಿ ಹರಿಯುತ್ತಿವೆ. ಪಶ್ಚಿಮ ಘಟ್ಟದಲ್ಲಿ ಭಾರೀ ಮಳೆಯಾಗುತ್ತಿರುವ ಪರಿಣಾಮ ಭಾರೀ ಪ್ರಮಾಣದಲ್ಲಿ ನೀರು ಘಟಪ್ರಬಾ ನದಿ ಸೇರುತ್ತಿದೆ. ಹೀಗೆ ಮುಂದುವರೆದಲ್ಲಿ ನದಿ ಅಪಾಯ ಮಟ್ಟ ಮೀರಿ ಹರಿದು ನದಿ ಪಾತ್ರದ ಗ್ರಾಮಗಳು ಮುಳುಗಡೆಯಾಗುವ ಸಾಧ್ಯತೆಯಿದೆ. ಹೀಗಾಗಿ ನದಿ ಪಾತ್ರದ ಜನರಲ್ಲಿ ನಡುಕ ಶುರುವಾಗಿದ್ದು, ನದಿ ತೀರದ ಗ್ರಾಮಸ್ಥರು ನೆರೆ ಭೀತಿಯಲ್ಲಿ ಕಾಲ ಕಳೆಯುವಂತಾಗಿದೆ. ಮಹಾಮಳೆಯಿಂದಾಗಿ ಭಾರತದ ನಯಾಗಾರ ಫಾಲ್ಸ್ ಎಂದು ಖ್ಯಾತಿ ಗಳಿಸಿದ ಗೋಕಾಕ್ ಫಾಲ್ಸ್ ಹಾಲಿನ ನೊರೆಯಂತೆ ಉಕ್ಕಿ ಹರಿಯುತ್ತಿದೆ. ಗೋಕಾಕ್ ಫಾಲ್ಸ್ ನಿಂದ ಧುಮ್ಮಿಕ್ಕುವ ಜಲಧಾರೆ ಮೈ ಜುಮ್ ಅನ್ನುವಷ್ಟರ ಮಟ್ಟಿಗೆ ಅದರ ಭೋರ್ಗರೆತವಿದೆ. ಜಿಲ್ಲೆಯಲ್ಲಿ ಬಿಟ್ಟು ಬಿಡದೆ ಸತತವಾಗಿ ಸುರಿಯುತ್ತಿರುವ ಮಹಾಮಳೆಯಿಂದಾಗಿ ಹಳ್ಳ ಕೊಳ್ಳ, ಕೆರೆ ಕಟ್ಟೆ, ನದಿಗಳು ತುಂಬಿ ಹರಿಯುತ್ತಿದ್ದು, ಅಪಾಯದ ಮುನ್ಸೂಚನೆ ಕೊಟ್ಟಿದೆ. ಜಿಲ್ಲೆಯ ಜನರು ವರುಣನ ಮುನಿಸಿಗೆ ಬೆಚ್ಚಿ ಬಿದ್ದ್ದಿದ್ದಾರೆ. ಒಂದೆಡೆ ಹಾಲಿನ ನೊರೆಯಂತೆ ಉಕ್ಕಿ ಹರಿಯುತ್ತಿರುವ ಗೋಕಾಕ್ ಫಾಲ್ಸ್ ನೋಡುವುದೇ ಕಣ್ಣಿಗೆ ಹಬ್ಬ. ಅಷ್ಟು ರಮಣೀಯವಾಗಿದೆ ಜಲಧಾರೆಯ ದೃಷ್ಯ. ಆದ್ರೆ ಈ ಸೌಂದರ್ಯ ಸವಿಯಲು ಪ್ರವಾಸಿಗರೇ ಇಲ್ಲದಂತಾಗಿರುವುದೇ ಬೇಸರದ ಸಂಗತಿಯಾಗಿದೆ.
ದೀಪಾರಾಧನೆಯ ರಹಸ್ಯ: ಯಾವ ಎಣ್ಣೆ, ಎಷ್ಟು ಬತ್ತಿ ಹಚ್ಚಿದರೆ ಏನು ಫಲ?
1"ಇಪ್ಪೆ ಎಣ್ಣೆ"ಯು ದೇವರಿಗೆ ತುಂಬಾ ತುಂಬಾ ಶ್ರೇಷ್ಠ.. ಇದರಿಂದ ಮನೆಯಲ್ಲಿ ದುಃಖ, ದಾರಿದ್ರ್ಯ, ಬಡತನ, ಧನದರಿದ್ರ , ಅನ್ನದರಿದ್ರ, ನಿತ್ಯದರಿದ್ರ, ಹಾಗೂ ಸಾಲದ ಭಾದೆ ನಿವಾರಣೆಯಾಗುತ್ತದೆ .....








