ಬೆಳಗಾವಿ ಗಡಿ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಾತ್ಮಕ ಪೋಸ್ಟ್ : FIR ದಾಖಲು..!
ಬೆಳಗಾವಿ: ಬೆಳಗಾವಿ ವಿಚಾರದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಾತ್ಮಕ ಪೋಸ್ಟ್ ಒಂದನ್ನ ಹಾಕಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು 4 ಪ್ರಕರಣಗಳನ್ನ ದಾಖಲಿಸಿದ್ದಾರೆ.
ಬೆಂಗಳೂರಲ್ಲಿ Amazon Food ಡಿಲೆವರಿ: Prime ಸದಸ್ಯರಿಗೆ ಅಮೇಜಿಂಗ್ ಆಫರ್..!
ವಾಟ್ಸ್ ಆಪ್, ಫೇಸ್ ಬುಕ್ ಗಳ ಅಡ್ಮಿನ್ ಗಳ ವಿರುದ್ಧ 4 ಪ್ರತ್ಯೇಕ ಠಾಣೆ ವ್ಯಾಪ್ತಿಯಲ್ಲಿ ಕೇಸ್ ದಾಖಲಿಸಲಾಗಿದೆ. ಮಹಾರಾಷ್ಟ್ರ ಮತ್ತು ಕರ್ನಾಟಕದ ನಡುವೆ ಗಡಿ ವಿವಾದದ ವಿಚಾರದ ಬಗ್ಗೆ ಗಲಭೆ ಸೃಷ್ಟಿಸುವ ಉದ್ದೇಶದಿಂದ ಆಗಾಗ ಇಂತಹ ಪ್ರಚೋದನಾತ್ಮಕ ಪೋಸ್ಟ್ ಗಳನ್ನ ಹಾಕಲಾಗ್ತಿದೆ ಎಂಬ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳ ಮೇಲೆ ಪೊಲೀಸರು ನಿಗಾ ಇಟ್ಟಿದ್ಧಾರೆ.
ಛತ್ತೀಸ್ ಗಢ – 13 ಮಂದಿ ತೃತೀಯಲಿಂಗದವರು ಕಾನ್ ಸ್ಟೇಬಲ್ ಗಳಾಗಿ ಆಯ್ಕೆ..!
ಟಿಳಕವಾಡಿ, ಮಾರ್ಕೇಟ್ ಠಾಣೆ, ಗ್ರಾಮೀಣ ಹಾಗೂ ಶಹಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಫೇಸ್ ಬುಕ್ ಹಾಗೂ ವಾಟ್ಸ್ ಅಪ್ ಅಡ್ಮಿನ್ಗಳನ್ನೇ ಹೊಣೆಗಾರರನ್ನಾಗಿ ಮಾಡಿ 4 ಪ್ರಕರಣ ದಾಖಲಿಸಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.