ಛತ್ತೀಸ್ ಗಢ – 13 ಮಂದಿ ತೃತೀಯಲಿಂಗದವರು ಕಾನ್ ಸ್ಟೇಬಲ್ ಗಳಾಗಿ ಆಯ್ಕೆ..!

1 min read

ಛತ್ತೀಸ್ ಗಢ – 13 ಮಂದಿ ತೃತೀಯಲಿಂಗದವರು ಕಾನ್ ಸ್ಟೇಬಲ್ ಗಳಾಗಿ ಆಯ್ಕೆ..!

ಛತ್ತೀಸ್ ಗಢ: ಸಮಾಜದಲ್ಲಿ ಎಲ್ಲರಿಗೂ ಸಮಾನತೆಯಿಂದ ಬದುಕುವ ಹಕ್ಕಿದೆ. ಆದ್ರೂ ಮಂಗಳಮುಖಿ ಸಮುದಾಯಕ್ಕೆ ಸಿಗಬೇಕಾದ ನ್ಯಾಯ, ಸೌಲಭ್ಯಗಳು ಅವರಿಗೆ ಸಿಗುತ್ತಿಲ್ಲ. ಇದರ ನಡುವೆ ಛತ್ತೀಸ್ ಘಡದಲ್ಲಿ ಪೊಲೀಸರು 13 ಮಂದಿ ಮಂಗಳಮುಖಿಯರನ್ನು ಕಾನ್ಸ್ ಟೇಬಲ್ ಗಳನ್ನಾಗಿ ನೇಮಕ ಮಾಡಿಕೊಂಡಿದ್ದಾರೆ.

ಶ್ರೀಲಂಕಾದಲ್ಲಿ ಇನ್ಮುಂದೆ ಬುರ್ಖಾ ಧರಿಸುವಂತಿಲ್ಲ : ಲಂಕಾ ಸರ್ಕಾರದಿಂದ ಮಹತ್ವದ ಕ್ರಮ..!

ಹೌದು ಸಮಾಜದಲ್ಲಿ ಉನ್ನತಮಟ್ಟದಲ್ಲಿ ಬದುಕುವ ಹಕ್ಕು ಎಲ್ಲರಿಗೂ ಇದೆ. ಎಲ್ಲರಿಗೂ ಅವಕಾಶ ಸಿಗಬೇಕಾಗಿದೆ. ಇದೇ ನಿಟ್ಟಿನಲ್ಲಿ ಛತ್ತೀಸ್ ಗಢ ಪೊಲೀಸರು ತೃತೀಯಲಿಂಗದವರನ್ನು ಕಾನ್ ಸ್ಟೇಬಲ್ ಗಳನ್ನಾಗಿ ನೇಮಿಸಿಕೊಂಡು ಅವರನ್ನು ಅವರು ಸಾಬೀತು ಪಡಿಸಿಕೊಳ್ಳಲು ಒಂದು ಮುಖ್ಯವಾದ ಅವಕಾಶವನ್ನು ಕಲ್ಪಿಸಿಕೊಟ್ಟಿದ್ದಾರೆ.

ಇನ್ನೂ ಛತ್ತೀಸ್ ಗಢ ಪೊಲೀಸರ ಕಾರ್ಯ ಶ್ಲಾಘನೀಯ. ಅವರನ್ನ ಮಾದರಿಯಾಗಿಟ್ಟುಕೊಂಡು ಎಲ್ಲೆಡೆ ಅವರಿಗೆ ಉನ್ನತ ದರ್ಜೆಗಳ ಅವಕಾಶಗಳನ್ನ ಹೆಚ್ಚು ಹೆಚ್ಚಾಗಿ ಒದಗಿಸಬೇಕು. ಅಂದ್ಹಾಗೆ ಇದನ್ನೂ ಕೆಲ ದಿನಗಳ ಹಿಂದೆ ನಮ್ಮ ಕರ್ನಾಟಕದಲ್ಲಿ ಇನ್ನೂ ಕೆಲವು ಇದೇ ರೀತಿಯ ಘಟನೆ ವರದಿಯಾಗಿದೆ. ತೃತೀಯಲಿಂಗ ಮಹಿಳೆ ದೇವಿಕಾ ಅವರು ಗ್ರಾಮ ಪಂಚಾಯ್ತಿಯ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದರು.

ಅಂಬಾನಿ ಮನೆ ಮುಂದೆ ಸ್ಫೋಟಕ ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ : ಎನ್ ಕೌಂಟರ್ ಸ್ಪೆಷಲಿಸ್ಟ್ ಕೈವಾಡ , ಸಚಿನ್ ವಾಜಿ ಬಂಧನ..!

ಇನ್ನೂ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾನ್ಸ್ಟೇಬಲ್ ಆಗಿ ನೇಮಕಗೊಂಡಿರುವ ಸೋನಿಯಾ ಇದು ನಮಗೆ ಸಿಕ್ಕಿರುವ ದೊಡ್ಡ ಅವಕಾಶವಾಗಿದೆ. ನಾವು ಪೊಲೀಸ್ ಇಲಾಖೆಗೆ ಧನ್ಯವಾದ ಹೇಳಲು ಬಯಸುತ್ತೇವೆ. ಈ ನಿರ್ಧಾರ ಜನರು ನಮ್ಮ ಸಮುದಾಯವನ್ನು ನೋಡುವ ರೀತಿಯಲ್ಲಿ ಬದಲಾವಣೆಯನ್ನು ತರುತ್ತದೆ ಎಂದು ಅಭಿಪ್ರಾಯವನ್ನ ಹಂಚಿಕೊಂಡಿದ್ದಾರೆ.

ಎಂಥ ಜನ ಇವರು… ನಿದ್ದೆಯಲ್ಲಿದ್ದ ಸಿಂಹದ ಜೊತೆ ಪಾಕಿಸ್ತಾನದ ನವದಂಪತಿ ಫೋಟೋಶೂಟ್ : ನೆಟ್ಟಿಗರಿಂದ ಛೀಮಾರಿ..!

ಇದು ಚರಿತ್ರೆ ಸೃಷ್ಠಿಸುವ ಅವತಾರ… ಸನ್ಯಾಸಿ ಗೆಟಪ್ ನಲ್ಲಿ ಧೋನಿ…? ಏನಿದು ಧೋನಿ ಮಹಿಮೆ..?

ರಾಬರ್ಟ್ ಸಿನಿಮಾದ ದೃಶ್ಯದ ಪೈರೆಸಿ ಯತ್ನ : ಆರೋಪಿ ವಿರುದ್ಧ ಪ್ರಕರಣ ದಾಖಲು..!  

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd