ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ-ರಾಜಕಾರಣಿ ವಿಜಯ್ ಭಾರೀ ಸಂಚಲನ ಸೃಷ್ಟಿಸಿದ್ದಾರೆ. ಅವರು ಸ್ಪರ್ಧಿಸಿದ ಎರಡು ಕ್ಷೇತ್ರಗಳಾದ ಪೆರಂಬೂರು ಮತ್ತು ತಿರುಚಿ ಈಸ್ಟ್‌ನಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಪೆರಂಬೂರಿನಲ್ಲಿ ಡಿಎಂಕೆ ಅಭ್ಯರ್ಥಿ ಆರ್.ಡಿ. ಶೇಖರ್ ವಿರುದ್ಧ ಸುಮಾರು 40 ಸಾವಿರ ಮತಗಳ ಅಂತರದಿಂದ ವಿಜಯ್ ಗೆದ್ದಿದ್ದಾರೆ. ತಿರುಚಿ ಈಸ್ಟ್‌ನಲ್ಲಿ ಅವರು 20 ಸಾವಿರ ಮತಗಳ ಬಹುಮತದೊಂದಿಗೆ ಜಯ ಸಾಧಿಸಿದ್ದಾರೆ.
ಇನ್ನೊಂದೆಡೆ, ವಿಜಯ್ ನೇತೃತ್ವದ ಟಿವಿಕೆ ಪಕ್ಷವು ರಾಜ್ಯದಾದ್ಯಂತ ಭರ್ಜರಿ ಜಯ ದಾಖಲಿಸಿದೆ.
ಈ ಫಲಿತಾಂಶ ತಮಿಳುನಾಡಿನ ರಾಜಕೀಯದಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡುವಂತಿದ್ದು, ವಿಜಯ್ ರಾಜಕೀಯ ಭವಿಷ್ಯದ ಬಗ್ಗೆ ಭಾರೀ ಚರ್ಚೆ ಆರಂಭವಾಗಿದೆ.







