ರಾಬರ್ಟ್ ಸಿನಿಮಾದ ದೃಶ್ಯದ ಪೈರೆಸಿ ಯತ್ನ : ಆರೋಪಿ ವಿರುದ್ಧ ಪ್ರಕರಣ ದಾಖಲು..!  

1 min read
Darshan roberrt

ರಾಬರ್ಟ್ ಸಿನಿಮಾದ ದೃಶ್ಯದ ಪೈರೆಸಿ ಯತ್ನ : ಆರೋಪಿ ವಿರುದ್ಧ ಪ್ರಕರಣ ದಾಖಲು..!

ಬೆಂಗಳೂರು: ಬಹುನಿರೀಕ್ಷೆಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಮಾರ್ಚ್ 11 ರಂದು ರಿಲೀಸ್ ಆಗಿ ಭಾರೀ ಸದ್ದು ಮಾಡ್ತಿದೆ. ಬಾಕ್ಸ್ ಆಫೀಸ್ ಕಲೆಕ್ಷನ್ ಭರ್ಜರಿಯಾಗಿದೆ. ಈ ನಡುವೆ ರಾಬರ್ಟ್ ಸಿನಿಮಾ ಪೈರೆಸಿ ಅಲೆಯಲ್ಲಿ ಸಿಲುಕಿದೆ. ಹೌದು ರಾಬರ್ಟ್ ಸಿನಿಮಾದ ಪೈರಸಿ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯ ವಿರುದ್ಧ ಇದೀಗ  ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನಿದ್ದೆಗೆಟ್ರೆ ಭ್ರಮೆಯಲ್ಲಿ ಬದುಕುತ್ತಾರೆ ಮನುಷ್ಯರು : ಜೀವನದ ಸತ್ಯಗಳು..!

ರಾಬರ್ಟ್ ಸಿನಿಮಾ ಕರ್ನಾಟಕ ,ಆಂಧ್ರಪ್ರದೇಶ, ತೆಲಂಗಾಣ ಸೇರಿ ಹಲವೆಡೆ ಭರ್ಜರಿಯಾಗಿ ಪ್ರದರ್ಶನ ಕಾಣ್ತಿದೆ. ತೆಲುಗಿನಲ್ಲೂ ರಾಬರ್ಟ್ ಅಬ್ಬರ ಜೋರಾಗಿಯೇ ಇದೆ. ಇದರ ನಡುವೆಯೇ ಪೈರೆಸಿ ಹಾವಳಿಯೂ ಹೆಚ್ಚಾಗಿದೆ. ಸಿನಿಮಾದ ದೃಶ್ಯವೊಂದನ್ನ ಪೈರೆಸಿ ಮಾಡಲು ಹೊರಟಿದ್ದ ವ್ಯಕ್ತಿಯೊಬ್ಬನ ವಿರುದ್ಧ ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಅಷ್ಟೇ ಅಲ್ಲ ಸಿನಿಮಾ ರಿಲೀಸ್ ಆಗಲಿಕ್ಕೂ ಮುಂಚೆಯೇ ಸಿನಿಮಾದ ನಿರ್ಮಾಪಕ ಉಮಾಪತಿ ಅವರು ಪೈರೆಸಿ  ಮಾಡುವವರಿಗೆ ಎಚ್ಚರಿಕೆ ನೀಡಿದ್ದರು. ಪೈರಸಿ ಮಾಡಿ ಸಿಕ್ಕಿಹಾಕಿಕೊಂಡಲ್ಲಿ ಅವರನ್ನು ನ್ಯಾಯಾಲಯದಲ್ಲಿ ಅಲಿಸದೇ ಬಿಡೋದಿಲ್ಲ ಎಂದು ಎಚ್ಚರಿಕೆ ನೀಡಿದ್ದರು.

ನಿದ್ದೆಗೆಟ್ಟರೆ ತೂಕ ಹೆಚ್ಚಾಗುತ್ತೆ : ಮನೋವಿಜ್ಞಾನದ 5 ಸತ್ಯಗಳು..!

ಇನ್ನೂ ಇತ್ತೀಚೆಗೆಷ್ಟೇ ತೆರೆಕಂಡಿದ್ದ ರಿಷಬ್ ಶೆಟ್ಟಿ ಅಭಿನಯದ ಹೀರೋ ಸಿನಿಮಾ ಕೂಡ ಪೈರೆಸಿ ಸುಳಿಯಲ್ಲಿ ಸಿಲುಕಿತ್ತು. ಇದೇ ಕಾರಣಕ್ಕೆ ಸಾಮಾಜಿಕ ಜಾಲತಾಣದಲ್ಲಿ ರಿಷಬ್ ಶೆಟ್ಟಿ ಅವರು ಪೈರೆಸಿ ಮಾಡುವವರ ವಿರುದ್ಧ ಆಕ್ರೋಶ  ಹಾಗೂ ಬೇಸರವನ್ನ ವ್ಯಕ್ತಪಡಿಸಿದ್ದರು. ಇನ್ನೂ ಇತ್ತೀಚೆಗೆ ಪುನೀತ್ ರಾಜ=ಜ್ ಕುಮಾರ್ ಅವರು ಸಹ ಈ ಬಗ್ಗೆ  ಮಾತನಾಡಿ ಪೈರೆಸಿ ಮಾಡೋದು ಕಂಡುಬಂದರೆ ಅಭಿಮಾನಿಗಳು ತಡೆಯೋ ಪ್ರಯತ್ನ ಮಾಡಬೇಕು. ದಯಮಾಡಿ ಪೈರೆಸಿ ಕಾಪಿಗಳನ್ನ ನೋಡಬಾರದು ಎಂದು ಮನವಿ ಮಾಡಿಕೊಂಡಿದ್ದರು.

ಐಪಿಎಲ್ – ಮೇ ತಿಂಗಳಿನಲ್ಲಿ ಹೊಸ ಎರಡು ತಂಡಗಳಿಗೆ ಬಿಡ್ಡಿಂಗ್ ಪ್ರಕ್ರಿಯೆ..!

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd