ಐಪಿಎಲ್ – ಮೇ ತಿಂಗಳಿನಲ್ಲಿ ಹೊಸ ಎರಡು ತಂಡಗಳಿಗೆ ಬಿಡ್ಡಿಂಗ್ ಪ್ರಕ್ರಿಯೆ..!
1 min read
ಐಪಿಎಲ್ – ಮೇ ತಿಂಗಳಿನಲ್ಲಿ ಹೊಸ ಎರಡು ತಂಡಗಳಿಗೆ ಬಿಡ್ಡಿಂಗ್ ಪ್ರಕ್ರಿಯೆ..!
2022ರ ಐಪಿಎಲ್ ಟೂರ್ನಿಯಲ್ಲಿ ಒಟ್ಟು ಹತ್ತು ತಂಡಗಳು ಕಾದಾಟ ನಡೆಸಲಿವೆ. ಈಗೀನ ಎಂಟು ತಂಡಗಳ ಜೊತೆ ಇನ್ನೆರಡು ತಂಡಗಳು ಸೇರ್ಪಡೆಗೊಳ್ಳಲಿವೆ.
ಹೊಸ ತಂಡಗಳು ಎಂಟ್ರಿ ಬಗ್ಗೆ ಈಗಾಗಲೇ ಬಿಸಿಸಿಐ ಪ್ಲಾನ್ ಮಾಡಿಕೊಂಡಿದೆ. ಹೊಸ ಎರಡು ತಂಡಗಳಿಗೆ ಮುಂದಿನ ಮೇ ತಿಂಗಳಿನಲ್ಲಿ ಬಿಡ್ಡಿಂಗ್ ಪ್ರಕ್ರಿಯೆ ನಡೆಯಲಿದೆ.
IPL teams for 2022
ಇದೇ ವೇಳೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜೈ ಶಾ ಅವರ ಸಭೆ ನಡೆಸಿ ಬಿಡ್ಡಿಂಗ್ ಪ್ರಕ್ರಿಯೆ ಹಾಗೂ ಇನ್ನಿತರ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ರು.
ಮೇ ತಿಂಗಳಿನಲ್ಲಿ ಹೊಸ ಫ್ರಾಂಚೈಸಿಗಳು ಅಂತಿಮಗೊಂಡ ಬಳಿಕ ತಂಡಗಳಿಗೂ ಪೂರ್ವ ಸಿದ್ಧತೆ ಮಾಡಿಕೊಳ್ಳಲು ಸಹಾಯವಾಗಲಿದೆ.
ಇದೇ ವೇಳೆ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಟೀಮ್ ಇಂಡಿಯಾವನ್ನು ಮಾರ್ಚ್ 14 ಭಾನುವಾರದಂದು ಪ್ರಕಟಿಸುವ ಸಾಧ್ಯತೆ ಇದೆ.
@IPL teams for 2022 #ipl #bcci #cricket