ಇದು ಚರಿತ್ರೆ ಸೃಷ್ಠಿಸುವ ಅವತಾರ… ಸನ್ಯಾಸಿ ಗೆಟಪ್ ನಲ್ಲಿ ಧೋನಿ…? ಏನಿದು ಧೋನಿ ಮಹಿಮೆ..?

1 min read
MS Dhoni’s new Monk Avatar saakshatv

ಇದು ಚರಿತ್ರೆ ಸೃಷ್ಠಿಸುವ ಅವತಾರ… ಸನ್ಯಾಸಿ ಗೆಟಪ್ ನಲ್ಲಿ ಧೋನಿ…? ಏನಿದು ಧೋನಿ ಮಹಿಮೆ..?

IPL 2021 MS Dhoni’s new Monk Avatar leaves fans wondering

MS Dhoni’s new Monk Avatar saakshatvಟೀಮ್ ಇಂಡಿಯಾದ ಮಾಜಿ ನಾಯಕ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಸದ್ಯ ಚೆನ್ನೈ ನಲ್ಲಿದ್ದಾರೆ.
14ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಸಿದ್ಧತೆ ಮಾಡಿಕೊಳ್ಳುತ್ತಿರುವ ಧೋನಿ ನೆಟ್ಸ್ ನಲ್ಲಿ ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ. ಈ ಬಾರಿಯ ಐಪಿಎಲ್ ನಲ್ಲಿ ಶ್ರೇಷ್ಠ ಪ್ರದರ್ಶನ ನೀಡಿ ಕಳೆದ ಬಾರಿಯ ಅಪಮಾನಕ್ಕ ಸೇಡು ತೀರಿಸಿಕೊಳ್ಳುವ ತವಕದಲ್ಲೂ ಇದ್ದಾರೆ.
ಆದ್ರೆ ಧೋನಿಯವರ ಫೋಟೋ ಒಂದು ಈಗ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗುತ್ತಿದೆ. ಇತ್ತೀಚೆಗೆ ಧೋನಿ ಸಾಮಾಜಿಕ ಜಾಲ ತಾಣದಿಂದ ಸ್ವಲ್ಪ ಅಂತರವನ್ನು ಕಾಯ್ದುಕೊಂಡಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ ಹೇಳಿದ ನಂತರ ಧೋನಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು ತೀರಾ ಕಡಿಮೆ. ಕಳೆದ ಲಾಕ್ ಡೌನ್ ವೇಳೆ ತನ್ನ ಫಾರ್ಮ್ ಹೌಸ್ ನಲ್ಲಿ ಕೃಷಿ ಚಟುವಟಿಕೆಗಳಲ್ಲಿ ತಮ್ಮನ್ನು ತಾನು ತೊಡಗಿಸಿಕೊಂಡಿದ್ದರು.

IPL 2021: MS Dhoni’s new Monk Avatar leaves fans wondering

ಆದ್ರೆ ಈ ಫೋಟೋ ಒಂದು ಬಾರಿ ವೈರಲ್ ಆಗುತ್ತಿದೆ. ಸನ್ಯಾಸಿಯಂತೆ ಕಾಣುವ ಈ ಫೋಟೋದಲ್ಲಿ ಧೋನಿ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಸ್ಟಾರ್ ಸ್ಪೋಟ್ಸ್ ತನ್ನ ಟ್ವಿಟರ್ ಖಾತೆಯಲ್ಲಿ ಈ ಫೋಟೋವನ್ನು ಹಂಚಿಕೊಂಡಿದೆ.
ಹಾಗಂತ ಧೋನಿಗೆ ಇದೇನೂ ಹೊಸತಲ್ಲ. ಒಂದೊಂದು ಬಾರಿ ಒಂದೊಂದು ಅವತಾರ, ಗೆಟಪ್ ನಲ್ಲಿ ಕಾಣಿಸಿಕೊಂಡು ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ. ಆದ್ರೆ ಈ ಫೋಟೋ ಮಾತ್ರ ಈ ಹಿಂದಿನ ಎಲ್ಲಾ ಫೋಟೋಗಳಿಗಿಂತ ಸ್ವಲ್ಪ ಮಟ್ಟಿಗೆ ಭಿನ್ನವಾಗಿದೆ.
ಒಂದಂತೂ ಸತ್ಯ.. ಧೋನಿಯ ಮನಸ್ಸನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ಅರ್ಥಮಾಡಿಕೊಳ್ಳಲು ಹೊರಟ್ರೆ ತಲೆಕೆಟ್ಟು ಹೊಗುತ್ತೆ. ಯಾವಾಗ ಏನು ನಿರ್ಧಾರ ತಗೊಳ್ಳುತ್ತಾರೆ ಅನ್ನೋದನ್ನು ಊಹಿಸಲು ಸಾಧ್ಯವಿಲ್ಲ.
MS Dhoni’s new Monk Avatar saakshatvಒಟ್ಟಾರೆ, ಒಂದು ಕಡೆ ಐಪಿಎಲ್ ನಲ್ಲಿ ಬಿಝಿಯಾಗಿರುವ ಧೋನಿಯ ಈ ಫೋಟೋ ಯಾಕೆ, ಯಾವಾಗ ಎಲ್ಲಿ ತೆಗೆದಿದ್ದಾರೆ ಅನ್ನೋ ಪ್ರಶ್ನೆಗೆ ಧೋನಿಯೇ ಉತ್ತರ ನೀಡಬೇಕು. ಸದ್ಯಕ್ಕಂತ ಧೋನಿಯ ಬಳಿ ಉತ್ತರ ಸಿಗಲ್ಲ. ಆದ್ರೂ ಧೋನಿಯ ಅಭಿಮಾನಿಗಳು ಆಶ್ಚರ್ಯಗೊಂಡಿರುವುದಂತೂ ಸುಳ್ಳಲ್ಲ.
ಒಂದು ಮೂಲಗಳ ಪ್ರಕಾರ ಮುಂಬರುವ ಐಪಿಎಲ್ ಟೂರ್ನಿಯ ಜಾಹಿರಾತಿಗಾಗಿ ಧೋನಿ ಈ ವೇಷದಲ್ಲಿ ಕಾಣಿಸಿಕೊಂಡಿದ್ದಾರೆ ಅಂತ ಹೇಳಲಾಗುತ್ತಿದೆ. ಸಮರ ಕಲೆಗಳ ತರಬೇತಿ ಶಿಬಿರದಂತೆ ಭಾಸವಾಗುತ್ತಿದೆ. ಒಟ್ಟಿನಲ್ಲಿ ಧೋನಿ ಚರಿತ್ರೆ ಸೃಷ್ಟಿಸುವ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಮಹಿಯ ಮಹಿಮೆಯನ್ನು ಬಲ್ಲವರು ಯಾರು ?

@MS Dhoni’s new Monk Avatar #ipl2021 #msdhoni @ipl #cricket #dhoni #saakshatv

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd