ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಗೆಲುವಿನ ಹಿನ್ನೆಲೆ ಭಾರತೀಯ ಜನತಾ ಪಾರ್ಟಿ (BJP) ಪ್ರತಿಕ್ರಿಯೆ ನೀಡಿದೆ. ತೆಲಂಗಾಣ ಬಿಜೆಪಿ ತನ್ನ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ, ನರೇಂದ್ರ ಮೋದಿ ಆಗಮನದಿಂದ ಮಮತಾ ಬ್ಯಾನರ್ಜಿ ಅವರ ಸಾಮ್ರಾಜ್ಯ ಪತನಗೊಂಡಿದೆ ಎಂದು ಹೇಳಿದೆ.
ಈ ಪೋಸ್ಟ್‌ನಲ್ಲಿ ರಾಮಾಯಣದ ಉದಾಹರಣೆ ನೀಡಿ, ಲಂಕೆಯಂತಹ ರಾಕ್ಷಸ ಸಾಮ್ರಾಜ್ಯ ನಿರ್ಮಿಸಿದರೂ, ಒಬ್ಬ ಹನುಮಾನ್ ಬಂದು ಅದನ್ನು ಸುಟ್ಟು ಹಾಕುತ್ತಾನೆ ಎಂದು ಉಲ್ಲೇಖಿಸಲಾಗಿದೆ. ಇದೇ ರೀತಿ, ರೌಡಿಸಂ ಹಾಗೂ ಹಿಂದೂಗಳ ಮೇಲಿನ ದೌರ್ಜನ್ಯದಿಂದ ನಿರ್ಮಿತವಾಗಿದ್ದ ಮಮತಾ ಆಡಳಿತಕ್ಕೆ ಈಗ ಅಂತ್ಯ ಬಂದಿದೆ ಎಂದು ಆರೋಪಿಸಲಾಗಿದೆ.
ಹಾಗೇ, ಬಂಗಾಳದಲ್ಲಿ ಮಹಿಳೆಯರು ಎದುರಿಸಿದ್ದ ಭಯ ಮತ್ತು ಅಸುರಕ್ಷತೆ ಈ ಚುನಾವಣಾ ಫಲಿತಾಂಶದಲ್ಲಿ ಪ್ರತಿಫಲಿಸಿದೆ ಎಂದು ಬಿಜೆಪಿ ಹೇಳಿಕೊಂಡಿದೆ. ಜನರ ಆಕ್ರೋಶವೇ ಈ ಗೆಲುವಿಗೆ ಕಾರಣವಾಗಿದೆ ಎಂದು ಪಕ್ಷವು ವಾದಿಸಿದೆ.
ಇದರಿಂದ ಬಂಗಾಳ ರಾಜಕೀಯ ಮತ್ತಷ್ಟು ಕಾವೇರಿದ್ದು, ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳ ನಡುವೆ ವಾಗ್ವಾದ ತೀವ್ರಗೊಂಡಿದೆ.








