ಬೆಳಗಾವಿ : ಕೊರೊನಾ ಸೋಂಕು ತಪಾಸಣೆ ವೇಳೆ ವೈದ್ಯರು ಗ್ರಾಮಸ್ಥರ ನಡುವೆ ವಾಗ್ವಾದ..!
ಬೆಳಗಾವಿ : ರಾಜ್ಯದಲ್ಲಿ ಕೊರೊನಾ 2ನೇ ಅಲೆ ಹಿನ್ನೆಲೆ , ಎಲ್ಲೆಡೆ ಪರೀಕ್ಷಾ ಪ್ರಮಾಣವನ್ನ ಹೆಚ್ಚಿಸಲಾಗಿದೆ. ಇದೇ ರೀತಿ ಬೆಳಗಾವಿ ರಾಮದುರ್ಗ ತಾಲೂಕಿನ ಕೊಳಚಿ ಗ್ರಾಮದಲ್ಲಿ ವೈದ್ಯರ ತಂಡ ಕೊರೊನಾ ಸೋಂಕಿನ ಪರೀಕ್ಷೆಗೆ ತೆರಳಿದ ವೇಳೆ 20 ಜನರಲ್ಲಿ ಸೋಂಕು ದೃಢವಾಗಿರುವುದು ಕಂಡುಬಂದಿದೆ. ಈ ಹಿನ್ನೆಲೆ ಗ್ರಾಮಸ್ಥರು ಹಾಗೂ ವೈದ್ಯರ ನಡುವೆ ವಾಗ್ವಾದ ಏರ್ಪಟ್ಟಿದೆ.
ಕೊರೊನಾ ತೊಲಗಿಲ್ಲ.. ಕಾದಿದೆ ಮಾರಿ ಹಬ್ಬ..!!
ಹೌದು ಗ್ರಾಮದಲ್ಲಿ ನೂರು ಜನರಿಗೆ ಕೊರೊನಾ ಸೋಂಕಿನ ಪರೀಕ್ಷೆ ನಡೆಸಲಾಗಿದ್ದು, ಇವರಲ್ಲಿ 20 ಜನರಿಗೆ ಸೋಂಕು ಧೃಢವಾಗಿತ್ತು. ಆದ್ರೆ ವರದಿಯಲ್ಲಿ ದೋಷವಿದೆ ಎಂದು ಗ್ರಾಮಸ್ಥರು ವೈದ್ಯರ ಜೊತೆ ಗಲಾಟೆ ಮಾಡಿಕೊಂಡಿದ್ಧಾರೆ. ಸೋಂಕಿತರಿಗೆ ಯಾವುದೇ ಟ್ರಾವಲ್ ಹಿಸ್ಟರಿ, ಲಕ್ಷಣ ಸಹ ಇಲ್ಲ. ಹೀಗಾಗಿ ವರದಿಯಲ್ಲೇ ದೋಷವಿದೆ ಎಂದು ವೈದ್ಯರ ಜೊತೆ ವಾಗ್ವಾದ ನಡಡೆಸಿದ್ದಾರೆ. ಡಾ. ನವೀನ್ ನಿಜಗಲಿ ನೇತೃತ್ವದಲ್ಲಿ ವೈದ್ಯಕೀಯ ತಂಡದ ಹಾಗೂ ಗ್ರಾಮಸ್ಥರ ನಡುವೆ ಗಲಾಟೆಯಾಗಿದ್ದು, ಆರೋಗ್ಯಾಧಿಕಾರಿಗಳು ಗ್ರಾಮಕ್ಕೆ ತೆರಳುವಾಗ ಪೊಲೀಸ್ ಭದ್ರತೆ ಕೋರಿದ್ದಾರೆ.
ಕಂಬಳ ಆಯೋಜಿಸಲು ಉಡುಪಿ, ದ.ಕ. ಜಿಲ್ಲೆಗಳಿಗೆ ತಲಾ 50 ಲಕ್ಷ ರೂ ಅನುದಾನ
ಟಾಟಾ ಮೋಟಾರ್ಸ್ ನ ಮೊದಲ ಆಂಬ್ಯುಲೆನ್ಸ್ ವಾಹನ ‘ಮ್ಯಾಜಿಕ್ ಎಕ್ಸ್ಪ್ರೆಸ್’ ಬಿಡುಗಡೆ
ಎಣ್ಣೆ ಕುಡಿಯೋಕೆ ಹಣ ಕೊಡದ ತಾಯಿಯನ್ನ ಕೊಂದ ಮಗ