ಚಂದ್ರನ ಮೇಲೆ ಯಶಸ್ವಿಯಾಗಿ ಲ್ಯಾಂಡ್ ಆದ ವಿಕ್ರಮ್ ಲ್ಯಾಂಡರ್ ಗೆ ಸೆನ್ಸಾರ್ ನೀಡಿದ್ದು ಬೆಳಗಾವಿ ವಿಜ್ಞಾನಿ
Belagavi scientist gave censor to Chandrayaan-3 Vikram lander…
ಬುಧವಾರ ಭಾರತ ಅದ್ಭುತ ಸಾಧನೆಯೊಂದನ್ನು ಮಾಡಿತು. ಇಡೀ ವಿಶ್ವವೇ ಭಾರತದತ್ತ ನೋಡುವಂತಾಯಿತು. ಅಮೆರಿಕ, ಚೀನಾ ಮತ್ತು ರಷ್ಯಾಕ್ಕೆ ಸಾಧ್ಯವಾಗದೆ ಇರುವುದನ್ನು ಭಾರತದ ವಿಜ್ಞಾನಿಗಳು ಸಾಧಿಸಿದ್ದಾರೆ. ಚಂದ್ರನ ದಕ್ಷಿಣ ಧ್ರುವದ ಮೇಲೆ ಚಂದ್ರಯಾನ-3ರ ವಿಕ್ರಮ ಲ್ಯಾಂಡರ್ ಸೇಫ್ ಆಗಿ ಲ್ಯಾಂಡ್ ಆಗುವ ಮೂಲಕ ಇತಿಹಾಸ ಸೃಷ್ಟಿಯಾಗಿದೆ. ಭಾರತೀಯ ಬಾಹ್ಯಾಕಾಶ ಸಂಸ್ಥೆ (ISRO) ವಿಜ್ಞಾನಿಗಳ ಕನಸು ನನಸಾಗಿದೆ. ಕೋಟ್ಯಾಂತರ ಭಾರತೀಯರ ಪ್ರಾರ್ಥನೆಗೆ ಫಲ ಸಿಕ್ಕಿದೆ.
ಈ ಚಂದ್ರಯಾನ-3 ರ ಯಶಸ್ಸಿನ ಹಿಂದೆ ಕರ್ನಾಟಕದ ಪಾಲು ಬಹಳ ಮಹತ್ವದ್ದಾಗಿದೆ. ಒಂದು ನಮ್ಮ ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಇಸ್ರೋ ಇರುವುದು. ಇನ್ನೊಂದು ಚಂದ್ರಯಾನ-3 ನೌಕೆಯ ಬಹು ಮುಖ್ಯ ಬಿಡಿ ಭಾಗಗಳು ಬೆಳಗಾವಿಯಲ್ಲಿ ಸಿದ್ಧವಾಗಿವೆ.
ಹೌದು ಕುಂದಾನಗರಿ ಬೆಳಗಾವಿಯ ವಿಜ್ಞಾನಿಯ ಶ್ರಮದಿಂದ ಚಂದ್ರಯಾನ-3 ಕ್ಕೆ ನೌಕೆಗೆ ಬೇಕಾದ ಬಿಡಿ ಭಾಗಗಳು ತಯಾರಾಗಿವೆ. ಹಾಗಿದ್ದರೆ ಯಾರು ಆ ವಿಜ್ಞಾನಿ, ಇಲ್ಲಿದೆ ಮಾಹಿತಿ
ಅಮೇರಿಕಾದಲ್ಲಿ ವಾಸವಾಗಿದ್ದ ಬೆಳಗಾವಿಯ ದೀಪಕ್ ಧಡೂತಿ ಅವರು ಮಾಜಿ ರಾಷ್ಟ್ರಪತಿ ದಿವಂಗತ ಎಪಿಜಿ ಅಬ್ದುಲ್ ಕಲಾಂ ಅವರ ಪ್ರೇರಣೆಯಿಂದ ಭಾರತಕ್ಕೆ ಬಂದರು. ನಂತರ ಬೆಳಗಾವಿಯಲ್ಲಿ ತಮ್ಮದೇ ಆದ ಸರ್ವೋಕಂಟ್ರೊಲ್ಸ್ ಏರೋಸ್ಪೇಸ್ ಮತ್ತು ಟೆಕ್ನಾಲಜಿ ಪ್ರವೇಟ್ ಲಿಮಿಟೆಡ್ ಎಂಬ ಹೆಸರಿನ ಸ್ವಂತ ಕಂಪನಿಯನ್ನು ಸ್ಥಾಪಿಸಿದರು. ಕಳೆದ ಇಪ್ಪತ್ತು ವರ್ಷದಿಂದ ಬೆಳಗಾವಿಯಲ್ಲಿ ಕಂಪನಿ ನಡೆಸುತ್ತಿರುವ ಇವರು ಸೆನ್ಸಾರ್ಗಳನ್ನು ಸಿದ್ದಪಡಿಸುತ್ತಾರೆ.
ಇನ್ನೂ ಈ ಚಂದ್ರಯಾನ-3ಗೆ ಕ್ರಯೋಜನಿಕ್ ಸೆನ್ಸಾರ್ ಸ್ಪೇಸ್ ಹೆಸರಿನ ಸೆನ್ಸಾರ್ ಸಿದ್ದಪಡಿಸಿ ಎರಡು ವರ್ಷದ ಹಿಂದೆಯೇ ದೀಪಕ್ ಧಡೂತಿ ನೀಡಿದ್ದರು. ಇದನ್ನು ಸೊಲಾರ ಪ್ಯಾನಲ್ ಎನರ್ಜಿ ಸಲುವಾಗಿ ಮತ್ತು ವಿಕ್ರಮ್ನ ಮೊಮೆಂಟ್ ಕಂಟ್ರೋಲ್ಸೆನ್ನಲ್ಲಿ ಇದನ್ನು ಬಳಕೆ ಮಾಡಲಾಗಿದೆ.
ಚಂದ್ರಯಾನ-3 ಗೆ ಮಹತ್ತರವಾದ ಕೊಡುಗೆ ನೀಡುವ ಮೂಲಕ ಕರ್ನಾಟಕ ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ.