ADVERTISEMENT
Friday, April 10, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Saaksha Special

ಚಂದ್ರಯಾನ-3 ವಿಕ್ರಮ್ ಲ್ಯಾಂಡರ್ ಗೆ ಸೆನ್ಸಾರ್ ನೀಡಿದ್ದು ಬೆಳಗಾವಿ ವಿಜ್ಞಾನಿ…

admin by admin
August 24, 2023
in Saaksha Special, Newsbeat, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

ಚಂದ್ರನ ಮೇಲೆ ಯಶಸ್ವಿಯಾಗಿ ಲ್ಯಾಂಡ್​ ಆದ ವಿಕ್ರಮ್ ಲ್ಯಾಂಡರ್ ಗೆ ಸೆನ್ಸಾರ್ ನೀಡಿದ್ದು ಬೆಳಗಾವಿ ವಿಜ್ಞಾನಿ

Belagavi scientist gave censor to Chandrayaan-3 Vikram lander…

Related posts

ವಿಷಕಾರಿ ಹಾವಿಗಿಂತ ಹೆಚ್ಚು ವಿಷ  ಅಪ್ಪ-ಮಗನ ತಲೆಯಲ್ಲಿದೆ: ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯ

ವಿಷಕಾರಿ ಹಾವಿಗಿಂತ ಹೆಚ್ಚು ವಿಷ ಅಪ್ಪ-ಮಗನ ತಲೆಯಲ್ಲಿದೆ: ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯ

April 9, 2026
ಮಾದರಿ ರಾಜ್ಯ ಕರ್ನಾಟಕ, ವಿಫಲವಾದ ಬಿಜೆಪಿ ತಂತ್ರ : ಗ್ಯಾರಂಟಿ ಹೆಸರಿನಲ್ಲಿ ಪ್ರಧಾನಿ ಸುಳ್ಳು ಹೇಳುತ್ತಿದ್ದಾರೆ – ಡಿಕೆ ಶಿವಕುಮಾರ್

ಮಾದರಿ ರಾಜ್ಯ ಕರ್ನಾಟಕ, ವಿಫಲವಾದ ಬಿಜೆಪಿ ತಂತ್ರ : ಗ್ಯಾರಂಟಿ ಹೆಸರಿನಲ್ಲಿ ಪ್ರಧಾನಿ ಸುಳ್ಳು ಹೇಳುತ್ತಿದ್ದಾರೆ – ಡಿಕೆ ಶಿವಕುಮಾರ್

April 9, 2026

ಬುಧವಾರ ಭಾರತ ಅದ್ಭುತ ಸಾಧನೆಯೊಂದನ್ನು ಮಾಡಿತು. ಇಡೀ ವಿಶ್ವವೇ ಭಾರತದತ್ತ ನೋಡುವಂತಾಯಿತು. ಅಮೆರಿಕ, ಚೀನಾ ಮತ್ತು ರಷ್ಯಾಕ್ಕೆ ಸಾಧ್ಯವಾಗದೆ ಇರುವುದನ್ನು ಭಾರತದ ವಿಜ್ಞಾನಿಗಳು ಸಾಧಿಸಿದ್ದಾರೆ. ಚಂದ್ರನ ದಕ್ಷಿಣ ಧ್ರುವದ ಮೇಲೆ ಚಂದ್ರಯಾನ-3ರ ವಿಕ್ರಮ ಲ್ಯಾಂಡರ್ ಸೇಫ್ ಆಗಿ ಲ್ಯಾಂಡ್ ಆಗುವ ಮೂಲಕ ಇತಿಹಾಸ ಸೃಷ್ಟಿಯಾಗಿದೆ. ಭಾರತೀಯ ಬಾಹ್ಯಾಕಾಶ ಸಂಸ್ಥೆ (ISRO) ವಿಜ್ಞಾನಿಗಳ ಕನಸು ನನಸಾಗಿದೆ. ಕೋಟ್ಯಾಂತರ ಭಾರತೀಯರ ಪ್ರಾರ್ಥನೆಗೆ ಫಲ ಸಿಕ್ಕಿದೆ.

ಈ ಚಂದ್ರಯಾನ-3 ರ ಯಶಸ್ಸಿನ ಹಿಂದೆ ಕರ್ನಾಟಕದ ಪಾಲು ಬಹಳ ಮಹತ್ವದ್ದಾಗಿದೆ. ಒಂದು ನಮ್ಮ ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಇಸ್ರೋ ಇರುವುದು. ಇನ್ನೊಂದು ಚಂದ್ರಯಾನ-3 ನೌಕೆಯ ಬಹು ಮುಖ್ಯ ಬಿಡಿ ಭಾಗಗಳು ಬೆಳಗಾವಿಯಲ್ಲಿ ಸಿದ್ಧವಾಗಿವೆ.

ಹೌದು ಕುಂದಾನಗರಿ ಬೆಳಗಾವಿಯ ವಿಜ್ಞಾನಿಯ‌ ಶ್ರಮದಿಂದ ಚಂದ್ರಯಾನ-3 ಕ್ಕೆ ನೌಕೆಗೆ ಬೇಕಾದ ಬಿಡಿ ಭಾಗಗಳು ತಯಾರಾಗಿವೆ. ಹಾಗಿದ್ದರೆ ಯಾರು ಆ ವಿಜ್ಞಾನಿ, ಇಲ್ಲಿದೆ ಮಾಹಿತಿ

ಅಮೇರಿಕಾದಲ್ಲಿ ವಾಸವಾಗಿದ್ದ ಬೆಳಗಾವಿಯ ದೀಪಕ್ ಧಡೂತಿ ಅವರು ಮಾಜಿ ರಾಷ್ಟ್ರಪತಿ ದಿವಂಗತ ಎಪಿಜಿ ಅಬ್ದುಲ್ ಕಲಾಂ ಅವರ ಪ್ರೇರಣೆಯಿಂದ ಭಾರತಕ್ಕೆ ಬಂದರು. ನಂತರ ಬೆಳಗಾವಿಯಲ್ಲಿ ತಮ್ಮದೇ ಆದ ಸರ್ವೋಕಂಟ್ರೊಲ್ಸ್ ಏರೋಸ್ಪೇಸ್ ಮತ್ತು ಟೆಕ್ನಾಲಜಿ ಪ್ರವೇಟ್ ಲಿಮಿಟೆಡ್ ಎಂಬ ಹೆಸರಿನ ಸ್ವಂತ ಕಂಪನಿಯನ್ನು ಸ್ಥಾಪಿಸಿದರು. ಕಳೆದ ಇಪ್ಪತ್ತು ವರ್ಷದಿಂದ ಬೆಳಗಾವಿಯಲ್ಲಿ ಕಂಪನಿ ನಡೆಸುತ್ತಿರುವ ಇವರು ಸೆನ್ಸಾರ್​ಗಳನ್ನು ಸಿದ್ದಪಡಿಸುತ್ತಾರೆ.

ಇನ್ನೂ ಈ ಚಂದ್ರಯಾನ-3ಗೆ ಕ್ರಯೋಜನಿಕ್ ಸೆನ್ಸಾರ್ ಸ್ಪೇಸ್‌ ಹೆಸರಿನ ಸೆನ್ಸಾರ್ ಸಿದ್ದಪಡಿಸಿ ಎರಡು ವರ್ಷದ ಹಿಂದೆಯೇ ದೀಪಕ್ ಧಡೂತಿ ನೀಡಿದ್ದರು. ಇದನ್ನು ಸೊಲಾರ ಪ್ಯಾನಲ್ ಎನರ್ಜಿ ಸಲುವಾಗಿ ಮತ್ತು ವಿಕ್ರಮ್​ನ ಮೊಮೆಂಟ್ ಕಂಟ್ರೋಲ್ಸೆನ್​ನಲ್ಲಿ ಇದನ್ನು ಬಳಕೆ ಮಾಡಲಾಗಿದೆ.

ಚಂದ್ರಯಾನ-3 ಗೆ ಮಹತ್ತರವಾದ ಕೊಡುಗೆ ನೀಡುವ ಮೂಲಕ ಕರ್ನಾಟಕ ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ.

Tags: ChandrayaanChandrayaan-3isro
ShareTweetSendShare
Join us on:

Related Posts

ವಿಷಕಾರಿ ಹಾವಿಗಿಂತ ಹೆಚ್ಚು ವಿಷ  ಅಪ್ಪ-ಮಗನ ತಲೆಯಲ್ಲಿದೆ: ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯ

ವಿಷಕಾರಿ ಹಾವಿಗಿಂತ ಹೆಚ್ಚು ವಿಷ ಅಪ್ಪ-ಮಗನ ತಲೆಯಲ್ಲಿದೆ: ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯ

by Shwetha
April 9, 2026
0

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪ್ರಚೋದನಾಕಾರಿ ಹೇಳಿಕೆಗಳ ವಿರುದ್ಧ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಬಿಜೆಪಿ ಮತ್ತು ಆರ್‍ಎಸ್‍ಎಸ್ ವಿರುದ್ಧ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಿ, ನಾಲಿಗೆಯನ್ನು...

ಮಾದರಿ ರಾಜ್ಯ ಕರ್ನಾಟಕ, ವಿಫಲವಾದ ಬಿಜೆಪಿ ತಂತ್ರ : ಗ್ಯಾರಂಟಿ ಹೆಸರಿನಲ್ಲಿ ಪ್ರಧಾನಿ ಸುಳ್ಳು ಹೇಳುತ್ತಿದ್ದಾರೆ – ಡಿಕೆ ಶಿವಕುಮಾರ್

ಮಾದರಿ ರಾಜ್ಯ ಕರ್ನಾಟಕ, ವಿಫಲವಾದ ಬಿಜೆಪಿ ತಂತ್ರ : ಗ್ಯಾರಂಟಿ ಹೆಸರಿನಲ್ಲಿ ಪ್ರಧಾನಿ ಸುಳ್ಳು ಹೇಳುತ್ತಿದ್ದಾರೆ – ಡಿಕೆ ಶಿವಕುಮಾರ್

by Shwetha
April 9, 2026
0

ಕರ್ನಾಟಕದ ರಾಜಕೀಯ ಅಖಾಡದಲ್ಲಿ ಮಾಸ್ಟರ್ ಸ್ಟ್ರಾಟಜಿಸ್ಟ್ ಎಂದೇ ಗುರುತಿಸಿಕೊಂಡಿರುವ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಇದೀಗ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧವೇ ನೇರ...

ಲಕ್ಷ್ಮಣ ಸವದಿಗೆ ಬಿಜೆಪಿ ಬಾಗಿಲು ಶಾಶ್ವತ ಬಂದ್: ಯತ್ನಾಳರನ್ನು ವಾಪಸ್ ಕರೆತರುವ ಜವಾಬ್ದಾರಿ ನಂದು – ರಮೇಶ್ ಜಾರಕಿಹೊಳಿ

ಲಕ್ಷ್ಮಣ ಸವದಿಗೆ ಬಿಜೆಪಿ ಬಾಗಿಲು ಶಾಶ್ವತ ಬಂದ್: ಯತ್ನಾಳರನ್ನು ವಾಪಸ್ ಕರೆತರುವ ಜವಾಬ್ದಾರಿ ನಂದು – ರಮೇಶ್ ಜಾರಕಿಹೊಳಿ

by Shwetha
April 9, 2026
0

ಅಥಣಿ: ಲಕ್ಷ್ಮಣ ಸವದಿ ಬಿಜೆಪಿಗೆ ಮರಳಿ ಬರುವ ಪ್ರಶ್ನೆಯೇ ಇಲ್ಲ, ಒಂದು ವೇಳೆ ಅವರು ಪ್ರಯತ್ನಿಸಿದರೂ ನಾವು ಸೇರಿಸಿಕೊಳ್ಳುವುದಿಲ್ಲ ಎಂದು ಮಾಜಿ ಸಚಿವ ಹಾಗೂ ಶಾಸಕ ರಮೇಶ್...

ರಾಜ್ಯದಲ್ಲಿ ಮಂಗನ ಕಾಯಿಲೆಗೆ ವೃದ್ಧ ಬಲಿ

ರಾಜ್ಯದಲ್ಲಿ ಮಂಗನ ಕಾಯಿಲೆಗೆ ವೃದ್ಧ ಬಲಿ

by Shwetha
April 9, 2026
0

ಮಲೆನಾಡು ಭಾಗದಲ್ಲಿ ಮತ್ತೆ ಮಂಗನ ಕಾಯಿಲೆಯ ಅಬ್ಬರ ಶುರುವಾಗಿದೆ. ಈ ಮಾರಕ ಕಾಯಿಲೆಗೆ ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಮನ್ಮನೆ ಗ್ರಾಮದ ನಿವಾಸಿ...

ಇರಾನ್–ಅಮೆರಿಕಾ ಸೀಸ್‌ಫೈರ್: ಚೀನಾದ ತಂತ್ರಗಾರಿಕೆ ಹಿನ್ನಲೆ

ಇರಾನ್–ಅಮೆರಿಕಾ ಸೀಸ್‌ಫೈರ್: ಚೀನಾದ ತಂತ್ರಗಾರಿಕೆ ಹಿನ್ನಲೆ

by Shwetha
April 9, 2026
0

ಇರಾನ್–ಅಮೆರಿಕಾ ಸೀಸ್‌ಫೈರ್ ವಿಚಾರದಲ್ಲಿ ನಿಜವಾದ ಹಿನ್ನಲೆ ಶಕ್ತಿ ಚೀನಾ ಆಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆರಂಭದಲ್ಲಿ ಮಾತುಕತೆಗೆ ಸಮ್ಮತಿಸದ ಇರಾನ್ ಅನ್ನು ಬೀಜಿಂಗ್ ಮನವೊಲಿಸಿದೆ ಎನ್ನಲಾಗುತ್ತಿದೆ. ಚೀನಾ,...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram